ಕೋಲಾರಕ್ಕೆ ಸಿನಿಮಾ ನೋಡಲು ಹೊರಟಿದ್ದ ಬೈಕ್ ಸವಾರ ಅಪಘಾತದಲ್ಲಿ ಸಾವು

- Advertisement -
- Advertisement -

Sidlaghatta : ಯಶ್ ಅಭಿನಯದ “ಟಾಕ್ಸಿಕ್” ಸಿನಿಮಾ ವೀಕ್ಷಿಸಲು ದ್ವಿಚಕ್ರ ವಾಹನದಲ್ಲಿ ಕೋಲಾರಕ್ಕೆ ತೆರಳುತ್ತಿದ್ದ ಇಬ್ಬರು ಯುವಕರು ಅಪಘಾತಕ್ಕೀಡಾಗಿ, ಓರ್ವ ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೋರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ತಾಲ್ಲೂಕಿನ ಹಂಡಿಗನಾಳ ಗ್ರಾಮದ ಕೆರೆಕಟ್ಟೆ ಸಮೀಪದ ಸೇತುವೆ ಬಳಿ ನಡೆದಿದೆ.

ದೊಡ್ಡಬಳ್ಳಾಪುರದ ಸಂಜಯನಗರ ನಿವಾಸಿ, 36 ವರ್ಷದ ಪುರುಷೋತ್ತಮ ಮೃತಪಟ್ಟವರು. ಅವರೊಂದಿಗೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ 35 ವರ್ಷದ ವಿನಯ್ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಇಬ್ಬರೂ “ಟಾಕ್ಸಿಕ್” ಸಿನಿಮಾ ವೀಕ್ಷಿಸಲು ಕೋಲಾರದತ್ತ ತೆರಳುತ್ತಿದ್ದಾಗ ಹಂಡಿಗನಾಳ ಕೆರೆಕಟ್ಟೆ ಸಮೀಪದ ಸೇತುವೆ ಬಳಿ ದ್ವಿಚಕ್ರ ವಾಹನ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ.

ಪ್ರಾಥಮಿಕ ಮಾಹಿತಿಯ ಪ್ರಕಾರ, ದ್ವಿಚಕ್ರ ವಾಹನವು ರಸ್ತೆ ಬದಿಯ ಮೋರಿ ತಡೆಗೆ ಡಿಕ್ಕಿ ಹೊಡೆದಿದೆ. ಎದುರಿನಿಂದ ಬಂದ ವಾಹನವನ್ನು ತಪ್ಪಿಸುವ ಸಂದರ್ಭದಲ್ಲಿ ಅಥವಾ ಇತರ ಯಾವುದಾದರೂ ಕಾರಣದಿಂದ ವಾಹನದ ನಿಯಂತ್ರಣ ತಪ್ಪಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಆದರೆ, ಅಪಘಾತಕ್ಕೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.

ಅಪಘಾತದ ತೀವ್ರತೆಗೆ ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ಪುರುಷೋತ್ತಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹಿಂಬದಿ ಸವಾರರಾಗಿದ್ದ ವಿನಯ್ ಅವರ ಕಾಲಿಗೆ ಗಂಭೀರ ಗಾಯವಾಗಿದೆ. ಸ್ಥಳೀಯರು ತಕ್ಷಣ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲು ನೆರವಾದರು.

ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ಮಾಹಿತಿ ಸಂಗ್ರಹಿಸಿದರು. ಮೃತದೇಹವನ್ನು ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ.

ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಅಪಘಾತಕ್ಕೆ ನಿಖರ ಕಾರಣದ ಕುರಿತು ತನಿಖೆ ಮುಂದುವರಿದಿದೆ.

ಇತ್ತೀಚೆಗೆ ತಾಲ್ಲೂಕಿನ ಬೊಮ್ಮನಹಳ್ಳಿ ಗೇಟ್ ಬಳಿಯೂ ದ್ವಿಚಕ್ರ ವಾಹನ ಸವಾರ ಸಾವಿಗೀಡಾಗಿದ್ದ ಅಪಘಾತ ಸಂಭವಿಸಿತ್ತು.

In English: Two men riding a motorcycle from Doddaballapura toward Kolar to watch the Kannada film “Toxic” met with an accident near a bridge at Kerekatte, Handiganala village, in Sidlaghatta taluk. The rider, 36-year-old Purushottama of Sanjaynagar, Doddaballapura, died on the spot after the bike lost control and hit a roadside culvert barrier; the pillion rider, 35-year-old Vinay, suffered a serious leg injury and is undergoing treatment at Chikkaballapur District Hospital. Police suspect the rider may have swerved to avoid an oncoming vehicle, though the exact cause is still under investigation. A case has been registered at Sidlaghatta Rural police station.

Sidlaghatta WhatsApp Channel Group

For Daily Updates WhatsApp ‘HI’ to 7406303366

For Daily Updates

WhatsApp 'HI' to 7406303366

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -
Sidlaghatta News Desk
Sidlaghatta News Deskhttp://www.sidlaghatta.com
The editorial desk of Sidlaghatta.com (Namma Shidlaghatta), covering civic affairs, agriculture, silk trade, and local government news for Sidlaghatta taluk, Karnataka.

Just Published

Latest news

- Advertisement -

Silk

Related news

- Advertisement -