ನ.22ರ ಭಾನುವಾರ 8 ಗಂಟೆ ವಿದ್ಯುತ್ ವ್ಯತ್ಯಯ: ನಿಮ್ಮ ಭಾಗದ ಉಪಕೇಂದ್ರ ಪಟ್ಟಿಯಲ್ಲಿದೆಯೇ?

Glowing bulb filament in the dark for the BESCOM power cut notice in Sidlaghatta and Chintamani taluks on November 22

Sidlaghatta : ಶಿಡ್ಲಘಟ್ಟ ಹಾಗೂ ಚಿಂತಾಮಣಿ ತಾಲ್ಲೂಕುಗಳ ವ್ಯಾಪ್ತಿಯಲ್ಲಿ ನವೆಂಬರ್ 22ರ ಭಾನುವಾರ ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ (ಒಟ್ಟು 8 ಗಂಟೆಗಳ ಕಾಲ) ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ವಿದ್ಯುತ್ ಏಕೆ ಇರುವುದಿಲ್ಲ?

ಚಿಂತಾಮಣಿಯ 220/66 ಕೆ.ವಿ. ವಿದ್ಯುತ್ ಸ್ವೀಕರಣಾ ಕೇಂದ್ರದಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ (ಕೆಪಿಟಿಸಿಎಲ್) ವತಿಯಿಂದ ನಿರ್ವಹಣಾ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಈ ಕಾರಣದಿಂದ ಇಲ್ಲಿಂದ ವಿದ್ಯುತ್ ಪಡೆಯುವ ಉಪ ವಿದ್ಯುತ್ ಕೇಂದ್ರಗಳಿಗೆ ಸದರಿ ದಿನಾಂಕದಂದು ಸರಬರಾಜು ಸ್ಥಗಿತಗೊಳ್ಳಲಿದೆ.

ಯಾವ ಉಪಕೇಂದ್ರಗಳ ವ್ಯಾಪ್ತಿಯಲ್ಲಿ ವ್ಯತ್ಯಯ?

ಚಿಂತಾಮಣಿ ಹಾಗೂ ಶಿಡ್ಲಘಟ್ಟ ಪಟ್ಟಣಗಳು ಸೇರಿದಂತೆ ಈ ಎರಡು ತಾಲ್ಲೂಕುಗಳ ಎಲ್ಲಾ ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ಪ್ರಮುಖವಾಗಿ ಈ ಕೆಳಗಿನ 66/11 ಕೆ.ವಿ ಉಪ ವಿದ್ಯುತ್ ಕೇಂದ್ರಗಳ ವ್ಯಾಪ್ತಿಯಲ್ಲಿ ವಿದ್ಯುತ್ ಇರುವುದಿಲ್ಲ:

  • ಚಿಂತಾಮಣಿ
  • ಮುಸ್ತೇನಹಳ್ಳಿ ಕೈಗಾರಿಕಾ ವಲಯ
  • ತಳಗವಾರ
  • ಚೀಮಂಗಲ
  • ವೈ-ಹುಣಸೇನಹಳ್ಳಿ
  • ಕೆ.ರಾಗುಟ್ಟಹಳ್ಳಿ
  • ಬೊಮ್ಮೇಪಲ್ಲಿ ಕ್ರಾಸ್
  • ಏನಿಗದಲೆ
  • ಶಿಡ್ಲಘಟ್ಟ
  • ಮೇಲೂರು
  • ನಂದಿಗಾನಹಳ್ಳಿ
  • ಜಿ.ಕೋಡಿಹಳ್ಳಿ
  • ಇರಗಂಪಲ್ಲಿ
  • ಎಮ್.ಗೊಲ್ಲಹಳ್ಳಿ
  • ಗಂಜಿಗುಂಟೆ
  • ಬುರುಡುಗುಂಟೆ
  • ಪಲ್ಲಿಚರ್ಲು
  • ದಿಬ್ಬೂರಹಳ್ಳಿ
  • ಜಂಗಮಕೋಟೆ

ಯಾರು ಪ್ರಕಟಿಸಿದ್ದಾರೆ?

ಗ್ರಾಹಕರು ಹಾಗೂ ಸಾರ್ವಜನಿಕರು ಸಹಕರಿಸಬೇಕು ಎಂದು ಚಿಂತಾಮಣಿ ಬೆಸ್ಕಾಂ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ (ವಿದ್ಯುತ್) ಶ್ರೀನಾಥ್ ಕೆ. ಅವರು ನ.20ರಂದು ಹೊರಡಿಸಿದ ಪ್ರಕಟಣೆಯಲ್ಲಿ ಕೋರಿದ್ದಾರೆ.

BESCOM Chintamani division notice of power outage on 22 November 2026, 9 AM to 5 PM, in Chintamani and Sidlaghatta taluks
ಚಿಂತಾಮಣಿ ಬೆಸ್ಕಾಂ ವಿಭಾಗ ಹೊರಡಿಸಿರುವ ವಿದ್ಯುತ್ ವ್ಯತ್ಯಯದ ಪ್ರಕಟಣೆ

ಸಂಬಂಧಿತ ಸುದ್ದಿ: ಈ ಹಿಂದೆ ಹೊರಡಿಸಿದ್ದ ಜುಲೈ 19ರ ವಿದ್ಯುತ್ ವ್ಯತ್ಯಯ ಸೂಚನೆ ಹಾಗೂ ವಿದ್ಯುತ್ ಸಮಸ್ಯೆ ಹೇಳಿಕೊಳ್ಳಲು ನಡೆದ ಬೆಸ್ಕಾಂ ಗ್ರಾಹಕ ಸಂವಾದ ಸಭೆ ವರದಿಯನ್ನೂ ಓದಿ.

Sidlaghatta WhatsApp Channel Group

For Daily Updates WhatsApp ‘HI’ to 7406303366

Be a reporter

ಊರಿನ ಸುದ್ದಿ, ಫೋಟೋ ಕಳುಹಿಸಿ.

Report an error in this story

Nearby

ಇದನ್ನೂ ಓದಿ