Home News ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟನೆ

ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟನೆ

0
Sidlaghatta Women Milk Producers Handiganala New Building

ತಾಲ್ಲೂಕಿನ ಹಂಡಿಗನಾಳ ಗ್ರಾಮದಲ್ಲಿ ಗುರುವಾರ ಹಂಡಿಗನಾಳ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ನೂತನ ಕಟ್ಟಡವನ್ನು ಉದ್ಘಾಟಿಸಿ ಶಾಸಕ ವಿ.ಮುನಿಯಪ್ಪ ಮಾತನಾಡಿದರು.

ಹಂಡಿಗನಾಳದ ಹಾಲು ಉತ್ಪಾದಕರ ಮಹಿಳಾ ಸಂಘವು ಸ್ವಾವಲಂಬನೆಯ ದ್ಯೋತಕವಾಗಿ ಅತ್ಯುತ್ತಮ ಸುಸಜ್ಜಿತವಾದ ಸ್ವಂತ ಕಟ್ಟಡವನ್ನು ಹೊಂದುತ್ತಿರುವುದು ಹೆಮ್ಮೆಯ ಸಂಗತಿ. ಸ್ತ್ರೀ ಸಬಲೀಕರಣದ ದ್ಯೋತಕವಾಗಿ ಇದು ತಾಲ್ಲೂಕಿನಲ್ಲಿ ಎದ್ದು ನಿಂತಿದೆ ಎಂದು ಅವರು ತಿಳಿಸಿದರು.

 ಮಹಿಳೆಯರ ಸ್ವಾವಲಂಬನೆ, ಉಪ ಉದ್ಯೋಗ ಸೃಷ್ಟಿಯ ಉದ್ದೇಶದಿಂದ ಪ್ರಾರಂಭಗೊಂಡ ಹಂಡಿಗನಾಳದ ಹಾಲು ಉತ್ಪಾದಕರ ಮಹಿಳಾ ಸಂಘವು ಹೈನುಗಾರರ ಶ್ರೇಯೋಭಿವೃದ್ಧಿಯ ದೃಷ್ಟಿಯಿಂದ ಕಾರ್ಯನಿರ್ವಹಿಸುತ್ತಿದೆ. ಗುಣಮಟ್ಟದ ಹಾಲು ಉತ್ಪಾದನೆಯಲ್ಲಿ ಯಾವುದೇ ರೀತಿಯ ರಾಜಿಯಿಲ್ಲದೆ ವ್ಯವಹರಿಸುತ್ತಿದೆ ಎಂದು ಹೇಳಿದರು.

 ಕೋಚಿಮುಲ್ ನಿರ್ದೇಶಕ ಆರ್.ಶ್ರೀನಿವಾಸ್ ಮಾತನಾಡಿ, 2006 ರಲ್ಲಿ ಪ್ರಾರಂಭವಾದ ಹಂಡಿಗನಾಳ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ ಸ್ವಂತ ಕಟ್ಟಡವನ್ನು ಹೊಂದುವುದರೊಂದಿಗೆ ಕೋಲಾರ ಮತ್ತು ಚಿಕ್ಕಬಳ್ಳಾಪುರ ಎರಡೂ ಜಿಲ್ಲೆಗಳಲ್ಲಿ ಸ್ವಂತ ಕಟ್ಟಡವನ್ನು ಹೊಂದಿದ ಮೊಟ್ಟಮೊದಲ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ ಎಂಬುದಾಗಿ ಇತಿಹಾಸವನ್ನು ನಿರ್ಮಿಸಿದೆ. ಶಿಡ್ಲಘಟ್ಟ ತಾಲ್ಲೂಕಿನಲ್ಲಿ 17 ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘಗಳಿವೆ. ಇದೇ ಮಾದರಿಯಲ್ಲಿ ಇತರರೂ ಕಾರ್ಯತತ್ಪರರಾಗಬೇಕಿದೆ ಎಂದರು.

 ಹಂಡಿಗನಾಳದ ಹಾಲು ಉತ್ಪಾದಕರ ಮಹಿಳಾ ಸಂಘದ ಅಧ್ಯಕ್ಷೆ ಎಂ.ಆರ್.ಸುಜಾತ ನಾಗರಾಜು, ಕೋಚಿಮುಲ್ ನಿರ್ದೇಶಕಿ ಸುನಂದಮ್ಮ, ಉಪವ್ಯವಸ್ಥಾಪಕ ಬಿ.ವಿ.ಚಂದ್ರಶೇಖರ್, ಪ್ರಭು, ಗುಲಾಬ್ ಜಾನ್, ಎನ್.ಬಿ.ಜಯಚಂದ್ರ, ಹಂಡಿಗನಾಳದ ಹಾಲು ಉತ್ಪಾದಕರ ಮಹಿಳಾ ಸಂಘದ ನಿರ್ದೇಶಕರಾದ ಬೈರಮ್ಮ, ಮುನಿರತ್ನಮ್ಮ, ಎಸ್.ಎನ್.ಕಲ್ಪನ, ಅನಿತಾ, ಪಾರಿಜಾತ, ಮಂಜುಳಮ್ಮ, ಅನಿತಾ ಪ್ರಕಾಶ್, ಚಿಕ್ಕಮ್ಮ, ಜಯಮ್ಮ, ವೆಂಕಟಲಕ್ಷ್ಮಮ್ಮ ಸಿಬ್ಬಂದಿ ರೂಪಮ್ಮ, ಲಕ್ಷ್ಮಮ್ಮ, ನಾಗವೇಣಿ, ಮುನಿನರಸಮ್ಮ ಹಾಜರಿದ್ದರು.

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.

error: Content is protected !!
Exit mobile version