ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾದ ಸಂಭ್ರಮಾಚರಣೆ: ಜೂ. 10ರಂದು ಬೃಹತ್ ಕಾರ್ಯಕ್ರಮ

- Advertisement -
- Advertisement -

Sidlaghatta : ಕಾಂಗ್ರೆಸ್‌ನ ಶಿಸ್ತಿನ ಸಿಪಾಯಿ ಹಾಗೂ ಸಂಘಟನಾ ಚತುರ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿರುವ ಸಂಭ್ರಮವನ್ನು ಜೂನ್ 10ರ ಬುಧವಾರ ನಗರದ ಕಾಂಗ್ರೆಸ್ ಭವನದಲ್ಲಿ ಅದ್ಧೂರಿಯಾಗಿ ಆಚರಿಸಲಾಗುವುದು ಎಂದು ಕೆಪಿಸಿಸಿ ಕೋ-ಆರ್ಡಿನೇಟರ್ ಬಿ.ವಿ. ರಾಜೀವ್‌ಗೌಡ ಘೋಷಿಸಿದ್ದಾರೆ.

10 ಸಾವಿರ ಮಂದಿಗೆ ಭೋಜನದ ವ್ಯವಸ್ಥೆ:

ನಗರದ ಕಾಂಗ್ರೆಸ್ ಭವನದಲ್ಲಿ ನಡೆದ ಕಾರ್ಯಕರ್ತರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಬಿ.ವಿ. ರಾಜೀವ್‌ಗೌಡ, ಸಂಭ್ರಮಾಚರಣೆಯ ಅಂಗವಾಗಿ ಬೃಹತ್ ಕೇಕ್ ಕತ್ತರಿಸಿ ವಿತರಿಸಲಾಗುವುದು. ಜೊತೆಗೆ, ಸುಮಾರು 10 ಸಾವಿರ ಮಂದಿಗೆ ಮಾಂಸಾಹಾರದ ಊಟದ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.

ಅತಿಥಿಗಳು ಮತ್ತು ಸಿದ್ಧತೆ:

ಈ ಕಾರ್ಯಕ್ರಮಕ್ಕೆ ತಮ್ಮ ರಾಜಕೀಯ ಮಾರ್ಗದರ್ಶಕರಾದ ಸಚಿವ ಕೆ.ಎಚ್. ಮುನಿಯಪ್ಪ, ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಹಾಗೂ ಪಕ್ಷದ ಇತರ ಪದಾಧಿಕಾರಿಗಳನ್ನು ಆಹ್ವಾನಿಸಲಾಗುವುದು ಎಂದು ತಿಳಿಸಿದ ಅವರು, ಪಕ್ಷದ ಒಗ್ಗಟ್ಟನ್ನು ಪ್ರದರ್ಶಿಸಲು ಪ್ರತಿ ವಾರ್ಡ್ ಮತ್ತು ಗ್ರಾಮಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸಬೇಕು ಎಂದು ಕೋರಿದರು. ಅಲ್ಲದೆ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರನ್ನು ಅಭಿನಂದಿಸಲು ಶಿಡ್ಲಘಟ್ಟದಿಂದ ಒಂದು ಸಾವಿರ ಮಂದಿಯ ತಂಡವನ್ನು ಕರೆದೊಯ್ಯುವ ಯೋಜನೆಯನ್ನೂ ಅವರು ಹಂಚಿಕೊಂಡರು.

ಒಗ್ಗಟ್ಟಿನ ಮಂತ್ರ:

ಸಭೆಯಲ್ಲಿ ಮಾತನಾಡಿದ ಡಿಸಿಸಿ ಬ್ಯಾಂಕ್ ನಿರ್ದೇಶಕ ಹಾಗೂ ಡಾಲ್ಫಿನ್ ಸ್ಕೂಲ್ ಅಧ್ಯಕ್ಷ ನಾಗರಾಜ್, ತಾಲೂಕಿನಲ್ಲಿ ಬಣ ರಾಜಕೀಯಕ್ಕೆ ತೆರೆ ಎಳೆದು ಏಕನಾಯಕತ್ವದಲ್ಲಿ ಮುಂದಿನ ಚುನಾವಣೆಗಳನ್ನು ಎದುರಿಸಬೇಕು ಎಂದು ಆಗ್ರಹಿಸಿದರು. ಅಲ್ಲದೆ, ಪಕ್ಷದ ಅಮಾನತು ಆದೇಶಗಳನ್ನು ಹಿಂಪಡೆಯುವಂತೆ ವಾರದೊಳಗೆ ನಿಯೋಗದ ಮೂಲಕ ಕೆಪಿಸಿಸಿ ಅಧ್ಯಕ್ಷರನ್ನು ಭೇಟಿ ಮಾಡಿ ಒತ್ತಾಯಿಸಬೇಕೆಂದು ಸಲಹೆ ನೀಡಿದರು.

ಈ ಸಭೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಸಹನಾ ರಾಜೀವ್, ಕೃಷ್ಣಾರೆಡ್ಡಿ, ಬ್ಯಾಟರಾಯಶೆಟ್ಟಿ, ಅಪ್ಸರ್‌ಪಾಷ, ಗೋಪಾಲರೆಡ್ಡಿ, ಹೀರೆಬಲ್ಲ ರವಿ, ಮೌಲ, ತಿಮ್ಮನಾಯಕನಹಳ್ಳಿ ಆನಂದ್, ಕಂಪನಿ ದೇವರಾಜ್ ಸೇರಿದಂತೆ ಹಲವು ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.

Sidlaghatta WhatsApp Channel Group

For Daily Updates WhatsApp ‘HI’ to 7406303366

For Daily Updates

WhatsApp 'HI' to 7406303366

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!