Chowdasandra, Sidlaghatta : ಶಿಡ್ಲಘಟ್ಟ–ಬೆಂಗಳೂರು ರಸ್ತೆಯ ಚೌಡಸಂದ್ರ ಗೇಟ್ ಬಳಿ ಬುಧವಾರ ಮುಂಜಾನೆ ನಿಲ್ಲಿಸಿದ್ದ ಖಾಸಗಿ ಬಸ್‌ಗೆ ವೇಗವಾಗಿ ಬಂದ ಕಾರು ಹಿಂಬದಿಯಿಂದ ಡಿಕ್ಕಿ ಹೊಡೆದ ಘಟನೆ ಸಂಭವಿಸಿದೆ.
ಮುಂಜಾನೆ ವಾತಾವರಣವು ಸಂಪೂರ್ಣ ಮಂಜು ಆವರಿಸಿರುವುದರಿಂದ ರಸ್ತೆಯಲ್ಲಿರುವ ವಾಹನಗಳು ಸ್ಪಷ್ಟವಾಗಿ ಕಾಣಿಸದ ಪರಿಸ್ಥಿತಿ ಉಂಟಾಯಿತು. ಈ ಸಂದರ್ಭ, ಶಿಡ್ಲಘಟ್ಟದಿಂದ ವೇಗವಾಗಿ ಬರುತ್ತಿದ್ದ ಕಾರು, ರಸ್ತೆಬದಿಯಲ್ಲಿ ನಿಲ್ಲಿಸಿದ್ದ ಬಸ್‌ಗೆ ಡಿಕ್ಕಿ ಹೊಡೆದು ಅಪಘಾತಕ್ಕೆ ಕಾರಣವಾಯಿತು.
ಡಿಕ್ಕಿಯ ರಭಸದಿಂದ ಕಾರು ಸಂಪೂರ್ಣ ಜಖಂಗೊಂಡಿದ್ದು, ಕಾರಿನಲ್ಲಿದ್ದವರ ಪ್ರಾಣಾಪಾಯ ತಪ್ಪಿದೆ. ಏರ್‌ಬ್ಯಾಗ್‌ಗಳು ಸರಿಯಾಗಿ ಕಾರ್ಯನಿರ್ವಹಿಸಿದ್ದರಿಂದ ಪ್ರಯಾಣಿಕರು ಯಾವುದೇ ಗಾಯದಿಂದ ಪಾರಾಗಿದ್ದಾರೆ. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
For Daily Updates WhatsApp ‘HI’ to 7406303366









