Home News ಮೀನು ಹಿಡಿಯಲು ಹೋದ ಬಾಲಕ ನೀರು ಪಾಲು

ಮೀನು ಹಿಡಿಯಲು ಹೋದ ಬಾಲಕ ನೀರು ಪಾಲು

0
Sidlaghatta Bashettihalli Fishing Boy Drowning water

Bashettihalli, Sidlaghatta : ಶಿಡ್ಲಘಟ್ಟ ತಾಲೂಕಿನ ಬಶೆಟ್ಟಹಳ್ಳಿ ಹೋಬಳಿಯ ವಲಸೇನಹಳ್ಳಿ ಗ್ರಾಮದ ರಾಜನಕರೆಯಲ್ಲಿ ಮೀನು ಹಿಡಿಯಲು ಹೋಗಿ ಬಾಲಕ ಮೃತಪಟ್ಟಿರುವ ಘಟನೆ ನಡೆದಿದೆ.

ಚೇಳೂರಿನ ತಾಲೂಕಿನ ಗೆರಿಗಿರೆಡ್ಡಿಪಾಳ್ಯದ ರಾಮು ಕುಟುಂಬಸ್ಥರು ದಿಟ್ಟೂರಹಳ್ಳಿ ಗ್ರಾಮದ ನೆಂಟರ ಮನೆಗೆ ಬಂದಾಗ, ಕೆರೆಯಲ್ಲಿ ಮೀನು ಹಿಡಿಯಲು ಹೋಗಿದ್ದ ಗಂಗಯ್ಯ (13) ಆಯಾತಪ್ಪಿ ನೀರಿಗೆ ಬಿದ್ದಿದ್ದು, ಹೂಳಿನಲ್ಲಿ ಸಿಲುಕಿ, ಮತ್ತೆ ಮೇಲೆ ಬರಲಾಗದೇ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಪೋಷಕರು ಬಾಲಕನನ್ನು ಹುಡುಕಿದರೂ ಸಿಗದ ಕಾರಣ ತಕ್ಷಣವೇ ಅಗ್ನಿಶಾಮಕ ದಳ ಸಿಬ್ಬಂದಿಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಶೋಧ ಕಾರ್ಯಾಚರಣೆ ನಡೆಸಿ ಮಣ್ಣಿನಲ್ಲಿ ಸಿಲುಕಿಕೊಂಡಿದ್ದ ಬಾಲಕನನ್ನು ಮೇಲೆತ್ತಿದ್ದಾರೆ. ಆದರೆ, ಅಷ್ಟರಲ್ಲಾಗಲೇ ಬಾಲಕ ಮೃತಪಟ್ಟಿದ್ದ. ದಿಬೂರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version