ರೇಷ್ಮೆ‌ ನಗರವನ್ನು ಪರಿಸರ ಸ್ನೇಹಿ ನಗರವನ್ನಾಗಿಸಲು ಕಾಯಕಲ್ಪ

- Advertisement -
- Advertisement -

ರೇಷ್ಮೆ‌ ನಗರವೆಂದು ಖ್ಯಾತಿ ಹೊಂದಿರುವ ಶಿಡ್ಲಘಟ್ಟವನ್ನು ಸ್ವಚ್ಛ ಮತ್ತು ಪರಿಸರ ಸ್ನೇಹಿ ನಗರವನ್ನಾಗಿಸಲು ನಗರಸಭೆಯ ಪೌರಾಯುಕ್ತ ಶ್ರೀಕಾಂತ್ ಮುಂದಾಗಿದ್ದಾರೆ.

 ನಗರಸಭೆಯ ಅಧ್ಯಕ್ಷೆ ಸುಮಿತ್ರಾ ರಮೇಶ್, ಉಪಾಧ್ಯಕ್ಷ ಬಿ.ಅಫ್ಸರ್ ಪಾಷಾ ಹಾಗೂ ಎಲ್ಲಾ ನಗರಸಭಾ ಸದಸ್ಯರ ಸಹಕಾರದಿಂದ ನಗರದ ಹೊರವಲಯದಲ್ಲಿರುವ ಹಿತ್ತಲಹಳ್ಳಿಯ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಕಾಯಕಲ್ಪ ನೀಡಲು ಅವರು ಸಜ್ಜಾಗಿದ್ದಾರೆ.

 ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಸುಮಾರು ವರ್ಷಗಳಿಂದ ನಿರುಪಯುಕ್ತವಾಗಿ ಬಿದ್ದಿದ್ದ ಯಂತ್ರಗಳನ್ನು ಬಳಕೆ ಮಾಡಲು ಸಿದ್ಧತೆಯನ್ನು ಕೈಗೊಳ್ಳಲಾಗಿದೆ. ಜೊತೆಗೆ ಘಟಕದಲ್ಲಿ ವೈಜ್ಞಾನಿಕವಾಗಿ ಒಣ ಮತ್ತು ಹಸಿ ಕಸವನ್ನು ಪ್ರತ್ಯೇಕವಾಗಿ ವಿಂಗಡಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

  “ನಗರಸಭೆಯ ವ್ಯಾಪ್ತಿಯಲ್ಲಿ ಹಿಂದೆ ಅವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡಿ ತುಂಬಿಸಿದ್ದ ತ್ಯಾಜ್ಯವನ್ನೆಲ್ಲಾ ಸ್ವಚ್ಛಗೊಳಿಸಿ, ಪ್ರತಿ ಮನೆಯಿಂದ ಒಣ ಮತ್ತು ಹಸಿ ಕಸವನ್ನು ಪ್ರತ್ಯೇಕವಾಗಿ ವಿಂಗಡಿಸಲು ಈಗಾಗಲೇ ನಗರಸಭೆಯಿಂದ ಡಸ್ಟ್‌ಬಿನ್‌ಗಳನ್ನು ಸಹ ವಿತರಿಸಲಾಗಿದೆ.

 ನಗರೋತ್ಥಾನ ಯೋಜನೆಯಡಿ‌ ಬಂದಿರುವ ವಿಶೇಷ ಅನುದಾನದಲ್ಲಿ ಸುಮಾರು 34 ಲಕ್ಷ ರೂಗಳ ವೆಚ್ಚದಲ್ಲಿ ಘಟಕವನ್ನು ಕಾಯಕಲ್ಪ ಮಾಡಲು ಸಿದ್ದತೆ ಮಾಡಿಕೊಳ್ಳಲಾಗಿದೆ. ನಗರಸಭೆಯ ವ್ಯಾಪ್ತಿಯಲ್ಲಿರುವ ಪ್ರತಿ ಮನೆಗಳಿಂದ ಒಣ ಮತ್ತು ಹಸಿ ಕಸವನ್ನು ಪ್ರತ್ಯೇಕವಾಗಿ ಸಂಗ್ರಹಮಾಡಿ ಇಟ್ಟುಕೊಳ್ಳಲು ಜನಜಾಗೃತಿ ಮೂಡಿಸಲು ನಗರಸಭೆ ಆಡಳಿತ ಸಜ್ಜಾಗಿದೆ” ಎಂದು ನಗರಸಭೆಯ ಪೌರಾಯುಕ್ತ ಶ್ರೀಕಾಂತ್ ತಿಳಿಸಿದ್ದಾರೆ.

For Daily Updates

WhatsApp 'HI' to 7406303366

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -
Sidlaghatta News Desk
Sidlaghatta News Deskhttp://www.sidlaghatta.com
The editorial desk of Sidlaghatta.com (Namma Shidlaghatta), covering civic affairs, agriculture, silk trade, and local government news for Sidlaghatta taluk, Karnataka.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!