Sorakayalahalli, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಸೊರಕಾಯಲಹಳ್ಳಿಯಲ್ಲಿ ಗ್ರಾಮದ ಏಳು ದೇವತೆಯರಾದದ ಗಂಗಮ್ಮ, ನೆರಡಮ್ಮ, ಸಪ್ಪಲಮ್ಮ, ಪೂಜಮ್ಮ, ಅಷ್ಟಮೂರ್ತಮ್ಮ, ಚೌಡೇಶ್ವರಿ ದೇವಿ, ಕಾಳಿಕಾಂಭ ದೇವಿಯನ್ನು ಆಶಾಡ ಮಾಸದ ಪ್ರಯುಕ್ತವಾಗಿ ವಿಶೇಷ ಹೂವಿನ ಅಲಂಕಾರ ಮಾಡಿ ಪೂಜೆ ಸಲ್ಲಿಸಿ, ಮಹಿಳೆಯರು ತಲೆಯ ಮೇಲೆ ಕಳಶವನ್ನು ಹೊತ್ತು ಉತ್ಸವ ದೇವರುಗಳ ಜೊತೆಯಲ್ಲಿ ಮೆರವಣಿಗೆ ನಡೆಸಿದರು.
ಏಳು ಗ್ರಾಮ ದೇವತೆಗಳಿಗೆ ಪ್ರತಿ ಮನೆ ಮನೆಯಿಂದ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸಲಾಯಿತು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಗ್ರಾಮ ದೇವತೆಗಳ ಮೂರ್ತಿಗಳನ್ನು ಟ್ರಾಕ್ಟರ್ ಗಳಲ್ಲಿ ಮೆರವಣಿಗೆ ಮಾಡಲಾಯಿತು. ಗ್ರಾಮದ ಮಹಿಳೆಯರು ದೇವರಿಗೆ ಕಳಶದೊಂದಿಗೆ ಪೂಜೆ ಸಲ್ಲಿಸಿದರು. ಹಳ್ಳಿಯಲ್ಲಿ ಅನ್ನ ಸಂತರ್ಪಣೆಯನ್ನು ಆಯೋಜನೆ ಮಾಡಲಾಗಿತ್ತು.
ಈ ಸಂದರ್ಭದಲ್ಲಿ ಸೊರಕಾಯಲಹಳ್ಳಿ ಗ್ರಾಮದ ಮುಖಂಡರು,ಯುವಕರು, ಗ್ರಾಮಸ್ಥರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು, ಭಕ್ತಾದಿಗಳು ಹಾಜರಿದ್ದರು.