Sidlaghatta : ತಾಲೂಕಿನ ಬಳುವನಹಳ್ಳಿ ಗ್ರಾಮದಲ್ಲಿ ಪಾಳುಬಿದ್ದ ಕಲ್ಲಿನ ಕಟ್ಟಡದ ಸುಮಾರು 60×30 ಅಡಿ ಆಳದ, ಮೆಟ್ಟಿಲುಗಳಿಲ್ಲದ ತೆರೆದ ಬಾವಿಗೆ ಸಾಕು ನಾಯಿಯೊಂದು ಆಕಸ್ಮಿಕವಾಗಿ ಕಾಲು ಜಾರಿ ಬಿದ್ದ ಘಟನೆ ನಡೆದಿದೆ.
In English: A pet dog accidentally fell into a 60×30 feet deep, stepless open well near a dilapidated stone structure in Baluvanahalli village, Sidlaghatta taluk. Fire brigade personnel rushed to the spot and, using ropes and a harness belt, safely brought the dog back alive — the latest in a series of well-rescue operations in the taluk.
ನಾಯಿ ಬಾವಿಗೆ ಬಿದ್ದಿರುವ ವಿಷಯ ತಿಳಿದ ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ರಕ್ಷಣಾ ಕಾರ್ಯಾಚರಣೆ ಕೈಗೊಂಡರು. ಹಗ್ಗ ಹಾಗೂ ಹಾರ್ನೆಸ್ ಬೆಲ್ಟ್ಗಳ ಸಹಾಯದಿಂದ ಬಾವಿಗೆ ಇಳಿದ ಸಿಬ್ಬಂದಿ, ನಾಯಿಯನ್ನು ಜೀವಂತವಾಗಿ ಸುರಕ್ಷಿತವಾಗಿ ಮೇಲಕ್ಕೆ ಕರೆತಂದು ಮಾಲೀಕರಿಗೆ ಒಪ್ಪಿಸಿದರು.
ಅಗ್ನಿಶಾಮಕ ದಳದ ಸಿಬ್ಬಂದಿ ಸಂದೀಪ್ ಬಿ.ಎನ್. ಅವರ ಕಾರ್ಯಕ್ಕೆ ಸ್ಥಳದಲ್ಲಿದ್ದ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು.
ರಕ್ಷಣಾ ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಸಿಬ್ಬಂದಿಗಳಾದ ರಾಮಾಂಜಿನಪ್ಪ ಕೆ.ಎಂ., ಸಂದೀಪ್ ಬಿ.ಎನ್., ವೆಂಕಟೇಶ್ ಜಿ., ನಾಗರಾಜು ಹಾಗೂ ಅರುಣ್ ಕೆ. ಅವರು ಭಾಗವಹಿಸಿದ್ದರು.

