BJP ಕಾರ್ಯಕರ್ತರ ವಿಜಯೋತ್ಸವ

- Advertisement -
- Advertisement -

Sidlaghatta : 2026ರ ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಯ ಫಲಿತಾಂಶ ಸೋಮವಾರ ಹೊರಬಿದ್ದಿದ್ದು, ಪಶ್ಚಿಮ ಬಂಗಾಳ, ಪುದುಚೆರಿ ಮತ್ತು ಅಸ್ಸಾಂ ರಾಜ್ಯಗಳಲ್ಲಿ ಬಿಜೆಪಿ ಭರ್ಜರಿ ಮುನ್ನಡೆ ಸಾಧಿಸಿರುವ ಹಿನ್ನೆಲೆಯಲ್ಲಿ ಶಿಡ್ಲಘಟ್ಟದ ಬಿಜೆಪಿ ಸೇವಾಸೌಧದ ಮುಂದೆ ಬಿಜೆಪಿ ಕಾರ್ಯಕರ್ತರು ವಿಜಯೋತ್ಸವದ ಸಂಭ್ರಮಾಚರಣೆ ನಡೆಸಿದರು.

ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಸೀಕಲ್ ಆನಂದ ಗೌಡ ಮಾತನಾಡಿ, ಜನಸಂಘದ ಸ್ಥಾಪಕ ಶ್ಯಾಮಪ್ರಸಾದ್ ಮುಖರ್ಜಿ ಅವರ ತವರು ರಾಜ್ಯ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಪಟ್ಟಕ್ಕೇರುತ್ತಿದೆ 30 ವರ್ಷ ಕಾಂಗ್ರೆಸ್, 36 ವರ್ಷ ಮಾರ್ಕಿಸ್ಟ್, 15 ವರ್ಷ ಮಮತಾ ಬ್ಯಾನರ್ಜಿ ಆಳಿದ ಬಳಿಕ ಗಡಿನಾಡಿನಲ್ಲಿ ಬಿಜೆಪಿ ಬರುತ್ತಿದೆ

ಇದು ಕೇವಲ ಸಂಖ್ಯೆಗಳ ವಿಜಯವಲ್ಲ, ಜನತೆಯ ನಂಬಿಕೆಯ ವಿಜಯ. ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ, ದೇಶದ ಅಭಿವೃದ್ಧಿಯ ಕನಸುಗಳು ಈಗ ರೂಪು ಪಡೆಯುತ್ತಿವೆ ಎಂದು ಹೇಳಿದರು.

ಪಶ್ಚಿಮ ಬಂಗಾಳದಲ್ಲಿ ನಾವು ಐತಿಹಾಸಿಕ ವಿಜಯ ಸಾಧಿಸಿದ್ದೇವೆ. ಅಸ್ಸಾಂನಲ್ಲಿ ಮತ್ತು ಪುದುಚೆರಿಯಲ್ಲಿ ನಮ್ಮ ಕಾರ್ಯಕರ್ತರ ಶ್ರಮ ಸಾರ್ಥಕವಾಗಿದೆ. ಇದು ನಮ್ಮ ಪಕ್ಷದ ಶಕ್ತಿ, ಜನತೆಯ ಬೆಂಬಲದ ಸಾಕ್ಷಿ.ಇಂದು ನಾವು ಸಂಭ್ರಮಿಸುತ್ತಿದ್ದೇವೆ, ಆದರೆ ಇದು ಇನ್ನಷ್ಟು ಶ್ರಮದ ಆರಂಭ. ಕರ್ನಾಟಕದ ಭವಿಷ್ಯವನ್ನು ಇಂದಿನ ಚುನಾವಣಾ ಫಲಿತಾಂಶ ಪ್ರತಿಧ್ವನಿಸುತ್ತದೆ ಎಂದು ನುಡಿದರು.

ಬಿಜೆಪಿ ನಗರ ಮಂಡಲ ಅಧ್ಯಕ್ಷ ದೇವರಾಜ್, ಚೆಲುವರಾಜ್, ಜಯಂತಿಗ್ರಾಮ ನಾರಾಯಣಸ್ವಾಮಿ, ರಾಮಕೃಷ್ಣಪ್ಪ, ಪುರುಷೋತ್ತಮ್, ರಾಮಾಂಜಿ, ಅನಿಲ್ ಹಾಜರಿದ್ದರು.

Sidlaghatta WhatsApp Channel Group

For Daily Updates WhatsApp ‘HI’ to 7406303366

For Daily Updates

WhatsApp 'HI' to 7406303366

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!