Mallur, Sidlaghatta : ಮಳ್ಳೂರು ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಗುರುವಾರ ನಡೆದ ಚುನಾವಣೆಯಲ್ಲಿ ಎಂ.ಆರ್.ಮುನಿಕೃಷ್ಣಪ್ಪ ಅವಿರೋಧವಾಗಿ ಆಯ್ಕೆಯಾದರು.
ಅಧ್ಯಕ್ಷರಾಗಿ ಆಯ್ಕೆಯಾದ ಎಂ.ಆರ್.ಮುನಿಕೃಷ್ಣಪ್ಪ ಮಾತನಾಡಿ, “ಕಳೆದ ಏಳು ವರ್ಷಗಳಿಂದ ಮಳ್ಳೂರು ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದಲ್ಲಿ ಸೇವೆ ಸಲ್ಲಿಸುತ್ತಿದ್ದೇನೆ. ಕಳೆದ 18 ವರ್ಷಗಳಿಂದ ವಿವಿಧ ಸಹಕಾರಿ ಸಂಘಗಳಲ್ಲಿ ಸೇವೆ ಸಲ್ಲಿಸುತ್ತಾ ಬಂದಿದ್ದೇನೆ. ಮೇಲೂರು ಮಂಡಲ್ ಪಂಚಾಯಿತಿಯಲ್ಲಿ ಉಪ ಪ್ರಧಾನ್ ಆಗಿದ್ದೆ. ಮಳ್ಳೂರು ಗ್ರಾಮದಲ್ಲಿಯೂ 25 ವರ್ಷಗಳಿಂದ ಸದಸ್ಯನಾಗಿ ಸೇವೆ ಸಲ್ಲಿಸಿದ್ದೇನೆ. ಉಣ್ಣೆ ನೇಕಾರ ಸಹಕಾರ ಸಂಘದಲ್ಲಿ ರಾಜ್ಯ ನಿರ್ದೇಶಕನಾಗಿ, ಕುರುಬರ ಸಂಘದಲ್ಲಿ ನಿರ್ದೇಶಕನಾಗಿ ಸೇವೆ ಸಲ್ಲಿಸಿದ್ದು, ಆ ಅನುಭವಗಳಿಂದ ಈ ಮಳ್ಳೂರು ಎಸ್.ಎಫ್.ಸಿ.ಎಸ್ ಕೂಡ ಪ್ರಗತಿ ಪಥದಲ್ಲಿ ಸಾಗಲು ಎಲ್ಲರ ಸಹಕಾರ ಪಡೆದು ಮುನ್ನಡೆಸುತ್ತೇನೆ” ಎಂದು ಹೇಳಿದರು.
ಮಳ್ಳೂರು ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದ ಉಪಾಧ್ಯಕ್ಷ ನಿಶಾಂತ್, ನಿರ್ದೇಶಕರಾದ ಜಿ.ಎಂ.ರಾಮರೆಡ್ಡಿ, ಬಿ.ಎಂ. ವೆಂಕಟರೆಡ್ಡಿ, ಕೆ.ಮುನಿರಾಜು, ಆರ್.ಮುರಳಿ, ಬಿ.ಪಿ. ಹೇಮಂತ್ ಕುಮಾರ್, ಎಂ.ಎನ್. ಶ್ರೀನಿವಾಸ್ ಮೂರ್ತಿ, ಎನ್. ಅಣ್ಣಪ್ಪ, ಎ.ಬಿ. ನಾಗರಾಜ್, ಟಿ.ಎಸ್. ಶಶಿಕಲಾ, ಆರ್. ವಿ. ರೇಣುಕಾ, ಭಕ್ತರಹಳ್ಳಿ ಮುನೇಗೌಡ, ಗಂಗನಹಳ್ಳಿ ವೆಂಕಟೇಶಪ್ಪ, ಮುತ್ತೂರು ಚಂದ್ರೇಗೌಡ, ಕುಶಾಲ್, ಲಕ್ಷ್ಮೀನಾರಾಯಣಪ್ಪ, ಚೆನ್ನೇಗೌಡ, ರಾಮಚಂದ್ರ, ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಆನಂದ್, ತೊಟ್ಲಗನಹಳ್ಳಿ ಭೀಮಣ್ಣ, ಸಿಇಓ ಮಂಜುನಾಥ್ ಹಾಜರಿದ್ದರು.







