
Sidlaghatta : ಗಾಂಜಾ ಸಾಗಾಣಿಕೆ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ಚಿಂತಾಮಣಿಯ ಕೀರ್ತಿನಗರದ ಮೂಲದ, ಹೊಸಕೋಟೆ ತಾಲ್ಲೂಕಿನ ಕಟ್ಟಿಗೆನಹಳ್ಳಿಯ ನಿವಾಸಿ ಅರ್ಬಾಜ್ ಖಾನ್ 25 ವರ್ಷ ಎಂಬಾತನನ್ನು ಸುಗಟೂರು ಗ್ರಾಮದ ಆಂಜನೇಯಸ್ವಾಮಿ ದೇವಾಲಯದ ಮುಂಭಾಗದ ರಸ್ತೆಯಲ್ಲಿ ವಶಕ್ಕೆ ಪಡೆದಿರುವ ಗ್ರಾಮಾಂತರ ಠಾಣೆ ಪೊಲೀಸರು. ದೂರು ದಾಖಲಿಸಿಕೊಂಡು, ಮತ್ತೊಬ್ಬ ಆರೋಪಿಗಾಗಿ ಬಲೆ ಬೀಸಿದ್ದಾರೆ.
ಇಬ್ಬರು ವ್ಯಕ್ತಿಗಳು ಸ್ಕೂಟಿ ದ್ವಿಚಕ್ರ ವಾಹನದಲ್ಲಿ, ಗಾಂಜಾ ಮಾರಾಟ ಮಾಡಲು ಗಾಂಜಾವನ್ನು ತೆಗೆದುಕೊಂಡು ಸುಗಟೂರು ಗ್ರಾಮದ ಕಡೆಯಿಂದ ಜಂಗಮಕೋಟೆಗೆ ಬರುತ್ತಿರುವುದಾಗಿ ಬಂದ ಖಚಿತ ಮಾಹಿತಿ ಮೇರೆಗೆ, ದಾಳಿ ನಡೆಸಿರುವ ಪೊಲೀಸರು, 80 ಸಾವಿರ ರೂ ಬೆಲೆ ಬಾಳುವ 2 ಕೆ.ಜಿ. ಗಾಂಜಾವನ್ನು ವಶಕ್ಕೆ ಪಡೆದುಕೊಂಡು, ತಪ್ಪಿಸಿಕೊಂಡಿರುವ ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಪಿ.ಎಸ್.ಐ ಸತೀಶ.ಕೆ ಸಿಬ್ಬಂದಿಗಳಾದ ಸಿ.ಹೆಚ್.ಸಿ-117 ಚನ್ನಕೇಶವ, ಸಿ.ಹೆಚ್.ಸಿ-174 ನಂದಕುಮಾರ್, ಸಿ.ಹೆಚ್.ಸಿ-90 ರವೀಂದ್ರಸಿ, ಸಿ.ಹೆಚ್.ಸಿ-132 ಶಿವಣ್ಣ.ವಿ.ಎಸ್, ಸಿ.ಪಿ.ಸಿ-91 ಮಂಜುನಾಥ, ಸಿ.ಪಿ.ಸಿ-428 ಹರೀಶ್.ಎಂ. ಸಿ.ಪಿ.ಸಿ-236 ಸಂಜಯ್ ಕುಮಾರ್, ಎ.ಪಿ.ಸಿ-67 ಮಂಜುನಾಥ, ಎ.ಪಿ.ಸಿ-64 ಚೌಡಪ್ಪ ಕಾರ‍್ಯಾಚರಣೆಯಲ್ಲಿ ಭಾಗಿಯಾಗಿದ್ದರು.