Sidlaghatta : ಶಿಡ್ಲಘಟ್ಟದ ನಗರಸಭೆಯ ಸಭಾಂಗಣದಲ್ಲಿ ಶನಿವಾರ ನಡೆದ ವಿಶೇಷ ಸಾಮಾನ್ಯ ಸಭೆಯಲ್ಲಿ 2025-26ನೇ ಸಾಲಿನ ಎಸ್.ಎಫ್.ಸಿ ಮುಕ್ತನಿಧಿ ಅನುಧಾನ ಮೊತ್ತ 31 ಲಕ್ಷ ಹಾಗು 15 ನೇ ಹಣಕಾಸು ಯೋಜನೆಯಡಿ 205 ಲಕ್ಷ ಅನುಧಾನದ ಕ್ರಿಯಾಯೋಜನೆ ಸಿದ್ದಪಡಿಸಲು ಅನುಮೋದನೆ ಪಡೆಯಲಾಯಿತು.
ನಗರಸಭೆ ಅಧ್ಯಕ್ಷ ಎಂ.ವೆಂಕಟಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ಸಾಮಾನ್ಯ ಸಭೆಯಲ್ಲಿ 15 ನೇ ಹಣಕಾಸು ಯೋಜನೆಯೆ ಅನುದಾನವನ್ನು ಅಮೃತ-2 ಯೋಜನೆಗಾಗಿ 61.5 ಲಕ್ಷ, ಒಳಚರಂಡಿ ಸ್ವಚ್ಚಗೊಳಿಸುವ ಸಕ್ಕಿಂಗ್ ವಾಹನ ಖರೀದಿಗೆ 61.5 ಲಕ್ಷ ಹಾಗು ನಗರಸಭೆ ಕಾರ್ಯಾಲಯದ ಅಭಿವೃದ್ದಿಗೆ ಸುಮಾರು 30 ಲಕ್ಷ, ಬೀದಿ ದೀಪಗಳ ರಿಪೇರಿಗಾಗಿ ಲ್ಯಾಡರ್ ಜೀಪ್ ಖರೀದಿಗೆ 15 ಲಕ್ಷ, ಸ್ಮಶಾನ ಅಭಿವೃದ್ದಿಗೆ 5 ಲಕ್ಷ ಹಾಗೂ ಉಳಿಕೆ ಹಣವನ್ನು ಅಗತ್ಯತೆಗೆ ತಕ್ಕಂತೆ ರಸ್ತೆ ಅಭಿವೃದ್ದಿಗೆ ಬಳಸುವುದು.
ಎಸ್‌ಎಫ್‌ಸಿ ಯೋಜನೆಯ ಅನುಧಾನವನ್ನು ಪೌರಕಾರ್ಮಿಕರ ಉಪಹಾರಕ್ಕಾಗಿ 1.2 ಲಕ್ಷ, ವಾರ್ಡ್ ಸಂಖ್ಯೆ 15 ರಲ್ಲಿನ ರಸ್ತೆ ಕಾಮಗಾರಿ 8.77 ಲಕ್ಷ, ವಾರ್ಡ್ ಸಂಖ್ಯೆ 22 ರಲ್ಲಿನ ಚರಂಡಿ ಅಭಿವೃದ್ದಿಗಾಗಿ 1.92 ಲಕ್ಷ ಸೇರಿದಂತೆ ಉಳಿಕೆ ಹಣವನ್ನು ಉಲ್ಲೂರುಪೇಟೆ ಶಾಲಾ ಆವರಣದಲ್ಲಿ ನಿರ್ಮಿಸಿರುವ ಸಂಪ್ ಗೆ ಮೋಟರ್, ಕೇಬಲ್ ಸ್ಟಾರ್ಟರ್ ಖರೀದಿಗೆ ಬಳಸಿಕೊಳ್ಳಲು ಅನುಮೋದನೆ ಪಡೆಯಲಾಯಿತು.
ನಗರಸಭೆ ಉಪಾಧ್ಯಕ್ಷೆ ರೂಪ ನವೀನ್, ಪೌರಾಯುಕ್ತೆ ಅಮೃತ, ಸೇರಿದಂತೆ ನಗರಸಭೆ ಸದಸ್ಯರು ಸಿಬ್ಬಂದಿ ಹಾಜರಿದ್ದರು.
ಜು 18 ರಂದು ಕರೆದಿದ್ದ ಸಾಮಾನ್ಯ ಸಭೆಯನ್ನು ದಿಡೀರನೆ ರದ್ದು ಮಾಡಿ ವಿಶೇಷ ಸಾಮಾನ್ಯ ಸಭೆ ಕರೆದ ಕಾರಣ ತಿಳಿಸುವಂತೆ ನಗರಸಭೆಯ ಕೆಲ ಸದಸ್ಯರು ಅಧ್ಯಕ್ಷರನ್ನು ಒತ್ತಾಯಿಸಿದಾಗ ಆರೋಗ್ಯ ಸಮಸ್ಯೆ ಇದ್ದ ಕಾರಣ ತುರ್ತು ಆಸ್ಪತ್ರೆಗೆ ಹೋಗಬೇಕಾದ್ದರಿಂದ ಸಭೆ ಮುಂದೂಡಲಾಗಿತ್ತು. ಮುಂದಿನ ಅಗಸ್ಟ್ 15 ರೊಳಗೆ ಸಾಮಾನ್ಯ ಸಭೆ ಕರೆಯಲಾಗುವುದು ಎಂದು ಭರವಸೆ ನೀಡಿದರಾದರೂ ಕೇವಲ ಬಾಯಿ ಮಾತಲ್ಲಿ ಹೇಳಿದರೇ ಸಾಲದು ಸಭೆಯ ಪುಸ್ತಕದಲ್ಲಿ ನಮೂದಿಸುವಂತೆ ಒತ್ತಾಯಿಸಿದರು. ಅದರಂತೆ ಅಗಸ್ಟ್ 15 ರೊಳಗೆ ಸಾಮಾನ್ಯ ಸಭೆ ಕರೆಯಲು ದಿನಾಂಕ ಗುರುತಿಸಿ ಎಲ್ಲಾ ಸದಸ್ಯರಿಗೂ ತಿಳಿಸಲಾಗುವುದು ಎಂದರು.