26.6 C
Sidlaghatta
Saturday, August 2, 2025

ಜೀರ್ಣೋದ್ಧಾರಗೊಂಡ ಕಾಚಹಳ್ಳಿ ಪುರಾತನ ವೆಂಕಟರಮಣಸ್ವಾಮಿ ದೇವಾಲಯ

- Advertisement -
- Advertisement -

ತಾಲ್ಲೂಕಿನ ಕಾಚಹಳ್ಳಿ ಗ್ರಾಮದ ಪುರಾತನ ವೆಂಕಟರಮಣಸ್ವಾಮಿ ದೇವಾಲಯವನ್ನು ಜೀರ್ಣೋದ್ಧಾರಗೊಳಿಸಲಾಗಿದ್ದು ಶುಕ್ರವಾರ ದೇವರ ಪ್ರತಿಷ್ಠಾಪನಾ ಪೂಜಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಸುಮಾರು 300 ರಿಂದ 400 ವರ್ಷಗಳಷ್ಟು ಹಳೆಯದಾದ ದೇವಾಲಯ ಶಿಥಿಲಗೊಂಡಿತ್ತು. ಗ್ರಾಮಸ್ಥರು ಹಾಗೂ ಮನೆದೇವರನ್ನಾಗಿ ಹೊಂದಿರುವ ಕುಲಬಾಂದವರು ಸೇರಿ ದೇವಾಲಯವನ್ನು ಜೀರ್ಣೋದ್ಧಾರಗೊಳಿಸಿದ್ದಾರೆ. ನೂತನ ಗರ್ಭಗುಡಿ, ಪ್ರಭಾವಳಿ, ಗೋಪುರ ನಿರ್ಮಿಸಲಾಗಿದೆ. ಪ್ರಥಮ ಪೂಜೆಯನ್ನು ಶುಕ್ರವಾರ ಪ್ರಾರಂಭಿಸಿದ್ದು, 48 ದಿನಗಳ ಕಾಲ ಪೂಜಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಕಾಚಹಳ್ಳಿ ಗ್ರಾಮದ ಪ್ರತಿಯೊಂದು ಮನೆಯವರೂ ಒಂದೊಂದು ದಿನದ ಪೂಜೆಯ ಜವಾಬ್ದಾರಿಯನ್ನು ಹೊತ್ತಿದ್ದಾರೆ.
ವಿವಿಧ ಹೋಮಗಳನ್ನು ನಡೆಸಲಾಯಿತು. ಉತ್ಸವ ಮೂರ್ತಿಗಳನ್ನು ಹಾಗೂ ದೀಪವನ್ನು ಹೊತ್ತ ಮಹಿಳೆಯರು ಮೆರವಣಿಗೆಯಲ್ಲಿ ಸಾಗಿ ಬಂದು ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. ದೇವರನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು.
ನೆರೆಹೊರೆಯ ಗ್ರಾಮಸ್ಥರು, ಯುವ ಸಮೂಹ ಹಾಗೂ ಮನೆದೇವರನ್ನಾಗಿ ಹೊಂದಿರುವ ಸೇವಾಕರ್ತರು ಪೂಜೆಯಲ್ಲಿ ಭಾಗವಹಿಸಿದ್ದರು.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!