Home News BJP ಸೇವಾ ಸೌಧ ಕಚೇರಿಯಲ್ಲಿ ಬಲಿದಾನ ದಿವಸ್ ಆಚರಣೆ

BJP ಸೇವಾ ಸೌಧ ಕಚೇರಿಯಲ್ಲಿ ಬಲಿದಾನ ದಿವಸ್ ಆಚರಣೆ

0

Sidlaghatta : ಭಾರತ ದೇಶದ ಮುಕುಟ ಮಣಿ ಜಮ್ಮು ಮತ್ತು ಕಾಶ್ಮೀರದಲ್ಲಿ 371 ವಿಶೇಷ ಕಾಯಿದೆಯ ಸ್ಥಾನಮಾನವನ್ನು ರದ್ದುಪಡಿಸಬೇಕೆಂದು ನಡೆದ ಹೋರಾಟದ ಮುಂಚೂಣಿಯಲ್ಲಿ ನಿಂತಿದ್ದವರು ಶ್ಯಾಂ ಪ್ರಸಾದ್ ಮುಖರ್ಜಿ. ಅವರದ್ದು ದೂರದೃಷ್ಟಿಯ ನಾಯಕತ್ವ, ಆಲೋಚನೆಯಾಗಿತ್ತು ಎಂದು BJP ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರಗೌಡ ತಿಳಿಸಿದರು.

ನಗರದ ಮಯೂರ ವೃತ್ತದ ಬಿಜೆಪಿ ಸೇವಾ ಸೌಧ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಶ್ಯಾಂ ಪ್ರಸಾದ್ ಮುಖರ್ಜಿ ಅವರ ಬಲಿದಾನ ದಿವಸ್ ಆಚರಣೆಯಲ್ಲಿ ಅವರು ಮಾತನಾಡಿದರು.

ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ 371 ನೇ ಕಾಯಿದೆಯಿಂದ ದೇಶದ ಅಭಿವೃದ್ದಿಗೆ ಮಾರಕವಾಗುತ್ತಿದೆ. ಸೌಹಾರ್ಧತೆಗೆ ದಕ್ಕೆಯಾಗುತ್ತಿದೆ. ಮುಖ್ಯವಾಗಿ ಅಸಮಾನತೆಯ ಹೊಗೆ ಹೆಚ್ಚುತ್ತಿದೆ ಎಂದು 371 ನೇ ವಿಧಿಯನ್ನು ರದ್ದುಪಡಿಸಬೇಕೆಂದು ದೇಶದ ಉದ್ದಗಲಕ್ಕೂ ಹೋರಾಟ ಆರಂಭವಾಯಿತು.

ನೆಹರೂ ಅವರು ಪ್ರಧಾನಿ ಆಗಿದ್ದಾಗ ಆರಂಭವಾದ ಈ ಹೋರಾಟದ ಮುಂಚೂಣಿಯ ನಾಯಕರಲ್ಲಿ ಶ್ಯಾಂ ಪ್ರಸಾದ್ ಮುಖರ್ಜಿ ಪ್ರಮುಖರಾಗಿದ್ದು ಅವರನ್ನು ಬಂಧಿಸಲಾಯಿತು. ಆನಂತರ ಅವರು ಏನಾದರು ಎಂದು ಈ ಕ್ಷಣಕ್ಕೂ ಯಾರಿಗೂ ಗೊತ್ತಿಲ್ಲ. ನಿಗೂಢವಾಗಿಯೆ ಇದೆ ಎಂದರು.

ಈ ದಿನವನ್ನು ಬಲಿದಾನ್ ದಿವಸ್ ಆಗಿ ಆಚರಿಸಿ ಶ್ಯಾಂ ಪ್ರಸಾದ್ ಮುಖರ್ಜಿ ಅವರ ಬದಕು, ಜೀವನವನ್ನು ಸ್ಮರಿಸುವ ಕೆಲಸ ದೇಶದ ಉದ್ದಗಲಕ್ಕೂ ಆಗುತ್ತಿದೆ ಎಂದು ವಿವರಿಸಿದರು

ಮೋದಿ ಅವರು ಬಂದಾದ ನಂತರ ಜಮ್ಮು ಕಾಶ್ಮೀರಕ್ಕೆ ಮಾತ್ರ ನೀಡಿದ್ದ ವಿಶೇಷ ಕಾಯಿದೆಯನ್ನು ರದ್ದುಪಡಿಸಿ ಇಡೀ ದೇಶದ ಎಲ್ಲ ರಾಜ್ಯಗಳು, ಎಲ್ಲ ಜನರೂ ಒಂದೆ ಎಂದು ಸಂದೇಶವನ್ನು ನೀಡಿದರು. ಇದನ್ನು ಎಲ್ಲರೂ ಮನಗಾಣಬೇಕು. ಆ ಮೂಲಕ ಶ್ಯಾಂ ಪ್ರಸಾದ್ ಮುಖರ್ಜಿ ಅವರ ಆಸೆ ಈಡೇರಿದಂತಾಗಿದೆ ಎಂದು ಅಭಿಪ್ರಾಯಪಟ್ಟರು.

ಬಿಜೆಪಿ ಕಾರ್ಯಕರ್ತರು ಹಾಜರಿದ್ದರು.

For Daily Updates WhatsApp ‘HI’ to 7406303366

Namma Sidlaghatta WhatsApp Channel

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version