Sidlaghatta, Chikkaballapur : ಶಿಡ್ಲಘಟ್ಟ ನಗರದ ಕೋಟೆ ಶ್ರೀಸೋಮೇಶ್ವರಸ್ವಾಮಿ ದೇವಾಲಯದಲ್ಲಿ ಷಷ್ಠಿ ಪ್ರಯುಕ್ತ ಬುಧವಾರ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆಯಿತು. ದೇವಸ್ಥಾನದ ಆವರಣದಲ್ಲಿ ಬಿಲ್ಪತ್ರೆಯ ಮರದ ಕೆಳಗೆ ನಿರ್ಮಿಸಲಾದ ಹೋಮ ಕುಂಡದಲ್ಲಿ ಮೃತ್ಯುಂಜಯ ಹೋಮವನ್ನು ವಿಧಿವಿಧಾನಗಳೊಂದಿಗೆ ನೆರವೇರಿಸಲಾಯಿತು.
ಭಕ್ತರು ನವಧಾನ್ಯ, ವಸ್ತ್ರ ಮತ್ತು ಇತರ ಕಾಣಿಕೆಗಳನ್ನು ಅರ್ಪಿಸಿ ಹೋಮದ ಸುತ್ತ ಮೂರೂ ಬಾರಿ ಪ್ರದಕ್ಷಿಣೆ ಹಾಕಿ, ತಮ್ಮ ಇಷ್ಟಾರ್ಥಗಳ ಸಿದ್ಧಿಯಾಗಲು ದೇವರಲ್ಲಿ ಪ್ರಾರ್ಥಿಸಿದರು. ದೇವಸ್ಥಾನದ ಆವರಣದಲ್ಲಿರುವ ನಾಗ ದೇವತೆಯ ಸುತ್ತಲೂ ಭಕ್ತರು ಪ್ರದಕ್ಷಿಣೆ ಹಾಕಿ, ಮನೆ–ಮನೆಯಲ್ಲಿ ಇರುವ ಕಷ್ಟಗಳು ದೂರವಾಗಲಿವಂತೆ ಪ್ರಾರ್ಥನೆ ಸಲ್ಲಿಸಿದರು.
ಲಿಂಗರೂಪಿ ಶ್ರೀಸೋಮೇಶ್ವರ ಸ್ವಾಮಿಯ ಮೂರ್ತಿಗೆ ವಿಶೇಷ ಹೂವಿನ ಅಲಂಕಾರ ಮಾಡಿ ಮಹಾ ಮಂಗಳಾರತಿ ನೆರವೇರಿಸಲಾಯಿತು. ನಂತರ ಭಕ್ತರಿಗೆ ತೀರ್ಥ ಪ್ರಸಾದವನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಸ್ಥಳೀಯ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಭಕ್ತಿಶ್ರದ್ಧೆ ತೋರಿದರು.
For Daily Updates WhatsApp ‘HI’ to 7406303366









