Home News ಜೆಡಿಎಸ್ ಮುಖಂಡ ಮೇಲೂರು ರವಿಕುಮಾರ್ ಅವರಿಗೆ ಪಿತೃವಿಯೋಗ

ಜೆಡಿಎಸ್ ಮುಖಂಡ ಮೇಲೂರು ರವಿಕುಮಾರ್ ಅವರಿಗೆ ಪಿತೃವಿಯೋಗ

0
Sidlaghatta Melur B N Ravikumar Father Narayanaswamy Demise

ಜೆಡಿಎಸ್ ಮುಖಂಡ ಮೇಲೂರು ರವಿಕುಮಾರ್ ಅವರ ತಂದೆ ಭೀಮಣ್ಣನವರ ನಾರಾಯಣಸ್ವಾಮಿ (84) ಶುಕ್ರವಾರ ರಾತ್ರಿ ವಯೋಸಹಜ ಅನಾರೋಗ್ಯದಿಂದ ನಿಧನರಾಗಿದ್ದಾರೆ.

ಮೃತರು ಪತ್ನಿ, ಇಬ್ಬರು ಪುತ್ರಿಯರು, ಮೂವರು ಗಂಡು ಮಕ್ಕಳು ಸೇರಿದಂತೆ ಮೊಮ್ಮಕ್ಕಳು ಹಾಗು ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.
ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಕೇಂದ್ರದ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ, ಚಿಕ್ಕಬಳ್ಳಾಪುರ ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ, ಜೆಡಿಎಸ್ ಜಿಲ್ಲಾಧ್ಯಕ್ಷ ಮುನೇಗೌಡ, ಮುಖಂಡರಾದ ವಕ್ಕಲೇರಿ ರಾಮು, ಬಂಕ್ ಮುನಿಯಪ್ಪ, ಕೆ.ವಿ.ನಾಗರಾಜ್, ಯಲುವಹಳ್ಳಿ ರಮೇಶ್, ಡಾ.ಡಿ.ಕೆ.ರಮೇಶ್, ಇಂಚರ ಗೋವಿಂದರಾಜು, ಆಂಜಿನಪ್ಪ(ಪುಟ್ಟು), ನಂದನವನA ಶ್ರೀರಾಮರೆಡ್ಡಿ ಮತ್ತಿತರರು ಭೇಟಿ ನೀಡಿ ಮೃತರ ಅಂತಿಮ ದರ್ಶನ ಪಡೆದರು.

ಮೃತರ ಅಂತ್ಯಕ್ರಿಯೆಯನ್ನು ಮೇಲೂರಿನಲ್ಲಿ ಶನಿವಾರ ನೆರವೇರಿಸಲಾಯಿತು.

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version