Muttur, Sidlaghatta : ಹಾಲು ಉತ್ಪಾದನೆಯಲ್ಲಿ ಗಣನೀಯವಾಗಿ ಸಾಧನೆ ಮಾಡುತ್ತಿರುವ ಮಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುತ್ತೂರು ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಶಾಸಕ ಬಿ.ಎನ್.ರವಿಕುಮಾರ್ ಅವರು ನೀಡಿರುವ ಪ್ರೋತ್ಸಾಹಧನದಲ್ಲಿ, ಸಹಕಾರ ಸಂಘದ ಆಡಳಿತ ಮಂಡಳಿಯವರು, ಉತ್ಪಾದಕರಿಗೆ ಹಾಲಿನ ಕ್ಯಾನುಗಳನ್ನು ಖರೀದಿಸಿ ಹಂಚಿಕೆ ಮಾಡಿದರು.
ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಎಂ.ಜಿ.ರಮೇಶ್ ಮಾತನಾಡಿ, ಹಾಲು ಉತ್ಪಾದನೆಯ ಮೂಲಕ ನೂರಾರು ಕುಟುಂಬಗಳು ನಮ್ಮ ಗ್ರಾಮದಲ್ಲಿ ಜೀವನ ರೂಪಿಸಿಕೊಂಡಿದ್ದಾರೆ. ತಾಲ್ಲೂಕಿನಲ್ಲಿ ಹೆಚ್ಚು ಹಾಲು ಉತ್ಪಾದನೆ ಮಾಡುವ ಡೈರಿಯನ್ನಾಗಿ ಮಾಡಲು ನಾವು ಗುರಿಯನ್ನು ಹೊಂದಿದ್ದೇವೆ. ಈ ನಿಟ್ಟಿನಲ್ಲಿ ಉತ್ಪಾದಕರನ್ನು ಪ್ರೋತ್ಸಾಹ ಮಾಡುತ್ತಿದ್ದೇವೆ. ಇದರ ಭಾಗವಾಗಿ, ಶಾಸಕ ಬಿ.ಎನ್.ರವಿಕುಮಾರ್ ಅವರು ನೀಡಿರುವ ಪ್ರೋತ್ಸಾಹಧನವನ್ನು ಉತ್ಪಾದಕರಿಗೆ ಹಂಚಿಕೆ ಮಾಡುತ್ತಿದ್ದೇವೆ. ಇದರಿಂದ ಉತ್ಪಾದಕರಿಗೆ ಉತ್ತೇಜನವಾಗುವುದರ ಜೊತೆಗೆ, ಸೌಲಭ್ಯಗಳನ್ನು ಸದ್ಭಳಕೆ ಮಾಡಿಕೊಳ್ಳಲಿದ್ದಾರೆ. ಇದರ ಜೊತೆಗೆ ಹಾಲು ಒಕ್ಕೂಟದಿಂದ ಸಿಗುವಂತಹ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಿಕೊಡುತ್ತಿದ್ದೇವೆ ಎಂದರು.
ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಬೈರೇಗೌಡ ಮಾತನಾಡಿ, ಕೃಷಿ, ತೋಟಗಾರಿಕೆಗಳನ್ನು ಮಾಡಿಕೊಂಡು ಜೀವನ ನಡೆಸುವುದು ತುಂಬಾ ಕಷ್ಟಕರವಾದ ಪರಿಸ್ಥಿತಿಯಲ್ಲಿದ್ದೇವೆ. ಈ ನಿಟ್ಟಿನಲ್ಲಿ, ರೈತರಿಗೆ ವರದಾನವಾಗಿರುವುದು ರೇಷ್ಮೆ ಮತ್ತು ಹೈನುಗಾರಿಕೆ. ದಾಳಿಂಬೆ, ಹೂವಿನ ಬೆಳೆಗಳು ಬಂದ ನಂತರ, ರೇಷ್ಮೆ ಬೆಳೆಗಳಿಗೂ ಕಂಟಕವಾಗಿದ್ದು, ಹೈನುಗಾರಿಕೆಯಿಂದ ಜೀವನ ನಿರ್ವಹಣೆ ಮಾಡುವಂತಾಗಿದ್ದು, ಪ್ರತಿಯೊಬ್ಬ ಉತ್ಪಾದಕ, ಗುಣಮಟ್ಟದ ಹಾಲು ಉತ್ಪಾದನೆ ಮಾಡಿದಾಗ ಮಾತ್ರವೇ ಸಂಘವು ಅಭಿವೃದ್ಧಿಯತ್ತ ಸಾಗುತ್ತದೆ. ಉತ್ಪಾದಕರ ಹಿತ ಕಾಪಾಡಲು ಸಾಧ್ಯವಾಗುತ್ತದೆ ಎಂದರು.
ಪಿ.ಎಲ್.ಡಿ.ಬ್ಯಾಂಕ್ ನಿರ್ದೇಶಕ ಸುರೇಶ್, ಮುಖಂಡ ಎಂ.ಎಸ್.ಮಂಜುನಾಥ್, ಎಂ.ಕೆ.ರೆಡ್ಡಿ, ಮುತ್ತೂರು ಹಾಲು ಉತ್ಪಾದಕರ ಸಹಕಾರ ಸಂಘದ ಉಪಾಧ್ಯಕ್ಷೆ ವೆಂಕಟಲಕ್ಷ್ಮಮ್ಮ, ನಿರ್ದೇಶಕರಾದ ಮುನಿಕೃಷ್ಣಪ್ಪ, ಎಂ.ಕೆ.ಪ್ರದೀಪ್, ಪಿ.ಕೆಂಪೇಗೌಡ, ಎಂ.ಸಿ.ವೀರೇಗೌಡ, ಎಂ.ಬಿ.ರವಿ, ಪಿ.ಎಸ್.ಸೊಣ್ಣೇಗೌಡ, ಎಂ.ಎನ್.ಮಂಜುನಾಥ್, ಶೈಲಜಾ, ಎಂ.ಆರ್.ವೆಂಕಟಾಚಲಪತಿ, ಮುನಿಶಾಮಪ್ಪ, ಟಿ.ಅಣ್ಣಯಪ್ಪ, ಗ್ರಾ.ಪಂ.ಮಾಜಿ ಉಪಾಧ್ಯಕ್ಷೆ ಪವಿತ್ರಾದೇವರಾಜ್, ಮಮತಾನವೀನ್, ಡಿ.ಎಂ.ದೇವರಾಜ್, ಕೆ.ರಮೇಶ್, ಲಕ್ಷ್ಮೀನಾರಾಯಣ, ಬೈರೇಗೌಡ, ಪ್ರಕಾಶ್.ಡಿ, ಎಸ್.ವಿ.ನಾರಾಯಣಸ್ವಾಮಿ, ಶ್ರೀಧರ್, ಎಸ್.ವಿ.ರಾಜಣ್ಣ, ಪ್ರಶಾಂತ್, ಬ್ಯಾಂಕ್ ದೇವರಾಜ್, ರಾಮಾಂಜಿ, ಲೋಕೇಶ್, ದೇವರಾಜ್(ರಾಮು), ಎನ್.ಮುನಿಯಪ್ಪ, ಮುನಿರಾಜು, ಕಾರ್ಯನಿರ್ವಾಹಕ ಅಧಿಕಾರಿ ಜಿ.ಪಾರ್ಥಸಾರಥಿ, ಹಾಲು ಉತ್ಪಾದಕರು, ಹಾಗೂ ಗ್ರಾಮಸ್ಥರು, ಸಿಬ್ಬಂದಿ ಹಾಜರಿದ್ದರು.








