Sidlaghatta : ದ್ವಿತೀಯ ಪಿಯುಸಿ ಮರು ಮೌಲ್ಯಮಾಪನದಲ್ಲಿ ವಾಣಿಜ್ಯ ವಿಭಾಗದಲ್ಲಿ ನಗರದ ಅಕ್ಷರ ಪಿಯು ಕಾಲೇಜಿನ ಜೆ.ಚೈತ್ರಶ್ರೀ (598-ಶೇ 99.6) ಅಂಕ ಪಡೆದು ತಾಲ್ಲೂಕಿಗೆ ಮೊದಲ ಸ್ಥಾನ ಗಳಿಸಿದ್ದಲ್ಲದೆ, ಜಿಲ್ಲೆಗೆ ಮೊದಲ ಸ್ಥಾನ ಹಾಗೂ ರಾಜ್ಯದಲ್ಲಿ 3 ನೇ ಸ್ಥಾನ ತನ್ನದಾಗಿಸಿಕೊಂಡಿದ್ದಾಳೆ.
ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಜೆ.ಚೈತ್ರಶ್ರೀ 593 ಅಂಕಗಳನ್ನು ಗಳಿಸಿದ್ದು, ಕನ್ನಡ, ಇಂಗ್ಲಿಷ್ ಹೊರತುಪಡಿಸಿ ಉಳಿದ ನಾಲ್ಕೂ ವಿಷಯಗಳಲ್ಲಿ 100 ಕ್ಕೆ 100 ಅಂಕ್ಗಳನ್ನು ಗಳಿಸಿದ್ದಳು. ಇದೀಗ ಮರುಮೌಲ್ಯಮಾಪನದಲ್ಲಿ 5 ಅಂಕಗಳು ಹೆಚ್ಚಾಗಿದ್ದು, ರಾಜ್ಯಕ್ಕೆ 3 ನೇ ಸ್ಥಾನದಲ್ಲಿದ್ದಾಳೆ








