Sidlaghatta : ಶಿಡ್ಲಘಟ್ಟ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಮನೆಯಂಗಳದಲ್ಲಿ ಕವಿ ಗೋಷ್ಠಿಯನ್ನು ಸಂಗೀತ ವಿದೂಷಿ ಮಂಜುಳಾ ಜಗದೀಶ್ ಅವರ ಮನೆಯಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕವಿಗೋಷ್ಠಿಯಲ್ಲಿ ಶ್ಯಾಮ್ ಸುಂದರ್, ರೂಪಸಿ ರಮೇಶ್, ಹರೀಶ್ ಬಾಬು, ಜಗದೀಶ್ ಕುಮಾರ್, ಸತ್ಯನಾರಾಯಣ ರಾವ್, ವಿ.ಕೃಷ್ಣ, ಶ್ರೀನಿವಾಸ್ ವಿಶ್ವಕರ್ಮ, ಎನ್.ಸುಂದರ್, ಪಟೇಲ್ ನಾರಾಯಣಸ್ವಾಮಿ ಕವನಗಳನ್ನು ವಾಚಿಸಿದರು.
ಮಾಜಿ ಜಿಲ್ಲಾ ಕಸಾಪ ಅಧ್ಯಕ್ಷ ಎಸ್.ವಿ. ನಾಗರಾಜರಾವ್, ದತ್ತಿ ಕಾರ್ಯಕ್ರಮಗಳ ಬಗ್ಗೆ ವಿವರಣೆ ನೀಡಿದರು. ನಿವೃತ್ತ ಉಪನ್ಯಾಸಕ ಮಹಮ್ಮದ್ ಖಾಸಿಂ ಕನ್ನಡ ಭಾಷೆ, ವಚನ ಸಾಹಿತ್ಯದ ಬಗ್ಗೆ ಮಾತನಾಡಿದರು. ಮಾರುತಿ ಗಾಯನ ಸಮಾಜದವರು ಹನುಮ ಸ್ತುತಿ ಹಾಡಿದರು.
ತಾಲ್ಲೂಕು ಕಸಾಪ ಅಧ್ಯಕ್ಷ ನಾರಾಯಣಸ್ವಾಮಿ, ಸದಸ್ಯರಾದ ಟಿ. ಟಿ ನರಸಿಂಹಪ್ಪ, ಹಿತ್ತಲಹಳ್ಳಿ ಸುರೇಶ್ ಹಾಜರಿದ್ದರು.








