27.1 C
Sidlaghatta
Sunday, February 22, 2026

ಜಿಲ್ಲಾ ಬಾಲಕರ ಕ್ರೀಡಾ ವಸತಿ ನಿಲಯ ಪ್ರವೇಶಕ್ಕೆ ಫೆ.24ರಂದು ಶಿಡ್ಲಘಟ್ಟದಲ್ಲಿ ಆಯ್ಕೆ ಪ್ರಕ್ರಿಯೆ

- Advertisement -
- Advertisement -

Sidlaghatta : ಜಿಲ್ಲಾ ಕ್ರೀಡಾ ವಸತಿ ನಿಲಯಕ್ಕೆ 2026-27ನೇ ಸಾಲಿಗೆ ಪ್ರವೇಶಕ್ಕಾಗಿ ಫೆ.24ರಂದು ಮಂಗಳವಾರ ನಗರದ ನೆಹರೂ ಕ್ರೀಡಾಂಗಣದಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಕ್ರೀಡಾ ವಸತಿ ಶಾಲೆಯ 5ನೇ ತರಗತಿ ಪ್ರವೇಶಕ್ಕೆ ಹಾಕಿ ಮತ್ತು ಫುಟ್ ಬಾಲ್ ಪ್ರತಿಭಾನ್ವಿತ ಕ್ರೀಡಾ ಪಟುಗಳನ್ನು ಆಯ್ಕೆ ಮಾಡಲಾಗುವುದು.

ಫೆ.24ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 4.30ರವರೆಗೂ ಕ್ರೀಡಾ ಪಟುಗಳ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಆಸಕ್ತ ಮತ್ತು ಅರ್ಹ ಪ್ರತಿಭಾವಂತ ಕ್ರೀಡಾಪಟುಗಳು ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಬಹುದು.

ಜಿಲ್ಲಾಮಟ್ಟದಲ್ಲಿ ಅಂತಿಮ ಆಯ್ಕೆ ಮಾರ್ಚ್ 2ರಂದು ಜಿಲ್ಲಾ ಕೇಂದ್ರದಲ್ಲಿನ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಅಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 4.30ರವರೆಗೂ ನಡೆಯಲಿದೆ.

ಅರ್ಹತೆಗಳೇನು :

2015ರ ಜೂನ್ 1ರ ನಂತರ ಜನಿಸಿದವರಾಗಿದ್ದು 2026 ಜೂನ್ 1ರಂದು 11 ವರ್ಷ ಮೀರಿರಬಾರದು. ಪ್ರಸ್ತುತ ವರ್ಷ 4ನೇ ತರಗತಿಯಲ್ಲಿ ಓದುತ್ತಿದ್ದು 2026-27ನೇ ಶೈಕ್ಷಣಿಕ ಸಾಲಿಗೆ 5ನೇ ತರಗತಿಗೆ ಪ್ರವೇಶ ಪಡೆಯುವ ಅರ್ಹತೆ ಹೊಂದಿರಬೇಕು.

ಹಾಕಿ ವಿಭಾಗಕ್ಕೆ ಕನಿಷ್ಠ 142 ಸೆಂಟಿ ಮೀಟರ್ ಹಾಗೂ ಫುಟ್ ಬಾಲ್ ವಿಭಾಗದಲ್ಲಿ 140 ಸೆಂಟಿ ಮೀಟರ್ ಎತ್ತರ ಇರಬೇಕು. ಆಸಕ್ತ ಮತ್ತು ಅರ್ಹ ಪ್ರತಿಭಾವಂತ ಹಾಕಿ ಮತ್ತು ಫುಟ್ ಬಾಲ್ ಕ್ರೀಡಾಪಟುಗಳು ಆಧಾರ್ ಕಾರ್ಡ್, ಪಾಸ್‌ಪೋರ್ಟ್ ಸೈಜಿನ 2 ಭಾವಚಿತ್ರಗಳು, ಜನ್ಮ ದಿನಾಂಕವನ್ನು ದೃಢಪಡಿಸುವ ದಾಖಲೆಗಳನ್ನು ತರಬೇಕು.

ಯಾವುದೆ ರೀತಿಯ ಪ್ರಯಾಣ ಭತ್ಯೆ, ದಿನ ಭತ್ಯೆ ನೀಡುವುದಿಲ್ಲ. ದೈಹಿಕ ಸಾಮರ್ಥ್ಯ, ಚಾಕ ಚಕ್ಯತೆ, ಸಹಿಷ್ಣುತೆ, ಕುಶಲತೆ ಸೇರಿದಂತೆ ಹಾಕಿ ಮತ್ತು ಫುಟ್ ಬಾಲ್ ಕ್ರೀಡೆಗೆ ಅಗತ್ಯವಾದ ಅರ್ಹತಾ ಪರೀಕ್ಷೆ ನಡೆಸಲಿದ್ದು ಶೇ 50ಕ್ಕೂ ಹೆಚ್ಚು ಅಂಕಗಳಿಸಿದವರು ಮಾತ್ರ 2ನೇ ಹಂತದ ಪ್ರವೇಶ ಪರೀಕ್ಷೆಯಲ್ಲಿ ಭಾಗವಹಿಸಬಹುದು.

ಹೆಚ್ಚಿನ ವಿವರಗಳಿಗೆ 8197572656, 7204737892 ಸಂಪರ್ಕಿಸುವಂತೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ಕೋರಿದ್ದಾರೆ.

District Sports Residential School Admission

Sidlaghatta WhatsApp Channel Group

For Daily Updates WhatsApp ‘HI’ to 7406303366

For Daily Updates

WhatsApp 'HI' to 7406303366

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!