
Sidlaghatta : ಗೌರಿಬಿದನೂರಿನ ಅಲಿಪುರದ ಜೆಮ್ ಇಂಟರ್ನ್ಯಾಷನಲ್ ಸ್ಕೂಲ್ ನಲ್ಲಿ ಭಾನುವಾರ ನಡೆದ ಜಿಲ್ಲಾ ಮಟ್ಟದ ಸ್ಕೇಟಿಂಗ್ ಚಾಂಪಿಯನ್ ಷಿಪ್ ನಲ್ಲಿ ಶಿಡ್ಲಘಟ್ಟದ ಜೈ ಭಾರತ್ ಸ್ಪೀಡ್ ಸ್ಕೇಟಿಂಗ್ ಅಸೋಸಿಯೇಷನ್ ನ ಮಕ್ಕಳು ಭಾಗವಹಿಸಿ ಹಲವು ಪದಕಗಳನ್ನು ಗಳಿಸಿದ್ದಾರೆ.
In English: Children from Sidlaghatta’s Jai Bharat Speed Skating Association won multiple medals at a district-level skating championship held at Gem International School, Alipura, Gauribidanur on Sunday. The event, organised by the Chikkaballapur district unit of the Speed Relay Roller Skating Association, is the latest in a string of skating successes for the town’s young athletes.
ಸ್ಪೀಡ್ ರಿಲೇ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್, ಚಿಕ್ಕಬಳ್ಳಾಪುರ ಜಿಲ್ಲಾ ಘಟಕದ ವತಿಯಿಂದ ಪಂದ್ಯಾವಳಿ ಆಯೋಜಿಸಲಾಗಿತ್ತು. ವಿವಿಧ ವಯೋಮಾನದ ಮಕ್ಕಳಿಗೆ ಟೆನಾಸಿಟಿ, ಕ್ವಾಡ್, ರೆಕ್ ಇನ್ ಲೈನ್ ಮತ್ತು ಪ್ರೊ ಇನ್ ಲೈನ್ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆದವು.
ಮಕ್ಕಳ ಸಾಧನೆ ಕುರಿತು ಸ್ಕೇಟಿಂಗ್ ಶಿಕ್ಷಕ ಅರುಣ್ ಕುಮಾರ್ ಮಾತನಾಡಿ, “ಮಕ್ಕಳು ಸತತ ಅಭ್ಯಾಸ ಹಾಗೂ ಆಸಕ್ತಿಯಿಂದ ಸ್ಪರ್ಧೆಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಪದಕಗಳನ್ನು ಗಳಿಸಿರುವುದು ಅವರ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಮುಂದಿನ ದಿನಗಳಲ್ಲಿ ರಾಜ್ಯ ಹಾಗೂ ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿಯೂ ಉತ್ತಮ ಸಾಧನೆ ಮಾಡುವಂತೆ ಮಕ್ಕಳಿಗೆ ತರಬೇತಿ ನೀಡಲಾಗುವುದು” ಎಂದು ತಿಳಿಸಿದರು.