Ganganahalli, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಗಂಗನಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ, ಚೌಡೇಶ್ವರಿ ದೇವಾಲಯದಲ್ಲಿ, ಮಂಗಳವಾರ ತಂಬಿಟ್ಟಿನ ದೀಪೋತ್ಸವ ನಡೆಯಿತು.
ಗ್ರಾಮದೇವತೆ ಸಪ್ಪಲಮ್ಮ ದೇವಿಯ ಉತ್ಸವಮೂರ್ತಿಯನ್ನು ಗ್ರಾಮಸ್ಥರು ತಮಟೆ ವಾದನಗಳೊಂದಿಗೆ ಮೆರವಣಿಗೆ ನಡೆಸಿದರು.
ಗ್ರಾಮದ ಮಹಿಳೆಯರು, ತಂಬಿಟ್ಟಿನ ದೀಪಗಳನ್ನು ಹೊತ್ತು, ಮೆರವಣಿಗೆಯಲ್ಲಿ ಬಂದು, ದೇವರಿಗೆ ಬೆಳಗಿದರು. ದೇವಾಲಯದ ಪ್ರಧಾನ ಅರ್ಚಕ ಸುಬ್ಬರಾಮ್ ಅವರು, ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದರು.
ಗ್ರಾಮದ ಬಿ.ಸಿ.ವೆಂಕಟೇಶಪ್ಪ, ಸಿ. ಪ್ರಮೀಳಮ್ಮ ವೆಂಕಟೇಶಪ್ಪ, ವಿ.ಕೆಂಪಯ್ಯ, ಜಿ.ವಿ. ಸುರೇಶ್, ವೆಂಕಟರೆಡ್ಡಿ, ರಾಜೇಶ್, ಪ್ರಕಾಶ್, ಸೊಣ್ಣೇಗೌಡ, ಅಶ್ವಥಪ್ಪ, ವೆಂಕಟರಾಯಪ್ಪ, ಜಿ.ಸಿ. ಮುನಿರಾಜು, ಮುನಿದಾಸಪ್ಪ, ಮುನಿರಾಜು, ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.








