News

ಆಸ್ತಿ ದಾಖಲೆ ಕೆಲಸಕ್ಕೆ ಲಂಚ ಬೇಡಿಕೆ ಆರೋಪ: ಇಬ್ಬರು ಲೋಕಾಯುಕ್ತ ವಶಕ್ಕೆ

Municipal council office with police personnel outside the building

Sidlaghatta : ಆಸ್ತಿ ಪೌತಿ ಖಾತೆ ಕೆಲಸಕ್ಕಾಗಿ ₹50 ಸಾವಿರ ಲಂಚ ಬೇಡಿಕೆ ಇಟ್ಟ ಆರೋಪದ ಮೇರೆಗೆ, ನಗರಸಭೆ ಕಚೇರಿಯ ದ್ವಿತೀಯ ದರ್ಜೆ ಸಹಾಯಕ (ಎಸ್‌ಡಿಎ) ನಾಗರಾಜ್ ಹಾಗೂ ಮಾಜಿ ಕೌನ್ಸಿಲರ್ ಮೌಲಾ ಅವರನ್ನು ಲೋಕಾಯುಕ್ತ ಪೊಲೀಸರು ಸೋಮವಾರ ವಶಕ್ಕೆ ಪಡೆದಿದ್ದಾರೆ.

ಮಹಿಳೆಯೊಬ್ಬರ ಕೆಲಸಕ್ಕಾಗಿ ಹಣ ಕೇಳಲಾಗಿತ್ತು ಎನ್ನಲಾಗಿದ್ದು, ಮೊದಲ ಕಂತಾಗಿ ₹25 ಸಾವಿರ ಸ್ವೀಕರಿಸುವ ವೇಳೆ ಚಿಕ್ಕಬಳ್ಳಾಪುರ ಲೋಕಾಯುಕ್ತ ತಂಡ ದಾಳಿ ನಡೆಸಿದೆ. ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ನಗರಸಭೆಯಲ್ಲಿ ಸಾರ್ವಜನಿಕರ ಕೆಲಸಗಳಿಗೆ ಲಂಚ ಕೇಳಲಾಗುತ್ತಿದೆ ಎಂಬ ಆರೋಪಗಳ ನಡುವೆ ಈ ಕಾರ್ಯಾಚರಣೆ ನಡೆದಿದ್ದು, ಸ್ಥಳೀಯವಾಗಿ ಚರ್ಚೆಗೆ ಕಾರಣವಾಗಿದೆ. ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರ ಕೆಲಸಗಳನ್ನು ನಿಯಮಾನುಸಾರ ಮಾಡಿಕೊಡಬೇಕು ಎಂಬ ಒತ್ತಾಯವೂ ಕೇಳಿಬಂದಿದೆ. ಇದೇ ತಿಂಗಳ ಇನ್ನೊಂದು ಪ್ರಕರಣದ ವಿವರಕ್ಕೆ ಹಿಂದಿನ ವರದಿ ನೋಡಬಹುದು.

ಸಂಬಂಧಿತ ಸುದ್ದಿ: ಖಾತೆ ಮಾಡಿಕೊಡಲು ₹6.50 ಲಕ್ಷ ಲಂಚ ಬೇಡಿಕೆ: ಗ್ರಾಮ ಲೆಕ್ಕಿಗ ಬಂಧನ

Sidlaghatta WhatsApp Channel Group

For Daily Updates WhatsApp ‘HI’ to 7406303366

Be a reporter

ಊರಿನ ಸುದ್ದಿ, ಫೋಟೋ ಕಳುಹಿಸಿ.

Report an error in this story

ಇದನ್ನೂ ಓದಿ

error: Content is protected !!