Home News ಸರ್ಕಾರಿ ಶಾಲೆಯಲ್ಲಿ Online ಶೈಕ್ಷಣಿಕ ಸ್ಪರ್ಧೆ

ಸರ್ಕಾರಿ ಶಾಲೆಯಲ್ಲಿ Online ಶೈಕ್ಷಣಿಕ ಸ್ಪರ್ಧೆ

0
Sidlaghatta Government school Online Education

ತಂತ್ರಜ್ಞಾನವು ಪ್ರಪಂಚವನ್ನು ಕಿರಿದಾಗಿಸಿದೆ. ಇದನ್ನು ಮಕ್ಕಳ ಕಲಿಕೆಗೆ ಪೂರಕವಾಗಿ ಬಳಸಿಕೊಳ್ಳಬೇಕು. ಗ್ರಾಮೀಣ ಹಾಗೂ ನಗರ ವಿದ್ಯಾರ್ಥಿಗಳ ಕಲಿಕಾ ಅಂತರವನ್ನು ಕಿರಿದಾಗಿಸಲು ತಂತ್ರಜ್ಞಾನವು ಉಪಯುಕ್ತವಾಗಲಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಆಂಜನೇಯ ತಿಳಿಸಿದರು.

ತಾಲ್ಲೂಕಿನ ತುಮ್ಮನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಚ್.ಪಿ ಮುಸ್ಕಾನ್ ಸ್ಮಾರ್ಟ್ ಸ್ಕೂಲ್ ಪ್ರಾಜೆಕ್ಟ್ ನ ಅಡಿಯಲ್ಲಿ ಎಸ್.ಆರ್.ಎಫ್ ಫೌಂಡೇಷನ್ ಆಯೋಜಿಸಿದ್ದ ಆನ್ ಲೈನ್ ಶೈಕ್ಷಣಿಕ ಸ್ಪರ್ಧೆಯ ಮುಕ್ತಾಯ ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಕೊರೊನಾದಿಂದಾಗಿ ಹಳಿ ತಪ್ಪಿದ್ದ ವಿದ್ಯಾರ್ಥಿಗಳ ಕಲಿಕೆಯನ್ನು ಸರಿದಾರಿಗೆ ತರಲು ತಂತ್ರಜ್ಞಾನ ಬಳಸಿಕೊಂಡು ಹೆಚ್ಚಿನ ಪರಿಶ್ರಮದಿಂದ ಶಿಕ್ಷಕರು ಶ್ರಮಿಸುತ್ತಿದ್ದಾರೆ ಎಂದರು.

 ತಾಲ್ಲೂಕಿನ ವಿದ್ಯಾರ್ಥಿಗಳಲ್ಲದೆ ಬೆಂಗಳೂರಿನ ಕೆಲವು ಶಾಲೆಯ ವಿದ್ಯಾರ್ಥಿಗಳು ಆನ್ ಲೈನ್ ಮುಖಾಂತರ ಕಾರ್ಯಕ್ರಮದ ವೀಕ್ಷಣೆ ಮಾಡಿದರು. ಆನ್ ಲೈನ್ ಮುಖಾಂತರ ದೆಹಲಿಯಿಂದ ಎಚ್.ಪಿ ಮತ್ತು ಎಸ್.ಆರ್.ಎಫ್ ಫೌಂಡೇಷನ್ ಅಧಿಕಾರಿಗಳಾದ ಮೇಸಿನ್, ದಿಲೀಪ್ ಕಸ್ತೂರಿ, ಡಾ.ಸುರೇಶ್ ರೆಡ್ಡಿ, ಶಾಕೀಬ್ ಆಲಂ ಮಕ್ಕಳಿಗೆ ಶುಭ ಹಾರೈಸಿದರು.

 ಚಿತ್ರಕಲೆ, ಪ್ರಬಂಧ, ಕ್ವಿಜ್, ವಿಜ್ಞಾನ ಮಾದರಿ ಮೊದಲಾದ ಏಳು ರೀತಿಯ ಸ್ಪರ್ಧೆಗಳನ್ನು ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾಗಿತ್ತು. ತುಮ್ಮನಹಳ್ಳಿ, ಹರಳಕುಂಟೆ, ವರ್ತೂರು ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಪ್ರಶಸ್ತಿ ಮತ್ತು ಪ್ರಮಾಣಪತ್ರವನ್ನು ಸ್ವೀಕರಿಸಿದರು.

 ಶಿಕ್ಷಣ ಸಂಯೋಜಕ ಭಾಸ್ಕರಗೌಡ, ಸಿ.ಆರ್.ಪಿ ವೀಣಾ, ಶಿಕ್ಷಕರ ಸಂಘದ ಅಧ್ಯಕ್ಷ ಮುನಿರಾಜು, ಎಸ್.ಡಿ.ಎಂ.ಸಿ ಅಧ್ಯಕ್ಷ ಶ್ರೀನಿವಾಸ್, ಸದಸ್ಯ ಮಂಜುನಾಥ್, ಮುಖ್ಯ ಶಿಕ್ಷಕಿ ರುಕ್ಮಿಣಿಯಮ್ಮ, ಶಿಕ್ಷಕ ಮಂಜುನಾಥ್, ಎಸ್.ಆರ್.ಎಫ್ ಫೌಂಡೇಷನ್ ಕಾರ್ಯಕ್ರಮಾಧಿಕಾರಿ ಲೋಹಿತ್ ಪೂಜಾರ್, ಮೋಹಿತ್ ಹಾಜರಿದ್ದರು.

 

Like, Follow, Share ನಮ್ಮ ಶಿಡ್ಲಘಟ್ಟ

Facebook: https://www.facebook.com/sidlaghatta

Instagram: https://www.instagram.com/sidlaghatta

Telegram: https://t.me/Sidlaghatta

Twitter: https://twitter.com/hisidlaghatta

ಸುದ್ದಿಗಳು ಹಾಗೂ ಮಾಹಿತಿಗಾಗಿ ಸಂಪರ್ಕಿಸಿ:

WhatsApp: https://wa.me/917406303366?text=Hi

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version