
Sidlaghatta : ಮಕ್ಕಳಲ್ಲಿ ದೇಶಸೇವೆಯ ಮನೋಭಾವ ಬೆಳೆಸುವ ನಿಟ್ಟಿನಲ್ಲಿ ಪೋಷಕರು ಹಾಗೂ ಶಿಕ್ಷಕರು ಶ್ರಮಿಸಿದರೆ, ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಕೊಡುಗೆ ನೀಡುವ ಜವಾಬ್ದಾರಿಯುತ ನಾಗರಿಕರನ್ನು ರೂಪಿಸಲು ಸಾಧ್ಯ ಎಂದು ಸಿಟಿಜನ್ ಶಾಲೆಯ ಅಧ್ಯಕ್ಷ ರಾಮಚಂದ್ರ ರೆಡ್ಡಿ ಹೇಳಿದರು. ನಗರದ ಸಿಟಿಜನ್ ಶಾಲೆಯಲ್ಲಿ ಶನಿವಾರ ನಡೆದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ, ರಾಜ್ಯಪಾಲರ ಪ್ರಶಸ್ತಿಗೆ ಭಾಜನರಾದ ಶಾಲೆಯ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳನ್ನು ಅಭಿನಂದಿಸಿ ಅವರು ಮಾತನಾಡಿದರು.
“ಮಕ್ಕಳಿಗೆ ಶಿಕ್ಷಣದ ಜತೆಗೆ ಶಿಸ್ತು, ಸೇವಾ ಮನೋಭಾವ, ದೇಶಪ್ರೇಮ ಹಾಗೂ ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸುವುದು ಅಗತ್ಯ. ಇಂತಹ ಮೌಲ್ಯಗಳುಳ್ಳ ವಿದ್ಯಾರ್ಥಿಗಳೇ ಭವಿಷ್ಯದಲ್ಲಿ ದೇಶದ ಅಭಿವೃದ್ಧಿಗೆ ಶಕ್ತಿಯಾಗುತ್ತಾರೆ” ಎಂದು ಅವರು ಹೇಳಿದರು.
ಈ ಬಾರಿ 10 ವಿದ್ಯಾರ್ಥಿಗಳಿಗೆ ಪ್ರಶಸ್ತಿ
ಕಳೆದ ವರ್ಷ ಶಾಲೆಯ ಮೂವರು ವಿದ್ಯಾರ್ಥಿಗಳು ರಾಜ್ಯಪಾಲರ ಪ್ರಶಸ್ತಿಗೆ ಪಾತ್ರರಾಗಿದ್ದರು. ಈ ಬಾರಿ 10 ವಿದ್ಯಾರ್ಥಿಗಳು ಪ್ರಶಸ್ತಿ ಪಡೆದಿರುವುದು ಶಾಲೆಗೆ ಹೆಮ್ಮೆಯ ಸಂಗತಿಯಾಗಿದೆ ಎಂದು ಅವರು ತಿಳಿಸಿದರು. ಪ್ರಶಸ್ತಿ ಪಡೆದ ವಿದ್ಯಾರ್ಥಿಗಳು ಇದೇ ತಿಂಗಳ 27ರಿಂದ 31ರವರೆಗೆ ನಡೆಯಲಿರುವ ರಾಜ್ಯಪಾಲರ ಪ್ರಶಸ್ತಿ ಶಿಬಿರದಲ್ಲಿ ಭಾಗವಹಿಸಲಿದ್ದು, ಎಲ್ಲ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಸ್ವಾತಂತ್ರ್ಯೋತ್ಸವದ ಅಂಗವಾಗಿ ವಿದ್ಯಾರ್ಥಿಗಳು ದೇಶಭಕ್ತಿ ಗೀತೆಗಳು ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿದರು. ರಾಜ್ಯಪಾಲರ ಪ್ರಶಸ್ತಿ ಪಡೆದ ವಿದ್ಯಾರ್ಥಿಗಳಾದ ಅಕ್ಷಜ್, ನೀರಜ್, ಚಿರಂತ್, ದೀಕ್ಷಿತ್, ಮನೋಜ್ ಎಂ.ವಿ., ಮನೋಜ್ ಸಿ., ಗೌರೀಶ್, ಸುಹಾಸ್, ಕ್ರಿಷ್ಣ ಸೇರಿದಂತೆ 10 ವಿದ್ಯಾರ್ಥಿಗಳನ್ನು ಈ ಸಂದರ್ಭದಲ್ಲಿ ಅಭಿನಂದಿಸಲಾಯಿತು.
ಶಾಲೆಯ ಪ್ರಾಂಶುಪಾಲ ಶಿವಣ್ಣ ಎನ್., ಮುಖ್ಯೋಪಾಧ್ಯಾಯ ಸತೀಶ್ ಎನ್., ಸ್ಕೌಟ್ಸ್ ಶಿಕ್ಷಕ ನಾಗರಾಜು ಆರ್., ಶಿಕ್ಷಕರಾದ ಸತ್ಯಜ್ಯೋತಿ, ಮೀನಾಕ್ಷಿ, ಹರ್ಷಿತಾ, ಲಕ್ಷ್ಮಿ ನವ್ಯ, ಅನಿತಾ, ಶ್ರುತಿ, ನಳಿನಿ, ರೂಪ, ಶಶಿಕಲಾ, ದೀಪ ಉಪಸ್ಥಿತರಿದ್ದರು.
In English: Citizen School in Sidlaghatta marked Independence Day by felicitating 10 of its Scouts and Guides students who won the Governor’s Award this year, up from 3 last year. School president Ramachandra Reddy said discipline and civic values built in students today become strength for the nation’s development; the award recipients will attend a Governor’s Award camp August 27-31.
ಇದೇ ಮಾದರಿಯ ಶಿಡ್ಲಘಟ್ಟ ತಾಲ್ಲೂಕಿನ 8 ಬುಲ್‌ಬುಲ್, ಸ್ಕೌಟ್ಸ್‌ಗಳಿಗೆ ರಾಜ್ಯಪಾಲರಿಂದ ಪುರಸ್ಕಾರ ಕುರಿತ ವರದಿಯನ್ನೂ ನೋಡಿ.