30.1 C
Sidlaghatta
Saturday, April 1, 2023

ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ

- Advertisement -
- Advertisement -

Melur : ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯು ಸ್ತ್ರೀಯರ ಸಾಮಾಜಿಕ,ಸಾಂಸ್ಕೃತಿಕ,ಆರ್ಥಿಕ ಸಾಧನೆಗಳನ್ನು,ಸಮಾಜಕ್ಕೆ ಅವರ ಕೊಡುಗೆಗಳನ್ನು ಸಂಭ್ರಮಿಸುವ ದಿನ ಎಂದು ತಾಲ್ಲೂಕು ಪಂಚಾಯಿತಿ ಇಒ ಮುನಿರಾಜ ತಿಳಿಸಿದರು.

ತಾಲ್ಲೂಕಿನ ಮೇಲೂರಿನ ಶ್ರೀ ಗಂಗಾದೇವಿ ಸಭಾಭವನದಲ್ಲಿ ಗುರುವಾರ ಗ್ರಾಮ ಪಂಚಾಯಿತಿ ವತಿಯಿಂದ ಆಯೋಜಿಸಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಮಾಜ ಮತ್ತು ಕುಟುಂಬದಲ್ಲಿ ನೆಮ್ಮದಿ ಹಾಗೂ ಶಾಂತಿ ನೆಲೆಸಲು ಮಹಿಳೆಯರೇ ಕಾರಣರು. ಸಮಾಜದಲ್ಲಿ ಮಹಿಳೆಗೆ ಸಹಕಾರಿಯಾಗುವಂತಹ ಹಲವಾರು ಕಾನೂನಾತ್ಮಕ ಹಾಗೂ ಸೈದ್ಧಾಂತಿಕ ಸಮಾನತೆ ಇದ್ದು, ಕಾನೂನಾತ್ಮಕವಾದವುಗಳನ್ನು ಸರಿಯಾಗಿ ಉಪಯೋಗಿಸಿಕೊಳ್ಳಬೇಕೆಂದು ಹೇಳಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಆರ್.ಎ.ಉಮೇಶ್ ಮಾತನಾಡಿ, ಮಹಿಳೆಯರು ನಿರಂತರವಾಗಿ ವೈಯಕ್ತಿಕವಾಗಿ ಮತ್ತು ವೃತ್ತಿಪರವಾಗಿ ದಿನದಿಂದ ದಿನಕ್ಕೆ ದೇಶಕ್ಕೆ ಅಭಿವೃದ್ಧಿಯ ಕೊಡುಗೆ ನೀಡುತ್ತಿದ್ದಾರೆ. ಇನ್ನಷ್ಟೂ ಪ್ರೇರಣೆ ಹಾಗೂ ಸಹಕಾರ ದೊರೆತಿದ್ದೆ ಆದಲ್ಲಿ, ಇನ್ನೂ ಉನ್ನತ ಮಟ್ಟದ ಸಾಧನೆ ಮಾಡುವರು. ಇಂದು ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿ ಮಂಚೂಣಿಯಲಿದ್ದಾರೆ. ಸಾಲುಮರದ ತಿಮ್ಮಕ್ಕ, ಸುಧಾಮೂರ್ತಿಯಂತಹ ಮಹಿಳೆಯರು ಮಾದರಿಯಾಗಿದ್ದಾರೆ ಎಂದರು.

ಮಳ್ಳೂರು. ಮೇಲೂರು. ಕಂಬದಹಳ್ಳಿ ಚೌಡಸಂದ್ರ, ಅಪ್ಪೇಗೌಡನಹಳ್ಳಿ ಗಂಗನಹಳ್ಳಿ ಗ್ರಾಮಗಳ ಎಲ್ಲಾ ಸ್ತ್ರೀ ಶಕ್ತಿ ಸ್ವ -ಸಹಾಯ ಸಂಘದ ಸದಸ್ಯರು ಭಾಗವಹಿಸಿದ್ದರು.

ಕೆನರಾ ಬ್ಯಾಂಕ್ ವ್ಯವಸ್ಥಾಪಕಿ ಪ್ರಿಯಾ ಶಣಯ್, ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕ ಭಾಸ್ಕರ್, ಗ್ರಾಮಪಂಚಾಯಿತಿ ಪಿ.ಡಿ.ಒ ಶಾರದಾ, ಕಾರ್ಯದರ್ಶಿ ಶ್ರೀನಿವಾಸರೆಡ್ಡಿ, ಉಪಾಧ್ಯಕ್ಷೆ ವನಿತಾ ತಿರುಮಲೇಶ, ಸದಸ್ಯರಾದ ಎಂ.ಕೆ. ರವಿಪ್ರಸಾದ್, ಸಿ. ಗಜೇಂದ್ರ, ಎಂ.ಜೆ. ಶ್ರೀನಿವಾಸ್, ದೇವರಾಜ್, ಸವಿತಾ ಗೋಪಾಲರೆಡ್ಡಿ, ಶೋಭಾ ಹರೀಶ್, ಕಮಲಮ್ಮ ವೆಂಕಟರಾಯಪ್ಪ ಹಾಜರಿದ್ದರು.


International Women’s Day Celebrated in Melur

Melur : Sidlaghatta Taluk Panchayat Executive Officer, Muniraja, spoke at an International Women’s Day event organized by the Gram Panchayat at Sri Gangadevi Sabha Bhavan in Melur, emphasizing the social, cultural, and economic achievements of women and their contributions to society. He highlighted women’s role in maintaining peace and tranquility in both the family and society, and noted the many legal and ideological advancements that have helped women progress.

In his remarks, Gram Panchayat President, RA Umesh, praised women’s continuous contributions to the country’s development, both personally and professionally. He noted that if women had received more motivation and cooperation, they could have achieved even greater heights. He also highlighted the accomplishments of inspirational women like Thimmakka and Sudhamurthy of Salumara, who serve as role models for future generations.

The event was attended by members of the Stri Shakti Self Help Society of Kambadahalli Chaudasandra and Appegowdanahalli Ganganahalli villages, as well as prominent individuals such as Canara Bank Manager, Priya Shanay, Government High School Principal, Bhaskar, Gram Panchayat PDO, Sharada, Secretary Srinivasa Reddy, Vice President Vanitha Thirumalesha, Member M.K. Raviprasad, C. Gajendra, M.J. Srinivas, Devaraj, Savitha Gopalareddy, Shobha Harish, and Kamalamma Venkatarayappa.

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook 👍🏻
http://www.facebook.com/sidlaghatta

Instagram 📷
http://www.instagram.com/sidlaghatta

Youtube ▶️
https://www.youtube.com/c/sidlaghatta

Website 🌐
http://www.sidlaghatta.com

📱 Join Telegram
https://t.me/Sidlaghatta

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.
Captcha verification failed!
CAPTCHA user score failed. Please contact us!
error: Content is protected !!