Home News ನೇತಾಜಿ ಸುಭಾಷ್ ಚಂದ್ರ ಬೋಸ್ ರವರ ಜನ್ಮದಿನಾಚರಣೆ

ನೇತಾಜಿ ಸುಭಾಷ್ ಚಂದ್ರ ಬೋಸ್ ರವರ ಜನ್ಮದಿನಾಚರಣೆ

0
Sidlaghatta Netaji subhash chandra bose Birth Anniversary

ಶಿಡ್ಲಘಟ್ಟ ನಗರದ ಟಿ.ಬಿ.ರಸ್ತೆಯಲ್ಲಿ ಭಾನುವಾರ ಶಿಡ್ಲಘಟ್ಟ ಬಿಜೆಪಿ ನಗರ ಮಂಡಲ ವತಿಯಿಂದ ನೇತಾಜಿ ಸುಭಾಷ್ ಚಂದ್ರ ಬೋಸ್ ರವರ 125 ಜನ್ಮದಿನಾಚರಣೆಯನ್ನು ಆಚರಿಸಿ ಬಿಜೆಪಿ ನಗರ ಘಟಕದ ಪ್ರಧಾನ ಕಾರ್ಯದರ್ಶಿ ಎಂ.ಮುಖೇಶ್ ಮಾತನಾಡಿದರು.

ನೇತಾಜಿ ಅವರ ಜೀವನ, ಅವರ ಕಾರ್ಯ, ಅವರ ಪ್ರತಿ ನಿರ್ಧಾರ ಎಲ್ಲರಿಗೂ ಪ್ರೇರಣೆ. ಅವರ ತ್ಯಾಗವನ್ನು ಪೀಳಿಗೆಯಿಂದ ಪೀಳಿಗೆಗೆ ಕೊಂಡೊಯ್ಯುವ ಸಲುವಾಗಿ ಸರ್ಕಾರವು ನೇತಾಜಿ ಸುಭಾಷ್‌ ಚಂದ್ರ ಬೋಸ್‌ ಅವರ ಜನ್ಮದಿನವನ್ನು ಪರಾಕ್ರಮ ದಿನವನ್ನಾಗಿ ಆಚರಿಸುತ್ತಿದೆ ಎಂದು ಅವರು ತಿಳಿಸಿದರು.

ಇಂದು ಇಡೀ ಭಾರತ ದೇಶಕ್ಕೆ ಹೆಮ್ಮೆಯ ದಿನ. ಸುಭಾಷ್ ಚಂದ್ರ ಬೋಸ್ ಬ್ರಿಟಿಷರ ವಿರುದ್ದ ಸೈನ್ಯ ಕಟ್ಟಿದ ಅಪ್ರತಿಮ ನಾಯಕ. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಸಂಘಟನೆ ಮಾಡುವಲ್ಲಿ ಅವರ ಪಾತ್ರ ದೊಡ್ಡದು. ಆಜಾದ್ ಹಿಂದ್ ಫೌಜ್‌ನಲ್ಲಿ 60 ಸಾವಿರ ಯುವಕರನ್ನು ತೊಡಗಿಸಿಕೊಂಡರು. ಸ್ವಾತಂತ್ರ್ಯಕ್ಕೆ ಭದ್ರ ಬುನಾದಿ ಹಾಕಿದರು. ವೀರಪರಾಕ್ರಮಿಯಾದ ಸುಭಾಷ್ ಚಂದ್ರ ಬೋಸ್ ಅವರು ನಮಗೆ ಪ್ರೇರಣಾಶಕ್ತಿ ಎಂದು ಹೇಳಿದರು.

 ಬಿಜೆಪಿ ನಗರ ಮಂಡಲ ಉಪಾಧ್ಯಕ್ಷ ಮಧುಸೂದನ್, ಮಂಜುಳಮ್ಮ, ಮಂಜು ಕಿರಣ್,  ದೇವರಾಜ್,  ಪ್ರಕಾಶ್, ರಘುನಾಥ್, ಭಾಸ್ಕರ್, ಮೋಹನ್, ಶ್ರೀರಾಮ್, ಬಿ.ಸಿ .ಲೋಕೇಶ್, ಸಿ .ಮಂಜು,  ತ್ರಿವೇಣಿ, ಮೊಹಮ್ಮದ್ ಅಮಾನುಲ್ಲಾ, ಕದಿರ್, ನವೀನ್, ಸುನಿಲ್, ನರಸಿಂಹಮೂರ್ತಿ ಹಾಜರಿದ್ದರು. 

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.

error: Content is protected !!
Exit mobile version