Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಬಸವಾಪಟ್ಟಣ ಗ್ರಾಮದ ಸಮೀಪ ನಡೆಯುತ್ತಿದ್ದ ಇಸ್ಪೀಟ್ ಅಡ್ಡೆಯ ಮೇಲೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ (ಎಸ್.ಪಿ) ವಿಶೇಷ ತಂಡ ದಾಳಿ ನಡೆಸಿ 7 ಮಂದಿಯನ್ನು ಬಂಧಿಸಿದೆ.
ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ತಂಡವು ₹2,02,800 ನಗದು, 7 ಮೊಬೈಲ್ ಫೋನ್‌ಗಳು ಹಾಗೂ 3 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದೆ. ಬಂಧಿತರು ಹಾಗೂ ಜಪ್ತಿ ಮಾಡಿದ ವಸ್ತುಗಳನ್ನು ಮುಂದಿನ ಕ್ರಮಕ್ಕಾಗಿ ಶಿಡ್ಲಘಟ್ಟ ಗ್ರಾಮಾಂತರ ಠಾಣೆಗೆ ಹಸ್ತಾಂತರಿಸಲಾಗಿದೆ. ಠಾಣೆಯ ಪಿ.ಎಸ್.ಐ ಸುನೀಲ್ ಕುಮಾರ್ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಬಂಧಿತರೆಂದು ಗುರುತಿಸಲಾದವರು: ದೇವರಾಜ್ ಕೆ. (43, ಚನ್ನರಾಯಪಟ್ಟಣ, ದೇವನಹಳ್ಳಿ ತಾಲ್ಲೂಕು); ಮುನಿಕೃಷ್ಣ ಕೆ.ಎಂ. (53, ಕಸಗುಟ್ಟಹಳ್ಳಿ, ಚಿಕ್ಕಬಳ್ಳಾಪುರ ತಾಲ್ಲೂಕು); ಶ್ರೀನಿವಾಸ (27, ದಿನ್ನಹಳ್ಳಿ, ಗುಡಿಬಂಡೆ ತಾಲ್ಲೂಕು); ಮಂಜುನಾಥರೆಡ್ಡಿ ಕೆ.ಆರ್. (46, ಕೊನಂಪಲ್ಲಿ, ಚಿಂತಾಮಣಿ ತಾಲ್ಲೂಕು); ಮನೋಜ್ (27, ಹನುಮಂತಪುರ, ಶಿಡ್ಲಘಟ್ಟ ತಾಲ್ಲೂಕು); ಗೋವಿಂದಪ್ಪ (65, ವೆಂಕಟಗಿರಿಕೋಟೆ, ದೇವನಹಳ್ಳಿ ತಾಲ್ಲೂಕು); ಮತ್ತು ನಿಖಿಲ್ (31, ತಾತಹಳ್ಳಿ, ಹಾಲಿ ವಾಸ ಬಸವಾಪಟ್ಟಣ).
In English: A special team led by the district Superintendent of Police raided an illegal card-gambling operation near Basavapattana village in Shidlaghatta taluk, arresting seven men and seizing over ₹2 lakh in cash along with mobile phones and two-wheelers. A case has been registered at Shidlaghatta Rural Police Station and the investigation is underway.








