Home News ಅಗ್ನಿ ಶಾಮಕದಳ ವಾಹನದ ಮೂಲಕ ಕ್ರಿಮಿನಾಶಕಗಳ ಸಿಂಪಡಣೆ

ಅಗ್ನಿ ಶಾಮಕದಳ ವಾಹನದ ಮೂಲಕ ಕ್ರಿಮಿನಾಶಕಗಳ ಸಿಂಪಡಣೆ

0
Fire Department Municipality Spray Insecticide Sidlaghatta Streets

ಕೊರೊನಾ ವಿರುದ್ಧದ ಹೋರಾಟದಲ್ಲಿ ನಗರಸಭೆಯವರೊಂದಿಗೆ ಅಗ್ನಿ ಶಾಮಕದಳದವರೂ ಕೈಜೋಡಿಸಿದ್ದಾರೆ. ನಗರದ ಪ್ರಮುಖ ರಸ್ತೆಗಳು, ಫಿಲೇಚರ್ ಕ್ವಾಟರ್ಸ್, ಪೊಲೀಸ್ ಕ್ವಾಟರ್ಸ್ ಸೇರಿದಂತೆ ಅಗ್ನಿ ಶಾಮಕದಳದ ವಾಹನ ಓಡಾಡಬಲ್ಲ ರಸ್ತೆಗಳ ಬದಿಯಲ್ಲಿ ಕ್ರಿಮಿನಾಶಕವನ್ನು ಸಿಂಪಡನೆ ಮಾಡಲಾಗುತ್ತಿದೆ.

ಕಳೆದ ಮೂರು ದಿನಗಳಿಂದ ಅಗ್ನಿ ಶಾಮಕದಳದ ವಾಹನದ ಮೂಲಕ ಕ್ರಿಮಿನಾಶಕವನ್ನು ಸಿಂಪಡನೆ ಮಾಡುತ್ತಿದ್ದು, ಇದು ಇನ್ನೂ ಹಲವಾರು ದಿನಗಳು ನಗರ ವ್ಯಾಪ್ತಿಯಲ್ಲಿ ಎಲ್ಲಾ ದೊಡ್ಡ ರಸ್ತೆಗಳ ಬದಿಯಲ್ಲಿಯೂ ಆದ್ಯತೆ ಮೇರೆಗೆ ಸಿಂಪಡನೆ ಕಾರ್ಯ ಮಾಡಲಾಗುತ್ತಿದೆ. ಚಿಕ್ಕರಸ್ತೆಗಳು, ಗಲ್ಲಿಗಳಲ್ಲಿ ಟಿಲ್ಲರ್ ಗಳ ಮೂಲಕ ನಗರಸಭೆಯವರು ಸಿಂಪಡನೆ ಕಾರ್ಯ ನಡೆಸಿದ್ದಾರೆ.

“ಒಂದು ಬಾರಿ ಟ್ಯಾಂಕ್ ನಲ್ಲಿ ನಾಲ್ಕೂವರೆ ಸಾವಿರ ಲೀಟರ್ ನೀರು ಹಿಡಿಸುತ್ತದೆ. ಅದರಲ್ಲಿ ನಗರಸಭೆಯವರು ನೀಡುವ ಸುಮಾರು 20 ಲೀಟರಿನಷ್ಟು ಕ್ರಿಮಿನಾಶಕವನ್ನು ಬೆರೆಸಲಾಗುತ್ತದೆ. ಅವರು ಹೇಳುವ ಸ್ಥಳಗಳಲ್ಲಿ ಸಿಂಪಡನೆ ಮಾಡುತ್ತಿದ್ದೇವೆ. ನಮ್ಮ ಮೇಲಧಿಕಾರಿಗಳು ನಮಗೆ ಅರ್ಧ ದಿನ ಕೊರೊನಾ ವಿರುದ್ಧದ ಹೋರಾಟದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವಂತೆ ಸೂಚನೆ ನೀಡಿದ್ದಾರೆ. ಅದರಂತೆ ಬೆಳಗಿನ ಹೊತ್ತಿನಲ್ಲಿ ಸಿಂಪಡನೆ ಕಾರ್ಯ ಮಾಡುತ್ತಿದ್ದೇವೆ. ಬೇಸಿಗೆಯಾದ್ದರಿಂದ ಎಲ್ಲಾದರೂ ಬೆಂಕಿ ಅನಾಹುತವಾದರೆ ಹೋಗಲು ಕೂಡ ಸಿದ್ಧತೆ ಮಾಡಿಕೊಂಡಿದ್ದೇವೆ” ಎಂದು ಅಗ್ನಿ ಶಾಮಕ ಠಾಣಾಧಿಕಾರಿ ಕೆ.ರಾಮಕೃಷ್ಣ ತಿಳಿಸಿದರು.

ಈ ಸಿಂಪಡನೆಯ ಕಾರ್ಯದಲ್ಲಿ ಅಗ್ನಿ ಶಾಮಕ ಸಿಬ್ಬಂದಿ ವಿ.ಆರ್.ಶ್ರೀನಿವಾಸ್, ಕನಕಪ್ಪ, ಪಿ.ಆರ್.ಶ್ರೀನಿವಾಸ್, ಕೆ.ವಿ.ಹರೀಶ್, ಆನಂದಪ್ಪ ಭಾಗಿಯಾಗಿದ್ದಾರೆ.

Follow ನಮ್ಮ ಶಿಡ್ಲಘಟ್ಟ on

Facebook: https://www.facebook.com/sidlaghatta

Twitter: https://twitter.com/hisidlaghatta

Instagram: https://www.instagram.com/sidlaghatta

Telegram: https://t.me/Sidlaghatta

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version