Home News  ದೀಪಾವಳಿ ಹಬ್ಬದ ಪ್ರಯುಕ್ತ ಕಬ್ಬಡ್ಡಿ ಪಂದ್ಯಾವಳಿ

 ದೀಪಾವಳಿ ಹಬ್ಬದ ಪ್ರಯುಕ್ತ ಕಬ್ಬಡ್ಡಿ ಪಂದ್ಯಾವಳಿ

0
Sidlaghatta Devaramallur Deepavali Kabaddi championship

Devaramallur, sidlaghatta : ಶಿಡ್ಲಘಟ್ಟ ತಾಲ್ಲೂಕಿನ ದೇವರ ಮಳ್ಳೂರು ಗ್ರಾಮದ ಸೋಮೇಶ್ವರ ಸ್ವಾಮಿ ದೇವಾಲಯ ಆವರಣದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಒನಲು ಬೆಳಕಿನ ಕಬ್ಬಡ್ಡಿ ಪಂದ್ಯಾವಳಿಗಳು ನಡೆಯಿತು. ಬೆಳಕಿನ ಹಬ್ಬ ದೀಪಾವಳಿ ಹಬ್ಬದ ಪ್ರಯುಕ್ತ ಮನರಂಜನೆ ಕಾರ್ಯಕ್ರಮ ಅಂಗವಾಗಿ ಗ್ರಾಮದ ಯುವಕರಿಂದ ಕಬಡ್ಡಿ ಪಂದ್ಯಾವಳಿಗಳು ಏರ್ಪಡಿಸಲಾಗಿತ್ತು.

ಎರಡು ದಿನಗಳು ನಡೆದ ಕಬಡ್ಡಿ ಪಂದ್ಯಾವಳಿಗಳ ಮನರಂಜನೆ ಕಾರ್ಯಕ್ರಮಗಳಲ್ಲಿ ಗ್ರಾಮಸ್ಥರು ಪಾಲ್ಗೊಂಡು ಸಂಭ್ರಮಿಸಿದರು.

ಕಬಡ್ಡಿ ಪಂದ್ಯಾವಳಿಗಳಲ್ಲಿ 6 ತಂಡ ಭಾಗವಹಿಸಿದ್ದವು. ಎರಡು ದಿನಗಳ ಕಾಲ ಒಟ್ಟು 32 ಪಂದ್ಯಗಳು ನಡೆದವು. ಅಂತಿಮ ಪಂದ್ಯದಲ್ಲಿ ಗಗನ್ ಬುಲ್ಸ್ ಮೊದಲನೇ ಬಹುಮಾನ 10 ಸಾವಿರ ರೂ, ಎರಡನೇ ಬಹುಮಾನ ಬೀಸ್ಟ್ ಬುಲ್ಸ್ 5 ಸಾವಿರ ರೂ, ಮೂರನೇ ಬಹುಮಾನ ಜೈ ಆಂಜನೇಯ ಟೀಮ್ 3 ಸಾವಿರ ರೂ ಗೆದ್ದು ವಿಜೇತರಾದರು.

ವಾಸವಿ ಶಾಲೆ ದೈಹಿಕ ಶಿಕ್ಷಕ ಸಿ.ಕೆ.ರವಿ, ಪ್ಯಾರಗನ್ ವಿದ್ಯಾ ಸಂಸ್ಥೆಯ ದ್ಯಾವಪ್ಪ, ಡಾಲ್ಫಿನ್ ವಿದ್ಯಾ ಸಂಸ್ಥೆಯ ಶ್ರೀನಾಥ್, SRET ಶಾಲೆಯ ನರಸಿಂಹನ್ ಅವರು ಕಬಡ್ಡಿ ಪಂದ್ಯಾವಳಿಗಳ ತೀರ್ಪುಗಾರರಾಗಿದ್ದರು.

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version