Home News ಪಾಳು ಬಾವಿಗೆ ಬಿದ್ದ ಮೇಕೆಯನ್ನು ರಕ್ಷಿಸಿದ ಅಗ್ನಿ ಶಾಮಕ ಸಿಬ್ಬಂದಿ

ಪಾಳು ಬಾವಿಗೆ ಬಿದ್ದ ಮೇಕೆಯನ್ನು ರಕ್ಷಿಸಿದ ಅಗ್ನಿ ಶಾಮಕ ಸಿಬ್ಬಂದಿ

0
Sidlaghatta Jangamakote fire Deapartment Rescue

Jangamakote, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಜಂಗಮಕೋಟೆಯ ಜಮೀನೊಂದರಲ್ಲಿದ್ದ ಪಾಳು ಬಾವಿಗೆ ಬಿದ್ದಿದ್ದ ಮೇಕೆಯೊಂದನ್ನು ಅಗ್ನಿ ಶಾಮಕ ಸಿಬ್ಬಂದಿ (Fire Department) ರಕ್ಷಿಸಿದ್ದಾರೆ (Rescue).

ಗ್ರಾಮದ ನಾಗೇಶ್ ಎಂಬುವರಿಗೆ ಸೇರಿದ ಮೇಕೆ ಮೇಯಲು ಹೋಗಿದ್ದ ಸಂದರ್ಭದಲ್ಲಿ ಕಾಲು ಜಾರಿ ಆಯಾ ತಪ್ಪಿ ಪಾಳು ಬಾವಿಗೆ ಬಿದ್ದಿದೆ. ಮೇಕೆ ಬಾವಿಗೆ ಬಿದ್ದಿರುವ ವಿಷಯ ತಿಳಿದ ತಕ್ಷಣ ಅಗ್ನಿಶಾಮಕ ದಳವರಿಗೆ ಕರೆ ಮಾಡಲಾಗಿದೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಕ್ರೇನ್ ಸಹಾಯದಿಂದ ರಕ್ಷಣಾ ಕಾರ್ಯಕ್ಕೆ ಮುಂದಾಗಿದ್ದಾರೆ. ಸ್ಥಳೀಯರ ಸಹಾಯದಿಂದ ಅಗ್ನಿಶಾಮಕ ದಳದ ಸಿಬ್ಬಂದಿ ಮೇಕೆಯನ್ನು ಪ್ರಾಣಕ್ಕೆ ಯಾವುದೇ ತೊಂದರೆಯಾಗದಂತೆ ಹಗ್ಗ ಕಟ್ಟಿ ಕ್ರೇನ್ ಸಹಾಯದಿಂದ ಮೇಲೆ ಎತ್ತಿದ್ದಾರೆ. ಬಾವಿಯಲ್ಲಿ ಬಿದ್ದ ಪರಿಣಾಮವಾಗಿ ಕಾಲುಗಳಿಗೆ ಸಣ್ಣ ಪುಟ್ಟ ಗಾಯಗಳು ಆಗಿದ್ದು, ಮೇಕೆಯನ್ನು ರಕ್ಷಣೆ ಮಾಡಿದ ಅಗ್ನಿಶಾಮಕ ದಳ ಸಿಬ್ಬಂದಿಗಳ ಕಾರ್ಯಕ್ಕೆ ಸಾರ್ವಜನಿಕರು ಹರ್ಷ ವ್ಯಕ್ತಪಡಿಸಿದ್ದಾರೆ.

ಅಗ್ನಿ ಶಾಮಕ ದಳದ ಡಿ ಎಫ್ ಓ ಬಸವರ ಜಿ ಕರಲಿಂಗನ್ನವರ್, ಎಫ್ ಎಸ್ ಒ ಕೆ.ರಾಮಕೃಷ್ಣ , ಎಂ.ಮುನಿಕೃಷ್ಣ, ರೇವಣ್ಣ ಸಿದ್ದ ಮದ್ದಾಲ ಭಾವಿ, ಶ್ರೀನಿವಾಸ್, ಸಂತೋಷ್, ಆನಂದಪ್ಪ ಹಾಗೂ ಮಹಮ್ಮದ್ ಯೂಸುಫ್ ಗದಗ್ ಕಾರ್ಯಚರಣೆಯಲ್ಲಿ ತೊಡಗಿದ್ದರು.

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version