ಜಾಬ್ ಕಾರ್ಡ್ ಮೇಳ: ಕೂಲಿ ₹382ಕ್ಕೆ, ವಾರ್ಷಿಕ ಉದ್ಯೋಗ ದಿನ 125ಕ್ಕೆ ಹೆಚ್ಚಳ

- Advertisement -
- Advertisement -

Sidlaghatta : ತಾಲ್ಲೂಕಿನ ಅಬ್ಲೂಡು ಹಾಗೂ ಆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗುರುವಾರ ಜಾಬ್ ಕಾರ್ಡ್ ಮೇಳ ಆಯೋಜಿಸಿ, ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಹಾಗೂ “ವಿಬಿ-ಜಿ ರಾಮ್-ಜಿ” ಯೋಜನೆ ಕುರಿತು ಸಾರ್ವಜನಿಕರಿಗೆ ಅಧಿಕಾರಿಗಳು ಮಾಹಿತಿ ನೀಡಿದರು.

ಅಬ್ಲೂಡು ಗ್ರಾಮ ಪಂಚಾಯಿತಿಯಲ್ಲಿ ನಡೆದ ಮೇಳದಲ್ಲಿ ಯೋಜನೆಯ ಅನುಷ್ಠಾನ, ಕೂಲಿ ಮೊತ್ತ, ವಾರ್ಷಿಕ ಮಾನವ ದಿನಗಳ ಹೆಚ್ಚಳ ಸೇರಿದಂತೆ ವಿವಿಧ ಮಾಹಿತಿಯ ಕರಪತ್ರಗಳನ್ನು ವಿತರಿಸಲಾಯಿತು. ಕೂಲಿ ಮೊತ್ತವನ್ನು ₹370ರಿಂದ ₹382ಕ್ಕೆ ಹಾಗೂ ವಾರ್ಷಿಕ ಮಾನವ ದಿನಗಳನ್ನು 100ರಿಂದ 125ಕ್ಕೆ ಹೆಚ್ಚಿಸಿರುವ ಕುರಿತು ತಿಳಿಸಲಾಯಿತು.

ಎನ್.ಎಂ.ಎಂ.ಎಸ್ ಹಾಜರಾತಿ, ಕೂಲಿ ಪಾವತಿ, ವೈಯಕ್ತಿಕ ಕಾಮಗಾರಿಗಳು, ಕೆಲಸಕ್ಕೆ ಬೇಡಿಕೆ ಸಲ್ಲಿಸುವ ವಿಧಾನ, ಹೊಸ ಜಾಬ್ ಕಾರ್ಡ್ ಪಡೆಯುವ ಕ್ರಮ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಮಾಹಿತಿ ನೀಡಲಾಯಿತು. ಹೊಸ ಯೋಜನೆಯಡಿ 318 ಕಾಮಗಾರಿಗಳನ್ನು ಕೈಗೊಳ್ಳಲು ಅವಕಾಶವಿದೆ ಎಂದು ಅಧಿಕಾರಿಗಳು ತಿಳಿಸಿದರು.

ಆನೂರಿನಲ್ಲೂ ಮೇಳ

ಆನೂರು ಗ್ರಾಮ ಪಂಚಾಯಿತಿಯಲ್ಲೂ ವಿಶೇಷ ಜಾಬ್ ಕಾರ್ಡ್ ಮೇಳ ಆಯೋಜಿಸಲಾಗಿತ್ತು. ಹೊಸ ಜಾಬ್ ಕಾರ್ಡ್‌ ಗೆ ಅರ್ಜಿ ಸಲ್ಲಿಸುವಂತೆ ಗ್ರಾಮಸ್ಥರಿಗೆ ಮನವಿ ಮಾಡಲಾಯಿತು. ಕೂಲಿ ಕೆಲಸದ ಅಗತ್ಯವಿರುವವರು ನಿಯಮಾನುಸಾರ ಬೇಡಿಕೆ ಸಲ್ಲಿಸಿದರೆ ಉದ್ಯೋಗ ಕಲ್ಪಿಸುವ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.

ಮೇಳದಲ್ಲಿ ಹೊಸ ಜಾಬ್ ಕಾರ್ಡ್‌ ಗಳಿಗೆ ನೋಂದಣಿ ಮಾಡಿಕೊಳ್ಳಲಾಯಿತು. ಕುಟುಂಬ ವಿಂಗಡಣೆ ಸೇರಿದಂತೆ ವಿವಿಧ ಕುಂದುಕೊರತೆಗಳನ್ನು ದೂರು ವಹಿಯಲ್ಲಿ ದಾಖಲಿಸಿಕೊಂಡು, ನಿಗದಿತ ಅವಧಿಯಲ್ಲಿ ಪರಿಹರಿಸುವುದಾಗಿ ತಿಳಿಸಿದರು.

ಮನೆ ಮನೆಗೆ ಭೇಟಿ ನೀಡಿ, ಕುರಿ ಶೆಡ್ ಮತ್ತು ಮೇಕೆ ಶೆಡ್ ಅಗತ್ಯವಿರುವ ಫಲಾನುಭವಿಗಳನ್ನು ಗುರುತಿಸಿದರು. ಕೆಲ ಫಲಾನುಭವಿಗಳ ಸ್ಥಳಗಳನ್ನು ಜಿಪಿಎಸ್ (GPS) ಮೂಲಕ ದಾಖಲಿಸಲಾಯಿತು.

ಅಬ್ಲೂಡು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಮತ, ಕಾರ್ಯದರ್ಶಿಗಳಾದ ಮಂಜುನಾಥ್ ಮತ್ತು ಶ್ರೀನಿವಾಸ್, ತಾಲ್ಲೂಕು ಐಇಸಿ ಸಂಯೋಜಕ ಲೋಕೇಶ್, ಎಂಜಿನಿಯರ್‌ ಗಳಾದ ಗೌತಮ್ ರಾಜ್ ಮತ್ತು ಮೇಘನಾ, ಬಿಎಫ್‌ಟಿ ಮುನೇಶ್ ಮತ್ತು ಬಾಬು, ಕಾಯಕಮಿತ್ರ ಅನಿತ ಸೇರಿದಂತೆ ಗ್ರಾಮ ಪಂಚಾಯಿತಿ ಸಿಬ್ಬಂದಿ ಇದ್ದರು.

ಇದೇ ವಿಬಿ-ಜಿ ರಾಮ್-ಜಿ ಯೋಜನೆ ಕುರಿತು ತಾಲ್ಲೂಕಿನ ಇತರೆಡೆಯೂ 125 ದಿನಗಳ ಉದ್ಯೋಗ ಖಾತರಿ ಜಾಬ್ ಕಾರ್ಡ್ ಮೇಳ ಈ ಹಿಂದೆ ನಡೆದಿತ್ತು.

In English: Officials organized MGNREGA (Mahatma Gandhi National Rural Employment Guarantee Act) job card fairs at Ablodu and Anur gram panchayats in Sidlaghatta taluk, informing residents about the scheme and the “VB-G Ram-G” initiative. They announced the daily wage has been raised from ₹370 to ₹382 and annual guaranteed work days increased from 100 to 125, with 318 new works planned under the scheme. New job card registrations were taken, household grievances logged, and beneficiaries needing sheep/goat sheds identified via door-to-door visits with GPS-recorded locations.

Sidlaghatta WhatsApp Channel Group

For Daily Updates WhatsApp ‘HI’ to 7406303366

For Daily Updates

WhatsApp 'HI' to 7406303366

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -
Sidlaghatta News Desk
Sidlaghatta News Deskhttp://www.sidlaghatta.com
The editorial desk of Sidlaghatta.com (Namma Shidlaghatta), covering civic affairs, agriculture, silk trade, and local government news for Sidlaghatta taluk, Karnataka.

Just Published

Latest news

- Advertisement -

Silk

Related news

- Advertisement -