Home News ರೇಷ್ಮೆ ಕೃಷಿಕರು ಹಾಗೂ ರೀಲರುಗಳ ಸಮಸ್ಯೆಗಳಿಗೆ ಸ್ಪಂದಿಸಿದ ಸಚಿವರು

ರೇಷ್ಮೆ ಕೃಷಿಕರು ಹಾಗೂ ರೀಲರುಗಳ ಸಮಸ್ಯೆಗಳಿಗೆ ಸ್ಪಂದಿಸಿದ ಸಚಿವರು

0
Minister responds to Silk Farmers and Reelers issues

Sidlaghatta : ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸದಸ್ಯರು ರೇಷ್ಮೆ ಮತ್ತು ಪಶು ಸಂಗೋಪನಾ ಸಚಿವ ಕೆ. ವೆಂಕಟೇಶ್ ಅವರನ್ನು ಮಂಗಳವಾರ ಭೇಟಿ ಮಾಡಿ ರೇಷ್ಮೆ ಕೃಷಿಕರು ಹಾಗೂ ರೀಲರುಗಳ ಸಮಸ್ಯೆಗಳನ್ನು ವಿವರಿಸಿದರು.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಭೈರೇಗೌಡರ ನೇತೃತ್ವದಲ್ಲಿ ಹೋಗಿದ್ದ ರೈತ ಸಂಘದ ಸದಸ್ಯರು, ರೇಷ್ಮೆ ಆಯುಕ್ತ ರಾಜೇಶ್ ಗೌಡ ಮತ್ತು ಉಪ ಆಯುಕ್ತ ನಾಗಭೂಷಣ್ ರವರನ್ನು ಸಹ ಭೇಟಿ ಮಾಡಿ ಮನವಿ ನೀಡಿದರು.

ರೇಷ್ಮೆ ಗೂಡು ಮತ್ತು ರೇಷ್ಮೆ ನೂಲಿನ ಧಾರಣೆ ಕುಸಿತದ ಬಗ್ಗೆ ಕೂಲಂಕುಶವಾಗಿ ವಿವರಿಸಿದ ರೈತ ಸಂಘದ ಸದಸ್ಯರು, ರೈತರನ್ನು ಈ ಸಂಕಷ್ಟದಿಂದ ಪಾರು ಮಾಡಬೇಕೆಂದು ಮನವಿ ಮಾಡಿದರು.

ರೇಷ್ಮೆ ಮತ್ತು ಪಶು ಸಂಗೋಪನಾ ಸಚಿವ ಕೆ. ವೆಂಕಟೇಶ್ ಅವರು ರೈತರ ಮನವಿಗೆ ಕೂಡಲೇ ಸ್ಪಂದಿಸಿ, 10 ಕೋಟಿ ರೂಗಳನ್ನು ಕೆ ಎಸ್ ಎಮ್ ಬಿ ಗೆ ಮಂಜೂರು ಮಾಡಿ, ರೇಷ್ಮೆ ಖರೀದಿಯನ್ನು ಪ್ರಾರಂಭಿಸಿ ರೈತರು ಮತ್ತು ರೀಲರುಗಳನ್ನು ಬೆಲೆ ಕುಸಿತದ ಸಂಕಷ್ಟದಿಂದ ಪಾರು ಮಾಡಲು ಅಧಿಕಾರಿಗಳಿಗೆ ಸೂಚಿಸಿದರು.

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version