Home News ವಿಭಜನೆಯ ಭಯಾನಕ ನೆನಪಿನ ದಿನ ಕಾರ್ಯಕ್ರಮ

ವಿಭಜನೆಯ ಭಯಾನಕ ನೆನಪಿನ ದಿನ ಕಾರ್ಯಕ್ರಮ

0
Sidlaghatta H Cross Independence Event

H Cross, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಎಚ್. ಕ್ರಾಸ್ ನಲ್ಲಿರುವ ಶ್ರೀ ಜ್ಯೋತಿ ವಿದ್ಯಾ ಸಂಸ್ಥೆಯ ಆವರಣದಲ್ಲಿ ಜ್ಯೋತಿ ವಿದ್ಯಾ ಸಂಸ್ಥೆ ಹಾಗೂ ಅಂಚೆ ಇಲಾಖೆಯ ಸಹಯೋಗದಲ್ಲಿ ಆಯೋಜಿಸಲಾಗಿದ್ದ ವಿಭಜನೆಯ ಭಯಾನಕ ನೆನಪಿನ ದಿನ ಕಾರ್ಯಕ್ರಮದಲ್ಲಿ ಭಾಗವಹಿಸಿ ಜ್ಯೋತಿ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಜೆ.ಆರ್.ಶ್ರೀಧರ್ ಅವರು ಮಾತನಾಡಿದರು.

1947 ರ ಆಗಸ್ಟ್ 14 ರ ರಾತ್ರಿ ದೇಶದ ವಿಭಜನೆಯ ಸಂದರ್ಭದಲ್ಲಿ ದೇಶದ ಜನತೆ ಅನುಭವಿಸಿದ ನೋವು, ಸಂಕಟಗಳನ್ನು ಪ್ರಸ್ತುತ ಹಾಗೂ ಭವಿಷ್ಯದ ಫೀಳಿಗೆಗೆ ನೆನಪಿಸಿಕೊಡುವ ಕೆಲಸ ಆಗಬೇಕಿದೆ ಎಂದು ಹೇಳಿದರು.

ಭಾರತ ಹಾಗೂ ಪಾಕಿಸ್ಥಾನ ಎಂಬ ಎರಡು ರಾಷ್ಟ್ರಗಳನ್ನು ವಿಭಜನೆಯ ಹೆಸರಿನಲ್ಲಿ ಪ್ರತ್ಯೇಕ ರಾಷ್ಟ್ರಗಳೆಂದು ಘೋಷಿಸಿದ ಸಂದರ್ಭದಲ್ಲಿ ಆವರೆಗೂ ಸಹೋದರರಂತಿದ್ದ ಲಕ್ಷಾಂತರ ಮಂದಿ ಸ್ಥಳಾಂತರಗೊಂಡಿದ್ದು ಸೇರಿದಂತೆ ಹಲವರು ತಮ್ಮ ಪ್ರಾಣವನ್ನು ಸಹ ಕಳೆದುಕೊಂಡರು. ಅಂತಹ ಕರಾಳ ದಿನದ ನೆನಪು ಮತ್ತು ದೇಶದ ಸ್ವಾತಂತ್ರ್ಯಕ್ಕಾಗಿ ಮಡಿದವರ ನೆನಪಿಗಾಗಿ ಪ್ರತಿ ವರ್ಷ ಆಗಸ್ಟ್ 14 ರಂದು ವಿಭಜನೆಯ ಭಯಾನಕ ನೆನಪಿನ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದರು.

ಸಾಮರಸ್ಯವಿಲ್ಲದಿದ್ದರೆ ಆಗುವ ಅಪಾಯಗಳನ್ನು ಸದಾ ನೆನಪಿನಲ್ಲಿಟ್ಟುಕೊಳ್ಳಬೇಕು. ಒಗ್ಗಟ್ಟು, ಸಾಮಾಜಿಕ ಸಾಮರಸ್ಯ ಹಾಗೂ ಮಾನವ ಸಬಲೀಕರಣದ ಬಗ್ಗೆ ಪ್ರತಿಯೊಬ್ಬರೂ ಅರಿತುಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ಅಂಚೆ ನಿರೀಕ್ಷಕ ಶಿವಕುಮಾರ್, ಸುಂಡ್ರಹಳ್ಳಿ ಬಳಿಯ ಇಂಡೋ ಟಿಬೆಟನ್ ಬಾರ್ಡರ್ ಪೊಲೀಸ್ ಫೋರ್ಸ್‌ನ ಪಿ.ಕೆ.ಲೂಯಿಸ್, ಜಸ್ಬೀರ್‌ಸಿಂಗ್, ಅಜಯ್ ಕುಮಾರ್, ರಾಜೀವ್ ಕುಮಾರ್, ಬಿಸ್ವಾ ರಾಜ್, ಮುಖೇಶ್ ಜೋಶಿ, ವಿದ್ಯಾ ಸಂಸ್ಥೆಯ ಅಧ್ಯಕ್ಷ ಶ್ರೀನಿವಾಸ್, ಮುಖ್ಯ ಶಿಕ್ಷಕಿ ಪದ್ಮಜಾ, ಶಿಕ್ಷಕರಾದ ಶಶಿಕುಮಾರ್, ನಿತ್ಯನಂದಿ, ಪ್ರತಿಭಾ, ವಿಶಾಲಾಕ್ಷೀ, ಮೇಘನಾ ಹಾಜರಿದ್ದರು.

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.

error: Content is protected !!
Exit mobile version