ರಸಗೊಬ್ಬರ ಮಾರಾಟ ಮೊಬೈಲ್ ಆ್ಯಪ್ ಡಿಸೆಂಬರ್ 1ರಿಂದ ಜಾರಿ: ನ.19ರಂದು ರೈತರಿಗೆ ತರಬೇತಿ

Officials and a farmer holding ragi seed packets in front of the Raitha Samparka Kendra building (file photo)

Sidlaghatta : ರೈತರಿಗೆ ರಸಗೊಬ್ಬರ ಸುಲಭವಾಗಿ, ಪಾರದರ್ಶಕವಾಗಿ ಹಾಗೂ ವಿಶ್ವಾಸಾರ್ಹವಾಗಿ ಸಿಗುವಂತೆ ಮಾಡಲು ಭಾರತ ಸರ್ಕಾರ ಅಭಿವೃದ್ಧಿಪಡಿಸಿರುವ ರಸಗೊಬ್ಬರ ಮಾರಾಟ ಚೌಕಟ್ಟು (Framework for Fertilizer Sales – FFS) ಮೊಬೈಲ್ ಆ್ಯಪ್ ಡಿಸೆಂಬರ್ 1ರಿಂದ ತಾಲ್ಲೂಕಿನಲ್ಲಿ ಜಾರಿಯಾಗಲಿದೆ.

ತರಬೇತಿ ಯಾವಾಗ, ಎಲ್ಲಿ?

ಈ ಆ್ಯಪ್ ಕುರಿತು ತರಬೇತಿ ಮತ್ತು ಅರಿವು ಮೂಡಿಸುವ ಕಾರ್ಯಕ್ರಮವನ್ನು ನವೆಂಬರ್ 19ರಂದು ಬೆಳಿಗ್ಗೆ 11 ಗಂಟೆಗೆ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಕಚೇರಿ ವರದನಾಯಕನಹಳ್ಳಿ ಗೇಟ್ ಬಳಿ ಇದೆ.

ಈ ವ್ಯವಸ್ಥೆಯಿಂದ ರೈತರಿಗೆ ರಸಗೊಬ್ಬರ ಪಡೆಯುವ ಪ್ರಕ್ರಿಯೆ ಇನ್ನಷ್ಟು ಸರಳ ಮತ್ತು ಅನುಕೂಲಕರವಾಗಲಿದೆ ಎಂದು ಕೃಷಿ ಇಲಾಖೆ ತಿಳಿಸಿದೆ. ತರಬೇತಿ ಕಾರ್ಯಕ್ರಮದಲ್ಲಿ ತಪ್ಪದೇ ಭಾಗವಹಿಸುವಂತೆ ಇಲಾಖೆ ಕೋರಿದೆ.

ರೈತರು ಈಗಲೇ ಮಾಡಬೇಕಾದದ್ದು

ಡಿಸೆಂಬರ್ 1ರಿಂದ ಡಿಎಪಿ, ಯೂರಿಯಾ ಸೇರಿದಂತೆ ಎಲ್ಲ ಬಗೆಯ ರಸಗೊಬ್ಬರ ಖರೀದಿಗೆ ರೈತರ ಎಫ್‌.ಐ.ಡಿ ಕಡ್ಡಾಯವಾಗಲಿದೆ ಎಂದು ಸಹಾಯಕ ನಿರ್ದೇಶಕರು ತಾಲ್ಲೂಕು ಪಂಚಾಯಿತಿ ಸಭೆಯಲ್ಲಿ ಈಗಾಗಲೇ ತಿಳಿಸಿದ್ದಾರೆ. ಆದ್ದರಿಂದ ರೈತರು ಆಧಾರ್ ಕಾರ್ಡ್, ಪಹಣಿ, ಬ್ಯಾಂಕ್ ಪಾಸ್‌ಬುಕ್ ಹಾಗೂ ಆಧಾರ್‌ಗೆ ಜೋಡಣೆಯಾಗಿರುವ ಮೊಬೈಲ್ ಸಂಖ್ಯೆಯೊಂದಿಗೆ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಎಫ್‌.ಐ.ಡಿ ಮಾಡಿಸಿಕೊಳ್ಳುವುದು ಅಗತ್ಯ.

ಸಂಬಂಧಿತ ಸುದ್ದಿ: ಡಿಸೆಂಬರ್ 1ರಿಂದ ರಸಗೊಬ್ಬರ ಖರೀದಿಗೆ ಎಫ್‌.ಐ.ಡಿ ಕಡ್ಡಾಯ: ರೈತರು ಯಾವ ದಾಖಲೆ ತರಬೇಕು? | ರಸಗೊಬ್ಬರ, ಬಿತ್ತನೆ ಬೀಜ ಸಮರ್ಪಕ ಲಭ್ಯ; ಬೆಳೆ ವಿಮೆ ಮಾಡಿಸಿಕೊಳ್ಳಲು ರೈತರಿಗೆ ಸೂಚನೆ

Sidlaghatta WhatsApp Channel Group

For Daily Updates WhatsApp ‘HI’ to 7406303366

Be a reporter

ಊರಿನ ಸುದ್ದಿ, ಫೋಟೋ ಕಳುಹಿಸಿ.

Report an error in this story

Nearby

ಇದನ್ನೂ ಓದಿ