Sidlaghatta : ರಾಷ್ಟ್ರೀಯ ಕೈಮಗ್ಗ ದಿನವನ್ನು ಆಗಸ್ಟ್ 7 ರಂದು ಆಚರಿಸಲಾಗುವ ಉದ್ದೇಶ ಕೈಮಗ್ಗ ಉದ್ಯಮವನ್ನು ಉತ್ತೇಜಿಸುವುದು ಮತ್ತು ನೇಕಾರ ಸಮುದಾಯದ ಕಾರ್ಯಕ್ಷಮತೆ ಹಾಗೂ ಕೊಡುಗೆಯನ್ನು ಗೌರವಿಸುವುದಾಗಿದೆ. ನಾವೆಲ್ಲರೂ ಕೈಮಗ್ಗದ ಉತ್ಪನ್ನಗಳನ್ನು ಕೊಂಡು ಬಳಸುವ ಮೂಲಕ ಕೈಮಗ್ಗ ನೇಕಾರಿಕೆಗೆ ಉತ್ತೇಜನ ನೀಡಬೇಕು ಎಂದು ಬಿಜೆಪಿ ತಾಲ್ಲೂಕು ಅಧ್ಯಕ್ಷ ಸೀಕಲ್ ಆನಂದಗೌಡ ತಿಳಿಸಿದರು.
ರಾಷ್ಟ್ರೀಯ ಕೈಮಗ್ಗ ದಿನದ ಅಂಗವಾಗಿ ನಗರದ ತಾಲ್ಲೂಕು ಪದ್ಮಶಾಲಿ ಸಂಘದ ಅಧ್ಯಕ್ಷ ಎಸ್.ಕೆ.ನಾಗರಾಜು ಮತ್ತು ರೇಷ್ಮೆ ಉದ್ದಿಮೆದಾರರಾದ ಲಕ್ಷ್ಮೀನಾರಾಯಣಪ್ಪ ಅವರಿಗೆ ಬಿಜೆಪಿ ಪಖ್ಶದ ವತಿಯಿಂದ ಗೌರವ ಸಲ್ಲಿಸಿ ಅವರು ಮಾತನಾಡಿದರು.
ಈ ದಿನವು 1905ರ ಸ್ವದೇಶಿ ಚಳುವಳಿ ಉದ್ಘಾಟನೆಯ ಸ್ಮರಣಾರ್ಥವಾಗಿದ್ದು, ಅದರಲ್ಲಿ ವಿದೇಶಿ ತಯಾರಿಕೆ ವಸ್ತುಗಳನ್ನು ಬಹಿಷ್ಕರಿಸಿ ಭಾರತೀಯ ಕೈಮಗ್ಗ ಮತ್ತು ಸ್ವದೇಶಿ ಉತ್ಪನ್ನಗಳನ್ನು ಉತ್ತೇಜಿಸುವುದು ಮುಖ್ಯ ಉದ್ದೇಶವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು 2015ರಲ್ಲಿ ಮೊದಲ ಬಾರಿ ಈ ದಿನವನ್ನು ಅಧಿಕೃತವಾಗಿ ಉದ್ಘಾಟಿಸಿದ್ದರು. ನಾವುಗಳೂ ಸ್ವದೇಶಿ ಉತ್ಪನ್ನಗಳಿಗೆ ಪ್ರಥಮ ಆದ್ಯತೆ ನೀಡೋಣ. ಸ್ವದೇಶಿ ಕುಶಲಕರ್ಮಿಗಳಿಗೆ ಉತ್ತೇಜನ ನೀಡೋಣ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ ಪಕ್ಷದ ನಿರ್ಮಲ, ಮಂಜುಳ, ನರ್ಮದಾ, ಪ್ರೇಮಲೀಲ, ರೂಪ, ನಂದಿನಿ ಹಾಜರಿದ್ದರು.