Home News ಸಂಗೀತ–ಸಾಹಿತ್ಯ ಸಾಧಕರಿಗೆ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಸನ್ಮಾನ

ಸಂಗೀತ–ಸಾಹಿತ್ಯ ಸಾಧಕರಿಗೆ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಸನ್ಮಾನ

0
4

Sidlaghatta : ಶಿಡ್ಲಘಟ್ಟ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಸಂಗೀತ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಗಮನಾರ್ಹ ಸೇವೆ ಸಲ್ಲಿಸಿರುವ ಜಿ.ಎನ್. ಶಾಮಸುಂದರ್ ಗಂಜಿಗುಂಟೆ ಹಾಗೂ ಅವರ ಪತ್ನಿ ಗಿರಿಜಾ ಅವರನ್ನು ಗುರುವಾರ ಸಂಜೆ ಸನ್ಮಾನಿಸಿ ಗೌರವಿಸಲಾಯಿತು.

ನಗರದ ವಿ. ಕೃಷ್ಣ ಅವರ ನಿವಾಸದಲ್ಲಿ ನಡೆದ ಕಾರ್ಯಕ್ರಮದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಕನ್ನಡಾಭಿಮಾನಿಗಳು ದಂಪತಿಯನ್ನು ಶಾಲು ಹೊದಿಸಿ, ಫಲ-ಪುಷ್ಪ ನೀಡಿ ಅಭಿನಂದಿಸಿದರು.

ಜಿ.ಎನ್. ಶಾಮಸುಂದರ್ ಅವರು ಗಣಿತ ಶಿಕ್ಷಕರಾಗಿ, ಸಂಗೀತ ಶಿಕ್ಷಕರಾಗಿ ಹಾಗೂ ಪಿಟೀಲು ವಿದ್ವಾಂಸರಾಗಿ ಸೇವೆ ಸಲ್ಲಿಸಿದ್ದು, ಅನೇಕ ವಿದ್ಯಾರ್ಥಿಗಳಿಗೆ ಸಂಗೀತ ಶಿಕ್ಷಣ ನೀಡಿ ಕಲಾವಿದರನ್ನಾಗಿ ರೂಪಿಸಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿಯೂ ಕವನಗಳು, ಚುಟುಕುಗಳು ಹಾಗೂ ಹಳೆಗನ್ನಡದ ಷಟ್ಪದಿಗಳನ್ನು ರಚಿಸಿದ್ದು, ಶ್ಯಾಮಗಾನ, ಮುಕ್ತಕ ಮಂದಾರ, ಶಾಮ ಲಹರಿ ಸೇರಿದಂತೆ ಹಲವು ಕೃತಿಗಳನ್ನು ಪ್ರಕಟಿಸಿ ಕನ್ನಡ ಸಾಹಿತ್ಯಕ್ಕೆ ಮೌಲಿಕ ಕೊಡುಗೆ ನೀಡಿದ್ದಾರೆ ಎಂದು ಕಾರ್ಯಕ್ರಮದಲ್ಲಿ ಪ್ರಶಂಸಿಸಲಾಯಿತು.

ಈ ಸಂದರ್ಭದಲ್ಲಿ ವಿ. ಕೃಷ್ಣ ಮತ್ತು ವಿಜಯಲಕ್ಷ್ಮಿ, ಎಸ್.ವಿ. ನಾಗರಾಜರಾವ್, ರೂಪಸಿ ರಮೇಶ್, ಮುನಿ ನಾರಾಯಣಪ್ಪ, ಎನ್. ಸುಂದರನ್, ಟಿ.ಟಿ. ನರಸಿಂಹಪ್ಪ, ಕಲಾವಿದ ಮುನಿರಾಜು, ಶ್ರೀನಿವಾಸ್ ವಿಶ್ವಕರ್ಮ, ಡಿ.ಎಸ್. ಸತ್ಯನಾರಾಯಣ್ ರಾವ್, ಪುಷ್ಪಾವತಿ, ಶಶಿಧರ್ ಮತ್ತು ಕುಟುಂಬ, ಸವಿತಾ, ನಂಜುಂಡಮೂರ್ತಿ ಹಾಜರಿದ್ದರು.

In English: The Taluk Kannada Sahitya Parishat felicitated G.N. Shamasundar of Ganjigunte and his wife Girija for their notable contributions to music and literature. Shamasundar, a mathematics and music teacher and violin scholar, has trained many students in music and authored several Kannada literary works including Shyamagana and Muktaka Mandara.

Sidlaghatta WhatsApp Channel Group

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

error: Content is protected !!