Home News ಗಂಗಾಜಲ ವಿತರಣಾ ಕಾರ್ಯಕ್ರಮ

ಗಂಗಾಜಲ ವಿತರಣಾ ಕಾರ್ಯಕ್ರಮ

0
Gangajal Sidlaghatta

ನಗರದಲ್ಲಿ ಮಂಗಳವಾರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಅಶ್ವಿನಿ ಗೋವರ್ಧನ ಚಾರಿಟಬಲ್ ಟ್ರಸ್ಟ್ ವತಿಯಿಂದ ಶ್ರೀ ಕಾಶಿ ವಿಶ್ವೇಶ್ವರ ಸ್ವಾಮಿ ದೇವಾಲಯದಲ್ಲಿ ಗಂಗಾಪೂಜೆ ಸಲ್ಲಿಸಿ ತಾಲ್ಲೂಕಿನ ವಿವಿಧ ಈಶ್ವರ ದೇವಾಲಯಗಳಿಗೆ ಗಂಗಾಜಲ ವಿತರಿಸಿ ತಾಲ್ಲೂಕು ಕಸಾಪ ಅಧ್ಯಕ್ಷ ಎ.ಎಂ.ತ್ಯಾಗರಾಜ್ ಮಾತನಾಡಿದರು.

ಮುಕ್ತಿ ದೊರೆಯಲು ಗಂಗೆಯ ಒಂದು ತೊಟ್ಟು ಸಾಕು. ಗಂಗಾ ಸ್ನಾನ ತುಂಗಾ ಪಾನ. ಪವಿತ್ರ ಗಂಗೆ ಸೇವನೆಯಿಂದ ಸಕಲ ಪಾಪಗಳು ನಾಶವಾಗುತ್ತವೆ. ಅಲ್ಲದೆ ಇದಕ್ಕೆ ಔಷಧ ಗುಣಗಳಿವೆ. ಈ ರೀತಿಯ ಪವಿತ್ರವಾದ ಜಲದಿಂದ ಜನರ ಕಷ್ಟಗಳು ದೂರವಾಗಲಿ, ಕರೋನ ಸಂಕಷ್ಟ ಕಾಲದಲ್ಲಿ ಎಲ್ಲರಿಗೂ ಆರೋಗ್ಯವನ್ನು ಶಿವ ದಯಪಾಲಿಸಲಿ ಹಾಗೂ ಮಳೆ ಬೆಳೆ ಚೆನ್ನಾಗಿ ಆಗಲಿ ಎಂಬ ಉದ್ದೇಶದಿಂದ ಗಂಗಾಜಲವನ್ನು ವಿತರಿಸುತ್ತಿದ್ದೇವೆ ಎಂದು ಅವರು ತಿಳಿಸಿದರು.

ಈ ಭಾಗದಲ್ಲಿ ಗಂಗಾಜಲ ಸಿಗುವುದಿಲ್ಲ, ಈ ಜಲವು ಹರಿದ್ವಾರ ಹಾಗೂ ಕಾಶಿಯಲ್ಲಿ ಮಾತ್ರ ಸಿಗುವ ಕಾರಣ ಹತ್ತು ದಿನಗಳ ಪ್ರಯತ್ನದಲ್ಲಿ ಬೆಂಗಳೂರಿಗೆ ಬಂದಿದ್ದು ಅಲ್ಲಿಂದ ನಾವು ತರಸಿದ್ದೇವೆ. ಈ ಗಂಗಾಜಲದಿಂದ ಶಿವನಿಗೆ ಅಭಿಷೇಕ ಮಾಡಿದರೆ ನಾಡಿಗೆ ಮಳೆ ಬೆಳೆಯಾಗಿ ನಮ್ಮ ನಾಡು ಸುಭೀಕ್ಷೆಯಿಂದ ಇರುತ್ತದೆ ಎಂದು ಹಿರಿಯರ ಮಾತಿದೆ ಶಿವರಾತ್ರಿಯನ್ನು ವಿಶೇಷವಾಗಿ ಆಚರಣೆ ಮಾಡಿ ಎಲ್ಲರೂ ಆ ದೇವರ ಕೃಪೆಗೆ ಪಾತ್ರರಾಗೊಣ ಎಂದು ಜನತೆಗೆ ಶುಭ ಕೋರಿದರು.

ಈ ಸಂದರ್ಭದಲ್ಲಿ ನಗರ ಮತ್ತು ತಾಲ್ಲೂಕಿನ ಎಲ್ಲಾ ಈಶ್ವರ ದೇವಾಲಯಗಳಿಗೆ ಗಂಗಾಜಲ ವಿತರಿಸಲಾಯಿತು.

ಕಸಾಪ ಸಂಘ ಸಂಸ್ಥೆಗಳ ಪ್ರತಿನಿಧಿ ಶಂಕರ್‌, ಕನ್ನಡ ಸಾರಸ್ವತ ಪರಿಚಾರಿಕೆ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ, ಎಸ್. ನಾಗರಾಜ್, ನಾಮದೇವ್, ಬಸವರಾಜ್ ಸ್ವಾಮಿ, ರಾಜಶೇಖರ, ಗುರುರಾಜರಾವ್, ಮಂಜುನಾಥ್, ಗೋಪಿ, ಅಶೋಕ, ರಘು ಮತ್ತು ಹರೀಶ್ ಹಾಜರಿದ್ದರು.

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.

error: Content is protected !!
Exit mobile version