ಟೊಮೆಟೊ ತುಂಬಿದ್ದ ಕ್ಯಾಂಟರ್ ಪಲ್ಟಿ: ಹೆದ್ದಾರಿಯಲ್ಲಿ 300ಕ್ಕೂ ಹೆಚ್ಚು ಬಾಕ್ಸ್ ಚೆಲ್ಲಾಪಿಲ್ಲಿ

Overturned canter with spilled tomato crates on a highway as a police officer looks on

Sidlaghatta : ಟೊಮೆಟೊ ತುಂಬಿದ್ದ ಕ್ಯಾಂಟರ್ ಪಲ್ಟಿಯಾದ ಘಟನೆ ಶಿಡ್ಲಘಟ್ಟ ತಾಲ್ಲೂಕಿನ ಲಕ್ಕಹಳ್ಳಿ ಗೇಟ್ ಸಮೀಪದ ರಾಷ್ಟ್ರೀಯ ಹೆದ್ದಾರಿ 234 ರಲ್ಲಿ ನಡೆದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಇದೇ ಹೆದ್ದಾರಿಯಲ್ಲಿ ಜುಲೈನಲ್ಲಿ ಟೊಮೆಟೊ ಲಾರಿ ಪಲ್ಟಿಯಾಗಿ ಚಾಲಕ, ಕ್ಲೀನರ್‌ಗೆ ಗಾಯವಾಗಿದ್ದ ಘಟನೆಯೂ ವರದಿಯಾಗಿತ್ತು.

ಅನಂತಪುರದಿಂದ ಚಿಂತಾಮಣಿ ಕಡೆಗೆ ಟೊಮೆಟೊ ಬಾಕ್ಸ್‌ಗಳನ್ನು ತುಂಬಿಕೊಂಡು ತೆರಳುತ್ತಿದ್ದ ಕ್ಯಾಂಟರ್, ಎದುರಿನಿಂದ ಬರುತ್ತಿದ್ದ ಕಾರಿಗೆ ದಾರಿ (ಸೈಡ್) ನೀಡಲು ಯತ್ನಿಸಿದಾಗ ಚಾಲಕನ ನಿಯಂತ್ರಣ ತಪ್ಪಿ ರಸ್ತೆಗೆ ಮಗುಚಿ ಬಿದ್ದಿದೆ. ಪರಿಣಾಮ ವಾಹನದಲ್ಲಿದ್ದ 300ಕ್ಕೂ ಹೆಚ್ಚು ಟೊಮೆಟೊ ಬಾಕ್ಸ್‌ಗಳು ಹಾಗೂ ಟೊಮೆಟೊಗಳು ರಸ್ತೆಯಾದ್ಯಂತ ಚೆಲ್ಲಾಪಿಲ್ಲಿಯಾಗಿ ಬಿದ್ದವು.

Police and locals at the spot where a tomato-laden canter overturned on the highway

ಸಂಚಾರಕ್ಕೆ ಅಡಚಣೆಯಾಯಿತೇ?

ಅಪಘಾತದಿಂದಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲಕಾಲ ವಾಹನ ಸಂಚಾರಕ್ಕೆ ಅಡಚಣೆಯುಂಟಾಯಿತು. ಸಮಾಚಾರ ತಿಳಿಯುತ್ತಿದ್ದಂತೆ 112 ತುರ್ತು ಸ್ಪಂದನ ವಾಹನದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ರಸ್ತೆ ಸಂಚಾರವನ್ನು ಸುಗಮಗೊಳಿಸಿದರು.

Sidlaghatta WhatsApp Channel Group

For Daily Updates WhatsApp ‘HI’ to 7406303366

Be a reporter

ಊರಿನ ಸುದ್ದಿ, ಫೋಟೋ ಕಳುಹಿಸಿ.

Report an error in this story

ಇದನ್ನೂ ಓದಿ