22.1 C
Sidlaghatta
Thursday, December 12, 2024

ಮಾ.27 ರಿಂದ 5, 8 ನೇ ತರಗತಿ ಪರೀಕ್ಷೆ, ಸಿದ್ಧತೆ ಪೂರ್ಣ

Evaluation test for 5th and 8th grade students in government, aided and private unaided schools

- Advertisement -
- Advertisement -

Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಸರ್ಕಾರಿ, ಅನುದಾನಿತ, ಖಾಸಗಿ ಅನುದಾನ ರಹಿತ ಕಿರಿಯ ಮತ್ತು ಹಿರಿಯಪ್ರಾಥಮಿಕ ಶಾಲೆಗಳಲ್ಲಿ ಕಲಿಯುತ್ತಿರುವ 5 ಮತ್ತು 8 ನೇ ತರಗತಿಯ ವಿದ್ಯಾರ್ಥಿಗಳಿಗೆ ಕರ್ನಾಟಕ ಶಾಲಾಗುಣಮಟ್ಟ ಮೌಲ್ಯಾಂಕನ ಮತ್ತು ಅಂಗೀಕರಣ ಪರಿಷತ್ತು ನಡೆಸುವ ಮೌಲ್ಯಾಂಕನ ಪರೀಕ್ಷೆಗಳು ಇದೇ ತಿಂಗಳ 27 ರಿಂದ ಆರಂಭವಾಗಲಿದ್ದು ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿವೆ ಎಂದು ಕ್ಷೇತ್ರಶಿಕ್ಷಣಾಧಿಕಾರಿ ಸಿ.ಎ.ನರೇಂದ್ರಕುಮಾರ್ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾಹೇಳಿಕೆ ನೀಡಿರುವ ಅವರು, ತಾಲ್ಲೂಕಿನಾದ್ಯಂತ ಆಯಾ ಶಾಲೆಗಳೇ ಪರೀಕ್ಷಾಕೇಂದ್ರಗಳಾಗಿದ್ದು 5 ನೇ ತರಗತಿಯ ಒಟ್ಟು 2913, 8 ನೇ ತರಗತಿಯ 2981 ವಿದ್ಯಾರ್ಥಿಗಳು ಸಂಕಲನಾತ್ಮಕ ಮೌಲ್ಯಮಾಪನ-2 ಕ್ಕೆ ಸಂಬಂಧಿಸಿದಂತೆ ಮೌಲ್ಯಾಂಕನ ಪರೀಕ್ಷೆಗೆ ಹಾಜರಾಗಲಿದ್ದಾರೆ ಎಂದು ಅವರು ತಿಳಿಸಿದರು.

ಪರೀಕ್ಷೆಗಳನ್ನು ಸುಸೂತ್ರವಾಗಿ ನಡೆಸಲು ಪೂರಕವಾಗಿ ಈಗಾಗಲೇ ಎಲ್ಲಾ ಶಾಲೆಗಳ ಮುಖ್ಯಶಿಕ್ಷಕರಿಗೆ ಸೂಚನೆಗಳನ್ನು ನೀಡಲಾಗಿದೆ. ಪ್ರತಿ ಪರೀಕ್ಷಾಕೇಂದ್ರವಿರುವ ಶಾಲೆಗೆ ಅಗತ್ಯಕ್ಕನುಗುಣವಾಗಿ ಕೊಠಡಿಮೇಲ್ವಿಚಾರಕರನ್ನಾಗಿ ಇತರೆ ಹತ್ತಿರದ ಶಾಲೆಗಳ ಶಿಕ್ಷಕರನ್ನು ನೇಮಿಸಲಾಗಿದೆ. ಸ್ಥಾನಿಕ ಜಾಗೃತದಳ ನೇಮಕ, ಪ್ರಶ್ನೆಪತ್ರಿಕೆ ಬಂಡಲ್‌ಗಳ ವಿತರಣೆಯನ್ನು ಇಲಾಖಾ ನಿಯಮಗಳಂತೆ ಕೈಗೊಳ್ಳಲು ಕ್ರಮವಹಿಸಲಾಗಿದೆ ಎಂದರು.

ಈ ಪರೀಕ್ಷೆಯು ವಾರ್ಷಿಕಪರೀಕ್ಷೆಯಾಗಿರದೇ ಎಲ್ಲಾ ವಿದ್ಯಾರ್ಥಿಗಳನ್ನೂ ತೇರ್ಗಡೆಗೊಳಿಸುವುದಾಗಿದೆ. ಕಲಿಕಾಗುಣಮಟ್ಟ, ಕಲಿಕೆಯಲ್ಲಿನ ನ್ಯೂನತೆ, ಕಲಿಕಾಪ್ರಗತಿಗಳನ್ನು ಕಲಿಕಾಫಲಗಳನ್ನಾಧರಿಸಿ ಅರಿತು ಮುಂದಿನ ಶೈಕ್ಷಣಿಕವರ್ಷಗಳಲ್ಲಿ ಕಲಿಕಾಕೊರತೆ ನೀಗಿಸಲು ಅಗತ್ಯಕ್ರಮಗಳನ್ನು ಯೋಜಿಸಲು ಅನುಕೂಲವಾಗಲಿದೆ ಎಂದರು.

5 ನೇ ತರಗತಿಯ ಉತ್ತರಪತ್ರಿಕೆಗಳ ಮೌಲ್ಯಮಾಪನವು ಏಪ್ರಿಲ್-1 ರಿಂದ 5 ರವರೆಗೆ, 8 ನೇ ತರಗತಿಯ ಉತ್ರಪತ್ರಿಕೆಗಳ ಮೌಲ್ಯಮಾಪನವು ಏಪ್ರಿಲ್-2 ರಿಂದ 7 ರವರೆಗೆ ನಡೆಯಲಿದೆ. ನಂತರ ಮೌಲ್ಯೀಕರಿಸಿದ ಉತ್ತರಪತ್ರಿಕೆಗಳನ್ನು ಆಯಾಯ ಶಾಲೆಗೆ ಕಳುಹಿಸಿ ಗಳಿಸಿರುವ ಅಂಕಗಳನ್ನು ಗ್ರೇಡ್‌ಗಳಿಗೆ ಪರಿವರ್ತಿಸಿ ಫಲಿತಾಂಶವನ್ನು ಘೋಷಿಸಲಾಗುವುದು ಎಂದರು.

ಕ್ಷೇತ್ರಸಮನ್ವಯಾಧಿಕಾರಿ ತ್ಯಾಗರಾಜು ಮಾತನಾಡಿ, ಪ್ರಶ್ನೆಪತ್ರಿಕೆಗಳನ್ನು ಆಯಾಯದಿನವೇ ಕಳುಹಿಸಲಾಗುವುದು, ಪರೀಕ್ಷಾ ಗೋಪ್ಯತೆಯನ್ನು ಕಾಯ್ದುಕೊಂಡು ಸುಸೂತ್ರವಾಗಿ ಪರೀಕ್ಷೆ ನಡೆಸಲು ಸೂಚಿಸಲಾಗಿದೆ. ಫಲಿತಾಂಶವನ್ನು ಕೇವಲ ಪೋಷಕರಿಗೆ ಮಾತ್ರ ತಿಳಿಸಲಾಗುವುದು. ಮಕ್ಕಳು ಯಾವುದೇ ಭಯ, ಆತಂಕಗಳಿಲ್ಲದಂತೆ ಪರೀಕ್ಷೆ ಬರೆಯಲು ಈಗಾಗಲೇ ಕಳೆದ ಎರಡು ತಿಂಗಳಿಂದ ಪುನರಾವರ್ತನೆ, ಮಾದರಿಪ್ರಶ್ನೆಪತ್ರಿಕೆಗಳ ಅಭ್ಯಾಸ, ಕಲಿಕಾಫಲಗಳನ್ನಾಧರಿಸಿ ಪುನರಾವರ್ತನೆಯಂತಹ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.


Evaluation test for 5th and 8th grade students from March 27

Sidlaghatta : The Karnataka School Quality Assessment and Accreditation Council is set to commence its evaluation for 5th and 8th grade students studying in government, aided and private unaided junior and senior primary schools in Sidlaghatta taluk on March 27th. Field Education Officer, CA Narendrakumar, has announced that all necessary preparations have been made for the assessment, with respective schools serving as examination centers across the taluk.

A total of 2913 5th grade students and 2981 8th grade students will take the evaluation test related to the summative assessment-2, with instructions already issued to headmasters to ensure the smooth running of the examinations. Teachers from nearby schools have been appointed as room invigilators as per requirement for each examination center school. Local awareness teams have also been appointed, and question paper bundles will be distributed as per departmental rules.

The exam is not an annual one, but rather a means of evaluating the quality of learning, identifying deficiencies, assessing learning progress based on results, and planning necessary measures to address learning gaps in the next academic year. The evaluation of class 5 answer sheets will take place from April 1st to 5th, while the evaluation of class 8 answer sheets will be held from April 2nd to 7th. The validated answer sheets will be sent to respective schools and marks will be converted into grades for result declaration.

Constituent Coordinator Thyagaraju has urged that the examination be conducted in an orderly manner while maintaining confidentiality. Results will only be communicated to parents. Measures such as revision, model question paper practice, and learning outcome-based revision have been implemented over the last two months to ensure that children approach the exam without fear or anxiety.

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
error: Content is protected !!