27.1 C
Sidlaghatta
Friday, March 29, 2024

ಶಾಲಾ ಮಕ್ಕಳಿಗೆ ಅಮ್ಮನ ಪ್ರೀತಿಯ ಕೈ ತುತ್ತು

- Advertisement -
- Advertisement -

Kachahalli, Sidlaghatta : ಮಕ್ಕಳಿಗೆ ಮಾತೃ ಪ್ರೇಮದ ಜೊತೆಗೆ ಕೈ ತುತ್ತು ಉಣಿಸುವ ಈ ಕಾರ್ಯಕ್ರಮ ತುಂಬಾ ವೈಶಿಷ್ಟ್ಯಪೂರ್ಣವಾಗಿದ್ದು ತಾಯಿ ಮಕ್ಕಳ ಬಾಂದವ್ಯ ಮತ್ತಷ್ಟು ಗಟ್ಟಿಗೊಳಿಸುವ ಇಂತಹ ಕಾರ್ಯಕ್ರಮಗಳು ಶಾಲೆಗಳಲ್ಲಿ ಹೆಚ್ಚು ಹೆಚ್ಚಾಗಿ ನಡೆಯಬೇಕು ಎಂದು ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಆಂಜನೇಯ ಹೇಳಿದರು.

ಶಿಡ್ಲಘಟ್ಟ ತಾಲ್ಲೂಕಿನ ಕಾಚಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಹಾಗು ಅಂಗನವಾಡಿ ಮಕ್ಕಳಿಗಾಗಿ ಸೋಮವಾರ ಅಮ್ಮನ ಪ್ರೀತಿಯ ಕೈ ತುತ್ತು ಎಂಬ ಶೀರ್ಷಿಕೆಯಡಿಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ತಾಯಿಯ ಪ್ರೀತಿ ನಿಷ್ಕಲ್ಮಶವಾಗಿದ್ದು ತಾಯಂದಿರ ಪ್ರೀತಿಯ ಜೊತೆಗೆ ಕೈ ತುತ್ತು ಸವಿಯುತ್ತಿರುವ ಶಾಲಾ ಮಕ್ಕಳು ನಿಜಕ್ಕೂ ಪುಣ್ಯವಂತರು ಎಂದರು.
ಕಾರ್ಯಕ್ರಮದಲ್ಲಿ ತಾಯಂದಿರು ತಾವು ತಯಾರಿಸಿದ ವಿವಿಧ ರೀತಿಯ ಆಹಾರವನ್ನು ಮಕ್ಕಳಿಗೆ ಕೈ ತುತ್ತು ಮಾಡಿ ತಿನ್ನಿಸಿದರು.

ಕ್ಷೇತ್ರ ಶಿಕ್ಷಣ ಸಮನ್ವಯಾಧಿಕಾರಿ ಎನ್.ತ್ಯಾಗರಾಜು, ಮೇಲೂರು ಸಿಆರ್‌ಪಿ ಶೀಲಾ, ಎಸ್ ಡಿ ಎಂ ಸಿ ಅಧ್ಯಕ್ಷೆ ಉಮಾ, ಗ್ರಾ.ಪಂ ಸದಸ್ಯ ಮುನಿರಾಜು, ಬಿಆರ್‌ಪಿ ಗಳಾದ ಲಕ್ಷ್ಮಿನಾರಾಯಣ, ವೇಣು ಮಾಧವಿ, ತಾಲೂಕು ದೈಹಿಕ ಪರಿವೀಕ್ಷಕ ದೇವೇಂದ್ರ, ಮುಖ್ಯಶಿಕ್ಷಕಿ ಆರ್.ರಾಜೇಶ್ವರಿ, ಸಹ ಶಿಕ್ಷಕ ಚಂದ್ರಶೇಖರ್.ವಿ. ಅಂಗನವಾಡಿ ಕಾರ್ಯಕರ್ತೆ ಸುಜಾತ. ಮತ್ತಿತರರು ಹಾಜರಿದ್ದರು.


Mother-child bond through Ammana Preetiya Kai Tuthu Program in schools

Kachahalli, Sidlaghatta : Akshara Dasoha Assistant Director Anjaneya has emphasized the importance of strengthening the mother-child bond through hand-feeding programs in schools. Speaking at the “Ammana Preetiya Kai Tuthu” program organized for the children of the government junior primary school and anganwadi of Kachahalli village in the taluk, Anjaneya lauded the initiative and stressed that such programs should be held more often.

During the program, the mothers of the children fed them different types of food prepared by them with their own hands, symbolizing the pure love of a mother. Anjaneya praised the children who were enjoying this love, calling them “truly virtuous.”

The event was attended by several education officials and community leaders, including Field Education Co-ordinator N.Thyagaraju, Melur CRP Sheela, SDMC President Uma, Village Committee Member Muniraju, BRPs Lakshminarayan and Venu Madhavi, Taluk Physical Inspector Devendra, Head Teacher R.Rajeshwari, Associate Teacher Chandrasekhar.V., and Anganwadi worker Sujata.

Overall, the “Ammana Preetiya Kai Tuthu” program was a successful initiative aimed at strengthening the bond between mothers and children in the local community. Anjaneya’s endorsement of the program highlights the importance of nurturing this bond, and suggests that similar initiatives may be introduced in schools and communities across the region.

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
error: Content is protected !!