ಸಾರ್ವಜನಿಕರಿಂದ ಬಂದ ದೂರಿನ ಹಿನ್ನೆಲೆಯಲ್ಲಿ ತಾಲ್ಲೂಕಿನ ಸಾದಲಿಯಲ್ಲಿನ ನಕಲಿ ಕ್ಲಿನಿಕ್ ಗಳ ಮೇಲೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಇಂದಿರಾ ಕಬಾಡೆ ನೇತೃತ್ವದಲ್ಲಿ ಸೋಮವಾರ ತಾಲ್ಲೂಕು ಆರೋಗ್ಯಾಧಿಕಾರಿ ಮತ್ತು ತಂಡ ದಾಳಿ ನಡೆಸಿ ನಾಲ್ಕು ಕ್ಲಿನಿಕ್ ಗಳಿಗೆ ಬೀಗ ಜಡಿದಿದ್ದಾರೆ.
ಪಾವಗಡದಿಂದ ಬಂದು ಗೋವರ್ಧನ್ ಎಂಬುವವರು ಸಂಜೀವಿನಿ ಕ್ಲಿನಿಕ್ ನಡೆಸುತ್ತಿದ್ದರು. ಜಿಲ್ಲಾ ಆರೋಗ್ಯಾಧಿಕಾರಿ ಡಾ.ಇಂದಿರಾ ಕಬಾಡೆ ಅವರು ಮತ್ತು ತಂಡ ದಾಳಿ ನಡೆಸಿ ಬೀಗ ಜಡಿದರು. ಬಸವರಾಜು ಎಂಬುವವರು ನಡೆಸುತ್ತಿದ್ದ ಕ್ಲಿನಿಕ್, ಶ್ರೀನಿವಾಸರೆಡ್ಡಿ ಎಂಬುವವರು ಔಷಧಿ ಅಂಗಡಿಯ ಮೇಲೆ ನಡೆಸುತ್ತಿದ್ದ ಕ್ಲಿನಿಕ್, ಸಾದಲಿ ಸರ್ಕಾರಿ ಆಸ್ಪತ್ರೆ ಪಕ್ಕದ ಸಂಜನಾ ಕ್ಲಿನಿಕ್ ಗಳನ್ನು ಬೀಗ ಜಡಿದು, ಎಚ್ಚರಿಕೆ ನೀಡಿದ್ದಾರೆ.
“ತಮ್ಮ ವಿದ್ಯಾರ್ಹತೆಗೆ ತಕ್ಕಂತೆ ವೈದ್ಯಕೀಯ ಸೇವೆಯನ್ನು ಸಲ್ಲಿಸಬೇಕು. ಆಯುಷ್, ಯುನಾನಿ, ಅಲೋಪತಿ ಯಾವುದಿದ್ದರೆ ಅದನ್ನು ಅನುಮತಿ ಪಡೆದು ಸೇವೆ ಸಲ್ಲಿಸಬಹುದಾಗಿದೆ. ತಾಲ್ಲೂಕಿನಾದ್ಯಂತ ಮುಂದಿನ ದಿನಗಳಲ್ಲಿ ಧಾಳಿ ನಡೆಸಲಿದ್ದು, ಸರ್ಕಾರದ ಮಾನದಂಡಗಳ ಉಲ್ಲಂಘನೆಯಾಗಿರುವುದು ಕಂಡುಬಂದಲ್ಲಿ ಕ್ರಮ ಕೈಗೊಳ್ಳಲಾಗುವುದು. ಎಸ್ಸೆಸ್ಸೆಲ್ಸಿ ಓದಿರುವ ಗೋವರ್ಧನ್, ಪಿಯುಸಿ ಫೇಲ್ ಆಗಿರುವ ಶ್ರೀನಿವಾಸರೆಡ್ಡಿ, ಸಾದಲಿಯಲ್ಲಿ ವೈದ್ಯರೆಂದು ಫಲಕ ಹಾಕಿಕೊಂಡು ಚಿಕಿತ್ಸೆ ನೀಡುತ್ತಿದ್ದರು. ಅವರ ಕ್ಲಿನಿಕ್ ಗಳನ್ನು ಮುಚ್ಚಿಸಿದ್ದೇವೆ” ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ ತಿಳಿಸಿದರು.
ಆರೋಗ್ಯ ನಿರೀಕ್ಷಕ ದೇವರಾಜ್, ಸಾದಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಡಾ.ಶ್ರೀನಾಥ್ ಹಾಜರಿದ್ದರು.
Like, Follow, Share ನಮ್ಮ ಶಿಡ್ಲಘಟ್ಟ
Facebook: https://www.facebook.com/sidlaghatta
Instagram: https://www.instagram.com/sidlaghatta
Telegram: https://t.me/Sidlaghatta
Twitter: https://twitter.com/hisidlaghatta
ಸುದ್ದಿಗಳು ಹಾಗೂ ಮಾಹಿತಿಗಾಗಿ ಸಂಪರ್ಕಿಸಿ:
WhatsApp: https://wa.me/917406303366?text=Hi