ಬಸ್ ನಿಲ್ದಾಣ ನಿರ್ಮಾಣಕ್ಕೆ ಸರ್ಕಾರಿ ಜಾಗ ಸಿಗುವುದೇ? ಕಟ್ಟೆ ಖರಾಬು ಜಾಗ ಪರಿಶೀಲಿಸಿದ ತಹಶೀಲ್ದಾರ್

Sidlaghatta : ಜಂಗಮಕೋಟೆ ಹೋಬಳಿಯ ಕರಿಯನಪುರ (ಎಚ್. ಕ್ರಾಸ್) ಗ್ರಾಮದಲ್ಲಿ ಬಸ್ ನಿಲ್ದಾಣ ನಿರ್ಮಾಣಕ್ಕೆ ಸರ್ಕಾರಿ ಜಾಗ ಕಾಯ್ದಿರಿಸಬೇಕೆಂಬ ಗ್ರಾಮಸ್ಥರ ಮನವಿಗೆ ಸ್ಪಂದಿಸಿದ ತಹಶೀಲ್ದಾರ್ ಗಗನ ಸಿಂಧು ಎನ್. ಅವರು ಬುಧವಾರ ಗ್ರಾಮಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.
ಗ್ರಾಮದಲ್ಲಿರುವ ಸರ್ಕಾರಿ ಕಟ್ಟೆ ಖರಾಬು ಜಾಗವನ್ನು ನೋಡಿದ ಅವರು, ನಿಲ್ದಾಣ ಕಟ್ಟಲು ಆ ಸ್ಥಳ ಸೂಕ್ತವೇ ಎಂಬುದನ್ನು ಪರಿಶೀಲಿಸಿದರು. ಗ್ರಾಮಸ್ಥರ ಅಗತ್ಯ, ಅಭಿಪ್ರಾಯ ಮತ್ತು ಬೇಡಿಕೆಗಳನ್ನು ಆಲಿಸಿದರು.

ಜಾಗದ ಲಭ್ಯತೆ ಹಾಗೂ ನಿಯಮಾನುಸಾರ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಅವರು ಮಾಹಿತಿ ಪಡೆದರು. ಅಗತ್ಯ ದಾಖಲೆಗಳನ್ನು ಪರಿಶೀಲಿಸಿ, ಕಾನೂನಿನ ವ್ಯಾಪ್ತಿಯಲ್ಲಿ ಮುಂದಿನ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಇದೇ ವೇಳೆ ಕೆ.ಆರ್.ಡಿ.ಸಿ.ಎಲ್. ವತಿಯಿಂದ ನಡೆಯುತ್ತಿರುವ ರಾಜ್ಯ ಹೆದ್ದಾರಿ ಕಾಮಗಾರಿಯ ಪ್ರಗತಿಯನ್ನೂ ವೀಕ್ಷಿಸಿ, ಕಾಮಗಾರಿಯ ಸ್ಥಿತಿಗತಿಯ ಬಗ್ಗೆ ವಿವರ ಪಡೆದರು.
ಸಾರಿಗೆ ಸೌಲಭ್ಯ ಹಾಗೂ ಮೂಲಸೌಕರ್ಯ ಗ್ರಾಮೀಣರ ದೈನಂದಿನ ಬದುಕಿಗೆ ಮುಖ್ಯ. ಅಧಿಕಾರಿಗಳು ಖುದ್ದಾಗಿ ಬಂದು ಪರಿಶೀಲಿಸಿರುವುದು ಗ್ರಾಮಸ್ಥರಲ್ಲಿ ಆಶಾಭಾವನೆ ಮೂಡಿಸಿದೆ.
ಸಂಬಂಧಿತ ಸುದ್ದಿ: H Cross ವೃತ್ತದ ಬಸ್ ನಿಲ್ದಾಣ ಸ್ಥಳಾಂತರ | ಅಂತಿಮ ಮತದಾರರ ಪಟ್ಟಿ ಪ್ರಕಟ: 1,86,679 ಮತದಾರರು, ಮತಗಟ್ಟೆಗಳ ಸಂಖ್ಯೆ 255ಕ್ಕೆ ಏರಿಕೆ

For Daily Updates WhatsApp ‘HI’ to 7406303366
Summary in English
Responding to villagers’ request to reserve government land for a bus stand in Kariyanapura (H. Cross), Jangamakote hobli, Tahsildar Gagana Sindhu N. visited on Wednesday and inspected the government katte kharabu land, heard the villagers’ needs and asked officials to check the records and act within the rules. She also reviewed the progress of the KRDCL state highway work in the area. The visit has raised hopes among villagers.
Be a reporter
ಊರಿನ ಸುದ್ದಿ, ಫೋಟೋ ಕಳುಹಿಸಿ.
Send news



