ಭೂಸ್ವಾಧೀನ ನೀತಿ ಮರುಪರಿಶೀಲಿಸಿ, ರೈತರಿಗೆ ನ್ಯಾಯ ಒದಗಿಸಿ: ನಿವೃತ್ತ ನ್ಯಾಯಮೂರ್ತಿ ಗೋಪಾಲಗೌಡ ಆಗ್ರಹ

- Advertisement -
- Advertisement -

Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಮಳ್ಳೂರಿನಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ನಿವೃತ್ತ ನ್ಯಾಯಮೂರ್ತಿ ಗೋಪಾಲಗೌಡ, ಸರ್ಕಾರದ ಭೂಸ್ವಾಧೀನ ನೀತಿಯನ್ನು ಮರುಪರಿಶೀಲಿಸಿ ರೈತರಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.

ಬಹುರಾಷ್ಟ್ರೀಯ ಕಂಪೆನಿಗಳಿಗೆ ರೈತರ ಜಮೀನುಗಳನ್ನು ಒದಗಿಸುವ ಸರ್ಕಾರದ ಧೋರಣೆಯನ್ನು ಅವರು ತೀವ್ರವಾಗಿ ಟೀಕಿಸಿದರು. ರೈತರ ಬದುಕು ಮತ್ತು ಕೃಷಿ ಉಳಿಯಬೇಕಾದರೆ ಭೂಸ್ವಾಧೀನ ಪ್ರಕ್ರಿಯೆಯನ್ನು ಮರುಪರಿಶೀಲಿಸಬೇಕು ಎಂದು ಅವರು ಹೇಳಿದರು.

ತಾಲ್ಲೂಕಿನ ಮಳ್ಳೂರಿನಲ್ಲಿ ಮಾಜಿ ಶಾಸಕ, ಸಹಕಾರ ರತ್ನ ಪುರಸ್ಕೃತ ದಿವಂಗತ ಕಾಮ್ರೇಡ್ ಜಿ. ಪಾಪಣ್ಣ ಅವರ ಸ್ಮಾರಕ ಭವನ ಉದ್ಘಾಟನೆ ಹಾಗೂ ಶಿಲಾಮೂರ್ತಿ ಅನಾವರಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಜಂಗಮಕೋಟೆ ಭಾಗದ ಸಾವಿರಾರು ಎಕರೆ ಜಮೀನುಗಳನ್ನು ಭೂಸ್ವಾಧೀನಪಡಿಸಿಕೊಳ್ಳಲು ಸರ್ಕಾರ ಮುಂದಾಗಿದ್ದು, ಬಿಡದಿಯಲ್ಲಿಯೂ ಇದೇ ರೀತಿಯ ಪ್ರಕ್ರಿಯೆ ಆರಂಭವಾಗಿದೆ ಎಂದು ಅವರು ತಿಳಿಸಿದರು. ರೈತರು ಬೆಳೆಯುವ ಬೆಳೆಗೆ ಸಮರ್ಪಕ ಬೆಲೆ ದೊರೆಯುತ್ತಿಲ್ಲ ಎಂದೂ, ಕೃಷಿಕರು ಹಾಗೂ ಕೃಷಿ ಕಾರ್ಮಿಕರು ಆರ್ಥಿಕ ಸಂಕಷ್ಟದಲ್ಲಿದ್ದಾರೆ ಎಂದೂ ಅವರು ಬೇಸರ ವ್ಯಕ್ತಪಡಿಸಿದರು.

ಪಾಪಣ್ಣರ ಬದುಕು ಇಂದಿನ ಪೀಳಿಗೆಗೆ ಮಾದರಿ

ಶಾಸಕ ಬಿ.ಎನ್. ರವಿಕುಮಾರ್ ಮಾತನಾಡಿ, ಮಳ್ಳೂರು ಜಿ. ಪಾಪಣ್ಣ ಅವರು 1952ರ ಚುನಾವಣೆಯಲ್ಲಿ ಕ್ಷೇತ್ರದ ಮೊದಲ ಶಾಸಕರಾಗಿ ಆಯ್ಕೆಯಾಗಿದ್ದರು ಎಂದು ಸ್ಮರಿಸಿದರು. ಆಗ ಶಿಡ್ಲಘಟ್ಟ ಮತ್ತು ಚಿಕ್ಕಬಳ್ಳಾಪುರ ಸೇರಿ ಒಂದೇ ವಿಧಾನಸಭಾ ಕ್ಷೇತ್ರವಾಗಿತ್ತು ಎಂದು ಅವರು ತಿಳಿಸಿದರು. ಜನಪರ ಚಿಂತನೆ, ಸರಳತೆ ಹಾಗೂ ರೈತರ ಪರ ಹೋರಾಟಗಳ ಮೂಲಕ ಪಾಪಣ್ಣ ಅವರು ಜನಮನದಲ್ಲಿ ಅಚ್ಚಳಿಯದ ಸ್ಥಾನ ಪಡೆದಿದ್ದರು ಎಂದು ಶಾಸಕರು ಸ್ಮರಿಸಿದರು. ಸ್ಮರಣಾರ್ಥ ಮಳ್ಳೂರಿನಲ್ಲಿ ಉದ್ಯಾನ ನಿರ್ಮಾಣಕ್ಕೆ ಅಗತ್ಯ ಸರ್ಕಾರಿ ಜಾಗ ಒದಗಿಸುವುದರ ಜೊತೆಗೆ ಶಾಸಕರ ಅನುದಾನದಿಂದ ಅಗತ್ಯ ನೆರವು ನೀಡಲು ಬದ್ಧನಾಗಿರುವುದಾಗಿ ಅವರು ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ವಿವಿಧ ಗಣ್ಯರು, ಜಿ. ಪಾಪಣ್ಣ ಅವರು ಅಧಿಕಾರವನ್ನು ವೈಯಕ್ತಿಕ ಲಾಭಕ್ಕಾಗಿ ಬಳಸದೆ ಜನಸೇವೆಯನ್ನೇ ರಾಜಕಾರಣದ ಧ್ಯೇಯವನ್ನಾಗಿಸಿಕೊಂಡಿದ್ದ ಅಪರೂಪದ ನಾಯಕರು ಎಂದು ಸ್ಮರಿಸಿದರು. ರೈತರು, ಕಾರ್ಮಿಕರು ಮತ್ತು ಸಹಕಾರ ಕ್ಷೇತ್ರದ ಅಭಿವೃದ್ಧಿಗಾಗಿ ಅವರು ಸಲ್ಲಿಸಿದ ಸೇವೆ ಇಂದಿಗೂ ಪ್ರಸ್ತುತವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣ, ಸಹಕಾರ ಮತ್ತು ಸಾಮಾಜಿಕ ನ್ಯಾಯದ ಮೌಲ್ಯಗಳನ್ನು ಬಲಪಡಿಸುವಲ್ಲಿ ಪಾಪಣ್ಣ ಅವರ ಕೊಡುಗೆ ಮಹತ್ವದ್ದಾಗಿದೆ ಎಂದು ಗಣ್ಯರು ಅಭಿಪ್ರಾಯಪಟ್ಟರು. ಸ್ಮಾರಕ ಭವನ ಹಾಗೂ ಶಿಲಾಮೂರ್ತಿ ಮುಂದಿನ ಪೀಳಿಗೆಗೆ ಅವರ ಸೇವೆ ಮತ್ತು ಹೋರಾಟಗಳನ್ನು ಪರಿಚಯಿಸುವ ಕೇಂದ್ರವಾಗಬೇಕು ಎಂದು ಆಶಯ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಮಳ್ಳೂರು ಸಿ.ಎನ್. ಪಿಳ್ಳವೆಂಕಟಸ್ವಾಮಿ, ಹಿರಿಯ ವಕೀಲ ಕೆ.ಟಿ. ನಂಜುಂಡಗೌಡ, ನಾಗರಾಜ್, ಕುಂದಲಗುರ್ಕಿ ಕೆ.ಎಂ. ವೆಂಕಟೇಶ್, ಸಿಪಿಎಂ ಮುಖಂಡರಾದ ಜಿ.ಎನ್. ನಾಗರಾಜ್, ಲಕ್ಷ್ಮಯ್ಯ, ಗೀತಾ, ಮಳ್ಳೂರು ಹರೀಶ್ ಸೇರಿದಂತೆ ಗ್ರಾಮಸ್ಥರು, ರೈತರು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.

In English: At a memorial hall inauguration for late MLA Comrade G. Pappanna in Mallur (Sidlaghatta taluk), retired Justice Gopalagowda urged the state government to review its land acquisition policy and ensure justice for farmers, criticizing the practice of acquiring farmland for multinational companies and citing ongoing acquisitions near Jangamakote and Bidadi. MLA B.N. Ravikumar recalled Pappanna’s legacy as the constituency’s first elected MLA (1952) and pledged support for a memorial garden. Local leaders, lawyers, and farmer representatives attended.

Sidlaghatta WhatsApp Channel Group

For Daily Updates WhatsApp ‘HI’ to 7406303366

For Daily Updates

WhatsApp 'HI' to 7406303366

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!