ತ್ರಿವಿಧ ದಾಸೋಹಿ ಶ್ರೀಶಿವಕುಮಾರ ಸ್ವಾಮಿಗಳ 119ನೇ ಜಯಂತಿ ಆಚರಣೆ

- Advertisement -
- Advertisement -

Sidlaghatta : ತ್ರಿವಿಧ ದಾಸೋಹಿ ಶ್ರೀಶಿವಕುಮಾರಸ್ವಾಮಿಗಳ 119ನೇ ಜಯಂತಿಯನ್ನು ನಗರದ ಶ್ರೀಶಿವಕುಮಾಸ್ವಾಮಿ ವೃತ್ತ(ಹೂವಿನ ವೃತ್ತ)ದಲ್ಲಿ ಬುಧವಾರ ಆಚರಿಸಲಾಯಿತು.

ನಗರದ ಶಿವಕುಮಾರಸ್ವಾಮಿ ವೃತ್ತದಲ್ಲಿನ ಶ್ರೀನಗರೇಶ್ವರಸ್ವಾಮಿ ದೇವಾಲಯದ ಆವರಣದಲ್ಲಿ ಶ್ರೀಶಿವಕುಮಾರಸ್ವಾಮಿಗಳ ಭಾವಚಿತ್ರವಿಟ್ಟು ಪುಷ್ಪ ನಮನ ಸಲ್ಲಿಸಿ ಕೈ ಮುಗಿದು ನಮಿಸಲಾಯಿತು.

ನಗರ್ತ ಮಂಡಳಿಯ ಅಧ್ಯಕ್ಷ ಕೆ.ಆರ್.ಶಿವಶಂಕರ್ ಮಾತನಾಡಿ, ನಡೆದಾಡುವ ದೇವರು ಶ್ರೀಶಿವಕುಮಾರ ಸ್ವಾಮಿಗಳ ಶಿಕ್ಷಣ, ಅನ್ನ ದಾಸೋಹ ಹಾಗೂ ಸಮಾಜ ಸೇವೆಯ ಮೂಲಕ ಎಲ್ಲರ ಮನೆ ಮಾತಾಗಿದ್ದು ಅಸಂಖ್ಯಾತ ಮಕ್ಕಳ ಬದುಕಿಗೆ ದಾರಿ ದೀಪವಾಗಿದ್ದಾರೆ.

ಅವರ ಸೇವೆಯಷ್ಟೆ ಅವರ ಶಿಸ್ತು ಶ್ರದ್ಧೆ ಸಮಯ ಪ್ರಜ್ಞೆ ಮತ್ತು ಆಧ್ಯಾತ್ಮಿಕತೆಯು ನಮ್ಮೆಲ್ಲರಿಗೂ ಇಂದಿಗೂ ಮುಂದೆಯೂ ಮಾದರಿಯೂ ಪ್ರೇರಣೆಯೂ ಆಗಿರುತ್ತದೆ ಎಂದು ಅಭಿಪ್ರಾಯಪಟ್ಟರು.

ಅಕ್ಕಮಹಾದೇವಿಯವರ ಭಕ್ತಿ ಹಾಗೂ ತತ್ವಗಳು ಇಂದಿಗೂ ಸಮಾಜಕ್ಕೆ ಮಾರ್ಗದರ್ಶಿಯಾಗಿವೆ ಅವರ ಆದರ್ಶಗಳು ಇಂದಿನ ಯುವಕರಿಗೆ ಪ್ರೇರಣೆಯಾಗಬೇಕು ಎಂದು ಅಭಿಪ್ರಾಯಪಟ್ಟರು.

ನಗರ್ತ ಯುವಕ ಮಂಡಳಿ ಹಾಗೂ ಮಹಿಳಾ ಮಂಡಳಿ ಪದಾಧಿಕಾರಿಗಳು ಮತ್ತು ಸದಸ್ಯರು ಹಾಗೂ ಶ್ರೀಗಳ ಭಕ್ತರು ಹೆಚ್ಚಿನ ಸಂಖೆಯಯಲ್ಲಿ ಭಾಗವಹಿಸಿ ಶ್ರೀಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪನಮನ ಸಲ್ಲಿಸಿ ಕೈ ಮುಗಿದು ನಮಿಸಿದರು. ಸಾಮೂಹಿಕವಾಗಿ ಅನ್ನ ಸಂತರ್ಪಣೆ ನಡೆಸಿಕೊಟ್ಟರು.

Sidlaghatta WhatsApp Channel Group

For Daily Updates WhatsApp ‘HI’ to 7406303366

For Daily Updates

WhatsApp 'HI' to 7406303366

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!