Home News KSMB ಯಿಂದ ರೇಷ್ಮೆ ನೂಲು ಖರೀದಿ ಆರಂಭ

KSMB ಯಿಂದ ರೇಷ್ಮೆ ನೂಲು ಖರೀದಿ ಆರಂಭ

0
Sidlaghatta KSMB Silk Purchase

Sidlaghatta : ಕರ್ನಾಟಕ ರಾಜ್ಯ ರೇಷ್ಮೆ ಮಾರಾಟ ಮಂಡಳಿ (KSMB) ಯಿಂದ ರೇಷ್ಮೆ ನೂಲು ಖರೀದಿ ಹಾಗೂ ಒತ್ತೆ ಸಾಲವನ್ನು ಶಿಡ್ಲಘಟ್ಟದಲ್ಲಿ ಬುಧವಾರದಿಂದ ಆರಂಭಿಸಿದ್ದು ನೂರಾರು ರೇಷ್ಮೆ ರೀಲರುಗಳು ಕೆ.ಎಸ್‌.ಎಂ.ಬಿ ಶಾಖೆಗೆ ಎಡತಾಕತೊಡಗಿದ್ದಾರೆ.

ಸತತ ಐದಾರು ತಿಂಗಳಿಂದಲೂ ರೇಷ್ಮೆ ಗೂಡು, ಕಚ್ಚಾ ರೇಷ್ಮೆ ನೂಲಿನ ಬೆಲೆ ಕುಸಿತವಾಗುತ್ತಿರುವ ಹಿನ್ನಲೆಯಲ್ಲಿ ಸರ್ಕಾರದ ಆದೇಶದಂತೆ ರೀಲರುಗಳಿಂದ ಕಚ್ಚಾ ರೇಷ್ಮೆ ನೂಲಿನ ಖರೀದಿ ಮಾಡುವ ಪ್ರಕ್ರಿಯೆ ಬುಧವಾರದಿಂದ ಅಧಿಕೃತವಾಗಿ ಆರಂಭವಾಗಿದೆ.

ಕಚ್ಚಾ ರೇಷ್ಮೆ ನೂಲಿನ ಗುಣಮಟ್ಟದ ಡೀನಿಯರ್ ಗ್ರೇಡ್‌ನ ಆಧಾರದಲ್ಲಿ ಬೆಲೆಯನ್ನು ನಿಗದಿಪಡಿಸಿ ಖರೀದಿಸಲಾಗುತ್ತದೆ. ಕೆ.ಎಸ್‌.ಎಂ.ಬಿಯಿಂದ 30 ಲಕ್ಷ ರೂ.ಹಣ ಬಿಡುಗಡೆಯಾಗಿದ್ದು, ಅಗತ್ಯಕ್ಕೆ ಅನುಸಾರವಾಗಿ ಹಂತ ಹಂತವಾಗಿ ಇನ್ನಷ್ಟು ಹಣ ಬಿಡುಗಡೆಯಾಗುತ್ತದೆ.

ಕಚ್ಚಾ ರೇಷ್ಮೆಯನ್ನು ಮಾರಾಟ ಮಾಡಲಿಚ್ಚಿಸುವ ರೀಲರುಗಳಿಂದ ರೇಷ್ಮೆಯ ಸ್ಯಾಂಪಲ್ ಪಡೆದುಕೊಂಡು 24 ಗಂಟೆಯೊಳಗೆ ರೇಷ್ಮೆನೂಲಿನ ಗುಣಮಟ್ಟದ ಡೀನಿಯರ್‌ನ್ನು ಪ್ರಯೋಗಾಲಯದಲ್ಲಿ ಖಚಿತಪಡಿಸಿಕೊಂಡು ಮರುದಿನ ಖರೀದಿಸಲಾಗುತ್ತದೆ.

ಸರ್ಕಾರವೇ ರಾಜ್ಯದ ಹಲವು ಮಾರುಕಟ್ಟೆ, ಪ್ರದೇಶಗಳನ್ನು ಎ,ಬಿ,ಸಿ ಎಂದು ವಿಂಗಡಣೆ ಮಾಡಿ ಪ್ರದೇಶಕ್ಕೆ ಅನುಸಾರವಾಗಿ ಡೀನಿಯರ್ ಗ್ರೇಡ್‌ನ ಗುಣಮಟ್ಟದ ಆಧಾರದಲ್ಲಿ ಕಚ್ಚಾ ರೇಷ್ಮೆ ನೂಲಿಗೆ ಬೆಲೆ ನಿಗದಿಪಡಿಸಲಾಗಿದೆ.

ಕಚ್ಚಾ ರೇಷ್ಮೆ ನೂಲಿನ ಖರೀದಿ ಪ್ರಕ್ರಿಯೆಗಾಗಿ ಅಧಿಕಾರಿಯನ್ನಾಗಿ ವೆಂಕಟೇಶ್ ಅವರನ್ನು ಕೆ.ಎಸ್‌.ಎಂ.ಬಿಯು ನೇಮಿಸಿದೆ. ಪ್ರತಿ ದಿನ ಕಚೇರಿ ಕೆಲಸದ ಅವಧಿಯಲ್ಲಿ ಕಚ್ಚಾ ರೇಷ್ಮೆ ನೂಲಿನ ಗುಣಮಟ್ಟದ ಪರೀಕ್ಷೆ, ಖರೀದಿ ಪ್ರಕ್ರಿಯೆ ನಡೆಯಲಿದೆ.

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version