Home News ರಾಷ್ಟ್ರೀಯ ಸಾಧನಾ ಸಮೀಕ್ಷೆ ಪರೀಕ್ಷೆಗೆ 1000 ವಿದ್ಯಾರ್ಥಿಗಳು ಭಾಗಿ

ರಾಷ್ಟ್ರೀಯ ಸಾಧನಾ ಸಮೀಕ್ಷೆ ಪರೀಕ್ಷೆಗೆ 1000 ವಿದ್ಯಾರ್ಥಿಗಳು ಭಾಗಿ

0
Sidlaghatta National Exam Children

 ಶಿಕ್ಷಣ ಇಲಾಖೆಯಿಂದ ಪ್ರತಿ ವರ್ಷವೂ ನಡೆಯುವ ರಾಷ್ಟ್ರೀಯ ಸಾಧನಾ ಸಮೀಕ್ಷೆ ಪರೀಕ್ಷೆಯು ಶಿಡ್ಲಘಟ್ಟ ತಾಲ್ಲೂಕಿನ 35 ಶಾಲೆಗಳಲ್ಲಿ ನಡೆದಿದ್ದು ಒಟ್ಟು 1000 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಭಾಗವಹಿಸಿದ್ದರು.

ವಿದ್ಯಾರ್ಥಿಗಳ ಬೌದ್ಧಿಕ ಸಾಮರ್ಥ್ಯವನ್ನು ಅಳೆಯುವ ಸಾಧನಾ ಸಮೀಕ್ಷೆ ಪರೀಕ್ಷೆಯನ್ನು ಶಿಕ್ಷಣ ಇಲಾಖೆಯು ರಾಷ್ಟ್ರಾದ್ಯಂತ ನಡೆಸಿದೆ. ಶಿಡ್ಲಘಟ್ಟದಲ್ಲಿನ 15 ಸರ್ಕಾರಿ, 8 ಅನುದಾನಿತ ಹಾಗೂ 12 ಅನುದಾನರಹಿತ ಶಾಲೆಗಳಲ್ಲಿ ನಾಸ್ ಪರೀಕ್ಷಾ ಕೇಂದ್ರಗಳನ್ನು ತೆರೆದಿದ್ದು ಒಟ್ಟು 1000 ವಿದ್ಯಾರ್ಥಿಗಳು ಸಾಧನಾ ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದರು.

 3,5,8 ಹಾಗೂ 10ನೇ ತರಗತಿ ವಿದ್ಯಾರ್ಥಿಗಳಿಗೆ ನಡೆಯುವ ಈ ಸಾಧನಾ ಸಮೀಕ್ಷೆಯ ಪರೀಕ್ಷಾ ಕೇಂದ್ರಗಳಿಗೆ ಸಾಮಾನ್ಯ ಪರೀಕ್ಷೆಯಂತೆ ಮೇಲ್ವಿಚಾರಕರನ್ನು ನೇಮಿಸಲಾಗಿತ್ತು.

ವಿದ್ಯಾರ್ಥಿಗಳ ಬೌತ್ಥಿಕ ಮಟ್ಟವನ್ನು ಅಳೆಯಲು ಈ ಸಮೀಕ್ಷೆ ನೆರವಾಗಲಿದ್ದು ಪರೀಕ್ಷೆ, ಬೋಧನೆ, ಪಠ್ಯಕ್ರಮ ಇನ್ನಿತರೆ ಬದಲಾವಣೆಗಳಿಗೆ ಈ ಸಮೀಕ್ಷೆ ನೆರವಾಗಲಿದೆ. ಕ್ಷೇತ್ರ ಶಿಕ್ಷಣಾಧಿಕಾರಿ ಆಂಜನೇಯ ಅವರು ತಾಲ್ಲೂಕಿನಲ್ಲಿ ನಡೆದ ನಾಸ್ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version