Hosapete, Sidlaghatta : ಹಳ್ಳಿಗಳಲ್ಲಿ ನವರಾತ್ರಿ ಸಂದರ್ಭದಲ್ಲಿ ದೇವತಾ ಕಾರ್ಯಗಳನ್ನು ನಡೆಸಿ ಜನರನ್ನು ಒಗ್ಗೂಡಿಸಿಕೊಳ್ಳುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ಶಾಸಕ ಬಿ.ಎನ್. ರವಿಕುಮಾರ್ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಹೊಸಪೇಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡಚೊಕ್ಕಂಡಹಳ್ಳಿ ಗ್ರಾಮದಲ್ಲಿ ಪುನರ್‌ಪ್ರತಿಷ್ಠಾಪಿತ ಗಂಗಾದೇವಿ ದೇವಾಲಯದಲ್ಲಿ ನಡೆದ ಚಂಡಿಕಾಹೋಮ ಪೂಜಾ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿ ಮಾತನಾಡಿದರು. “ಜನರು ದೇವತಾ ಕಾರ್ಯಗಳಲ್ಲಿ ಜಾತಿ, ಮತ ಬೇಧವಿಲ್ಲದೆ ಪಾಲ್ಗೊಳ್ಳುವುದರಿಂದ ಸಾಮರಸ್ಯ ಬಲವಾಗುತ್ತದೆ. ದಸರಾ ಹಬ್ಬದ ಸಂದರ್ಭದಲ್ಲಿ ಇಂತಹ ಕಾರ್ಯಗಳು ನಡೆಯುವುದರಿಂದ ಮಳೆ, ಬೆಳೆಗಳು ಉತ್ತಮವಾಗಿ ಬರಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ,” ಎಂದರು.
ಈ ಸಂದರ್ಭದಲ್ಲಿ ಪುನರ್ ನಿರ್ಮಿತ ದೇವಾಲಯದಲ್ಲಿ ಚಂಡಿಕಾಹೋಮ ಸೇರಿದಂತೆ ವಿವಿಧ ಪೂಜಾ ವಿಧಿಗಳು ನೆರವೇರಿಸಲ್ಪಟ್ಟವು. ದೊಡ್ಡಚೊಕ್ಕಂಡಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ನೂರಾರು ಮಂದಿ ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿ ಧಾರ್ಮಿಕ ಉತ್ಸವಕ್ಕೆ ಸಾಕ್ಷಿಯಾದರು.
ಕಾರ್ಯಕ್ರಮದಲ್ಲಿ ಮುಖಂಡರಾದ ತಾದೂರು ರಘು, ಸಿ.ವಿ. ನಾರಾಯಣಸ್ವಾಮಿ, ಶ್ರೀನಿವಾಸ್, ನಾಗೇಶ್ ಬಾಬು, ಸಿ.ವಿ. ದೇವರಾಜ್, ಬಿ.ಎಂ. ರಾಜಣ್ಣ, ಸಿ. ಮಂಜುನಾಥ್, ಆಂಜಿನಪ್ಪ, ರವಿಕುಮಾರ್, ಮಂಜುನಾಥ್, ರಾಮಚಂದ್ರಪ್ಪ, ಮಾರೇಗೌಡ, ಮುನಿಕೃಷ್ಣ, ಗಂಗರೆಡ್ಡಿ, ಕೆಂಪಣ್ಣ, ಮಧುಕುಮಾರ್, ತಿಮ್ಮರಾಯಪ್ಪ, ಹೆಚ್.ಎಂ. ಮುರಳಿ, ಅಂಬರೀಶ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.