ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದ ಚುನಾವಣೆ ನವೆಂಬರ್ 22ಕ್ಕೆ: 12 ಸ್ಥಾನಗಳಿಗೆ ಮತದಾನ

Sidlaghatta : ಶಿಡ್ಲಘಟ್ಟ ನಗರದ ಟೌನ್ ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದ ಆಡಳಿತ ಮಂಡಳಿಯ 12 ನಿರ್ದೇಶಕ ಸ್ಥಾನಗಳಿಗೆ ನವೆಂಬರ್ 22ರಂದು ಚುನಾವಣೆ ನಡೆಯಲಿದೆ ಎಂದು ಚುನಾವಣಾಧಿಕಾರಿ ಎನ್. ವನಿತ ತಿಳಿಸಿದ್ದಾರೆ.
ನಗರದ ಕೋಟೆ ಸರ್ಕಾರಿ ಬಾಲಕರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತದಾನ ನಡೆಯಲಿದ್ದು, ಸಾಲಗಾರರಲ್ಲದ ಕ್ಷೇತ್ರದಿಂದ ಒಂದು, ಠೇವಣಿದಾರರ ಕ್ಷೇತ್ರದಿಂದ ಒಂದು ಹಾಗೂ ಸಾಲಗಾರರ ಕ್ಷೇತ್ರದಿಂದ 10 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.
ಸಾಲಗಾರರ ಕ್ಷೇತ್ರದ 10 ಸ್ಥಾನಗಳಲ್ಲಿ ಸಾಮಾನ್ಯ ವರ್ಗಕ್ಕೆ ನಾಲ್ಕು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ತಲಾ ಒಂದು, ಹಿಂದುಳಿದ ವರ್ಗದ ಪ್ರವರ್ಗ–ಎ ಮತ್ತು ಪ್ರವರ್ಗ–ಬಿಗೆ ತಲಾ ಒಂದು ಹಾಗೂ ಮಹಿಳೆಯರಿಗೆ ಎರಡು ಸ್ಥಾನಗಳು ಮೀಸಲಾಗಿವೆ.
ಚುನಾವಣಾ ವೇಳಾಪಟ್ಟಿ
ನವೆಂಬರ್ 12ರಿಂದ 14ರವರೆಗೆ ನಾಮಪತ್ರ ಸಲ್ಲಿಸಲು ಅವಕಾಶವಿದೆ. ನವೆಂಬರ್ 15ರಂದು ನಾಮಪತ್ರಗಳ ಪರಿಶೀಲನೆ ನಡೆಸಿ, ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಲಾಗುವುದು. ನಾಮಪತ್ರ ಹಿಂಪಡೆಯಲು ನವೆಂಬರ್ 16 ಕೊನೆಯ ದಿನವಾಗಿದೆ.

ನವೆಂಬರ್ 22ರಂದು ಮತದಾನ, ಮತಗಳ ಎಣಿಕೆ ಹಾಗೂ ಫಲಿತಾಂಶ ಘೋಷಣೆ ನಡೆಯಲಿದೆ ಎಂದು ಚುನಾವಣಾಧಿಕಾರಿ ತಿಳಿಸಿದ್ದಾರೆ.
ಈ ಕುರಿತು ಟೌನ್ ರೇಷ್ಮೆ ಬೆಳೆಗಾರರ ಸೇವಾ ಸಹಕಾರ ಸಂಘದ ವಾರ್ಷಿಕ ಮಹಾಸಭೆ ಹಾಗೂ ಎಸ್.ಎಫ್.ಸಿ.ಎಸ್ ಚುನಾವಣೆ ವರದಿಗಳನ್ನು ಓದಿ.

For Daily Updates WhatsApp ‘HI’ to 7406303366
Summary in English
Elections to the 12 director posts of the Sidlaghatta Town Silk Growers and Farmers Service Co-operative Society will be held on 22 November, returning officer N. Vanitha said. Voting will take place at the Kote Government Boys Higher Primary School. Of the 12 seats, one is from the non-borrowers constituency, one from the depositors constituency and ten from the borrowers constituency, which has four general seats, one each for Scheduled Caste, Scheduled Tribe, Backward Class Category-A and Category-B, and two for women. Nominations can be filed from 12 to 14 November, scrutiny and the list of candidates are on 15 November, and 16 November is the last day to withdraw. Polling, counting and the results are on 22 November.
Be a reporter
ಊರಿನ ಸುದ್ದಿ, ಫೋಟೋ ಕಳುಹಿಸಿ.
Send news



